ಚಿಂತಾಮಣಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಿಯ ಉತ್ಪನ್ನಗಳನ್ನು ಬೇಡಿಕೆ ಮಾಡುವ ರೀತಿಯಲ್ಲಿ ಉತ್ಪಾ ದಿಸಿ ದಾಗ ನಮ್ಮ ರೈತರಿಗೆ ಒಳ್ಳೆಯ ಕೀರ್ತಿ ಲಭಿಸಲಿದೆಎಂದು ಶ್ರೀ ಅಮರನಾರಾಯಣ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ವ್ಯವಸ್ಥಾಪಕ ಬಸವರಾಜ್ ಗಿರಿಯಣ್ಣ ನುಡಿದರು.
ನಗರದ ಹೊರವಲಯದ ಮಾಡಿಕೆರೆ ಕ್ರಾಸ್‌ನಲ್ಲಿ ಅಮರನಾರಾಯಣ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 4ನೇ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಾವುಗಳು ಈಗಾಗಲೇ ಬೇರೆ ದೇಶಗಳಿಂದ ಹಲವು ಉತ್ಪನ್ನ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಆ ಉತ್ಪನ್ನ ಗಳು ನಮ್ಮಲ್ಲೇ ಉತ್ಪಾದನೆ ಮಾಡುವ ವಾತಾವರಣ ನಮ್ಮಲ್ಲಿಯೇ ಇದೆ. ಆದರೆ ಹಿಂದಿನ ಕಾಲದಲ್ಲಿ ಸಾವ ಯವ ಕೃಷಿ ಪದ್ಧತಿಯನ್ನು ನಮ್ಮ ಪೂರ್ವಿಕರು ಅಳವಡಿಸಿಕೊಂಡು ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದರು ಎಂದರು.
ಆರೋಗ್ಯಕರ ಬೆಳೆ: ಇಂದಿನ ಕಂಪ್ಯೂಟರ್ ಯುಗದಲ್ಲಿರೈತನ ಕೃಷಿ ಉಪಕರಣಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಪಾಟಾಗಿದ್ದು, ಅದಕ್ಕೆ ಅನುಗುಣವಾಗಿ ಇಂದಿನ ಕಾಲಕ್ಕೆ ತಕ್ಕಂತೆ ಬದಲಾವಣೆ ಉಂಟಾದಾಗ ಉತ್ತಮ ಬೆಳೆಗಳನ್ನು ಸಾವಯವ ಕೃಷಿಯಿಂದ ಪಡೆಯಬಹುದು. ರಾಸಾಯನಿಕ ಹಾಗೂ ಕ್ರಿಮಿನಾಶಕಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿದಾಗ ಭೂಮಿಯ ಸತ್ವ ಹೆಚ್ಚಾಗುವುದರೊಂದಿಗೆ ಉತ್ತಮ ಆರೋಗ್ಯಕರ ಬೆಳೆಯನ್ನು ಬೆಳೆಯಬಹುದಾಗಿದೆ ಎಂದರು.
ವರದಾನ: ಸಂಸ್ಥೆಯ ಅಧ್ಯಕ್ಷ ಮಾಡಿಕೆರೆ ವೀರಪ್ಪರೆಡ್ಡಿ ಮಾತನಾಡಿ, ರೈತರು ನಮ್ಮಲ್ಲೇ ಸಿಗುವ ಅನೇಕ ಪರಿಸರ ಸಸ್ಯ ಸಂಪತ್ತಿನಲ್ಲಿ ಸಿಗುವ ಸಾವಯವ ಕಿಟನಾಶಕ, ಕೊಟ್ಟಿಗೆ ಗೊಬ್ಬರ, ರೈತನ ಮಿತ್ರ ಕೀಟಗಳನ್ನು ಎರೆಹುಳುಗೊಬ್ಬರ, ಉಳಿಸಿ ಬೆಳೆಸಿದಾಗ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಗೋವಿನ ಮೂತ್ರದಿಂದ ಅನೇಕ ಔಷಧೀಯ ಗುಣಲಕ್ಷಣಗಳನ್ನು ಹೊಂದಿದ್ದು, ಸಮ ರ್ಪಕವಾಗಿ ಬಳಕೆ ಮಾಡಿಕೊಂಡಲ್ಲಿ ರೈತನಿಗೆ ವರದಾನವಾಗಲಿದೆ ಎಂದರು.
ಸದ್ಬಳಕೆ ಅಗತ್ಯ: ಕಾರ್ಯನಿರ್ವಾಹಣಾಧಿಕಾರಿ ನರಸಿಂಹ ರೆಡ್ಡಿ ಮಾತನಾಡಿ, ಈ ಸಂಸ್ಥೆಯು ಯಾವುದೇ ಸರ್ಕಾರದ ಅಧೀನದಲ್ಲಿಲ್ಲದೆ ರೈತರೇ ಸ್ವತಃ ನಿರ್ಮಿಸಿಕೊಂ ಡಿರುವ ಸಂಸ್ಥೆಯಾಗಿದ್ದು, ನಾವು ಈ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯಲು ರೈತರು ನಮ್ಮಲ್ಲಿ ಲಭಿಸುವ ಪರಿಕರಗಳನ್ನು ಸದ್ಬಳಕೆ ಮಾಡಿಕೊಂಡಾಗ ಇನ್ನಷ್ಟು ಉತ್ತುಂಗಕ್ಕೆ ಮುನ್ನೆಡೆಯಲು ಸಾಧ್ಯ ಎಂದರು.
ಇಂದಿನ ಆನ್‌ಲೈನ್ ಮಾರುಕಟ್ಟೆಯಲ್ಲಿ ನಮ್ಮಂತಹ ಸಣ್ಣ ಸಂಸ್ಥೆಗಳು ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೂ ನಾವುಗಳು ಇದನ್ನ ಪ್ರತಿಷ್ಠೆಯಾಗಿ ತೆಗೆದು ಕೊಂಡಾಗ ಇನ್ನಷ್ಟು ಮುಂದೆ ಬರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆಯ ಸಹಾಯಕ ನಿರ್ದೇಶಕರಾದ ರಜಿನಿ, ಜಪಾನ್ ಕಂಪನಿಯ ಸಂತೋಷಿಯಾ, ಉಪಾಧ್ಯಕ್ಷ ಚೀಮನಹಳ್ಳಿ ಗೋವಿಂದರೆಡ್ಡಿ, ಮೈಕ್ರೋ ಫೈನಾನ್ಸ್‌ನ ಶ್ರೀಧರ್ ಈಶ್ವರನ್, ನಿರಂಜನ್ ಶೀಲವತ್, ಸದಸ್ಯರಾದ ದೊಡ್ಡಗಂಜೂರು ನಾಗರಾಜ್, ಕೃಷ್ಣಾರೆಡ್ಡಿ, ರತ್ನಮ್ಮ ರಾಧಾಕೃಷ್ಣ, ಶೋಭಾಮುನಿಆಂಜಿ, ರೈತ ಮುಖಂಡ ಗಂಗಿಶೆಟ್ಟಿ, ಭೂಮೇಶ್, ಆಂಜಪ್ಪ, ಹಾದಿಗೆರೆ ಸರ್ವೇಶ್ ಬಾಬು, ಮಾಡಿಕೆರೆ ಮಂಜು ನಾಥ್, ಕಾಚಹಳ್ಳಿ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.