Advertisement

ಹೊಸಪೇಟೆ- ಕೊಟ್ಟೂರು ಮಾರ್ಗದಲ್ಲಿರೈಲು ಆರಂಭಿಸಲು ಒತ್ತಾಯ

04:12 PM Jul 24, 2018 | |

ಹೊಸಪೇಟೆ: ಹೊಸಪೇಟೆ-ಕೊಟ್ಟೂರು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವಂತೆ ಒತ್ತಾಯಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ರೈಲ್ವೆ ನಿಲ್ದಾಣದ ಮುಖ್ಯಸ್ಥ ಉಮರ್‌ಬಾನಿ ಅವರ ಮೂಲಕ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಅವರಿಗೆ ಮನವಿ ಸಲ್ಲಿಸಿದರು.

Advertisement

ಹೊಸಪೇಟೆ ಕೊಟ್ಟೂರು ಬ್ರಾಡ್‌ಗೆಜ್‌ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ರೈಲು ಹಾಗೂ ಹೊಸಪೇಟೆ-ಬೆಂಗಳೂರು ನಡುವೆ ಇಂಟರ್‌ ಸಿಟಿ ರೈಲು ಆರಂಭಿಸಬೇಕು. ಹೊಸಪೇಟೆ ರೈಲು ನಿಲ್ದಾಣದಲ್ಲಿ ರೈಲ್ವೆ ಕೋಚ್‌ಗಳ ದುರಸ್ತಿ ಕಾರ್ಯಗಾರ ಸ್ಥಾಪಿಸಬೇಕು. ನೂತನ ಪ್ಯಾಸೆಂಜರ್‌ ರೈಲುಗಳ ಸಂಚಾರ ಆರಂಭಕ್ಕೆ ಅನುಕೂಲವಾಗುವಂತೆ ನಿಲ್ದಾಣದಲ್ಲಿ ಪ್ಯಾಸೆಂಜರ್‌ ಕೋಚ್‌ಗಳ ದುರಸ್ತಿ, ಸ್ವತ್ಛತೆ, ಹಾಗೂ ಪಿಟ್‌ಲೈನ್‌ ಕಾರ್ಯಗಾರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಪ್ರಸಿದ್ಧ ಯಾತ್ರಾ ಸ್ಥಳ ಹುಲಗಿಗೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಕೊಲ್ಲಾಪುರ-ಹೈದ್ರಾಬಾದ್‌ (ಮಣಗೂರು) (11303/304) ರೈಲು ಮುನಿರಾಬಾದ್‌ನಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು. ಕೊಲ್ಲಾಪುರ-ತಿರುಪತಿ, ಹರಿಪ್ರಿಯ ಎಕ್ಸ್‌ಪ್ರೆಸ್‌ ರೈಲು ಗಾಡಿಯಲ್ಲಿ ಹೊಸಪೇಟೆ-ಬಳ್ಳಾರಿಯಿಂದ ತಿರುಪತಿಗೆ ತೆರಳುವ ಪ್ರಯಾಣಿಕರಿಗೆ ಸದರಿ ರೈಲಿನಲ್ಲಿ ಪ್ರತ್ಯೇಕ ಹೆಚ್ಚುವರಿ ಸೀಟು (ಕೋಟಾ) ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ವಿಭಾಗೀಯ ರೈಲ್ವೆ ಸಲಹಾ ಸಮಿತಿ ಸದಸ್ಯ ಚಂದ್ರಕಾಂತ್‌ ಕಾಮತ್‌, ಪ್ರಹ್ಲಾದ ಸ್ವಾಮೀಜಿ, ಶ್ಯಾಮಪ್ಪ ಅಗೋಲಿ, ಟಿ.ಆರ್‌.ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಬಿ.ಜಹಂಗೀರ್‌, ಎಚ್‌.ಮಹೇಶ್‌, ಡಿ.ರಾಮಕೃಷ್ಣ, ಪಿ.ಪ್ರಭಾಕರ್‌, ರವಿಶಂಕರ ದೇವರ ಮನೆ, ಕೆ.ರಘವೇಂದ್ರ, ಇ.ಕುಮಾರಸ್ವಾಮಿ. ಇ.ಪ್ರಸಾದ್‌, ವೈ.ಶೇಖರ್‌, ಸಿದ್ದೇಶ್‌ ಉತ್ತಂಗಿ, ಪೀರನ್‌ ಸಾಬ್‌, ಎಲ್‌.ರಮೇಶ್‌ಲಮಾಣಿ, ಕುರುಳಿ ವಾಸಪ್ಪ, ಎಸ್‌.ಡಿ. ಏಕನಾಥ, ಜಿ.ವೀರೇಶಪ್ಪ, ಜಿ.ದೇವರೆಡ್ಡಿ, ಬಿ.ಶ್ರೀನಿವಾಸ್‌ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next