Advertisement

ಫೆ. 8-12 ತೋಟಗಾರಿಕೆ ಮೇಳ

12:03 PM Dec 03, 2020 | Suhan S |

ಬೆಂಗಳೂರು: ಮತ್ತೂಂದು ತೋಟಗಾರಿಕೆ ಮೇಳಕ್ಕೆ ಹೆಸರಘಟ್ಟದ ರಾಷ್ಟ್ರೀಯ ತೋಟ ಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌)ಯಲ್ಲಿ ವೇದಿಕೆ ಸಜ್ಜಾಗುತ್ತಿದೆ, ಫೆ. 8ರಿಂದ 12 ರವರೆಗೆ ನಡೆಯಲಿದೆ. ಈ ಬಾರಿ “ಸ್ಟಾರ್ಟ್‌ ಅಪ್‌ ಆಂಡ್‌ ಸ್ಟಾಂಡ್‌ಅಪ್‌ ಇಂಡಿಯಾಗೆ ತೋಟಗಾರಿಕೆ’ಘೋಷವಾಕ್ಯ ಆಗಿದೆ.

Advertisement

ಕೋವಿಡ್ ಹಾವಳಿ ಹಿನ್ನೆಲೆಯಲ್ಲಿ ಈ ಬಾರಿ ವರ್ಚುವಲ್‌ ವ್ಯವಸ್ಥೆಗೆಒತ್ತುನೀಡಿದ್ದು,ದೇಶದ ಎಲ್ಲ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರೈತ ಉತ್ಪಾದಕ ಸಂಘಗಳ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದು ದೇಶದಲ್ಲೇ ಅತಿದೊಡ್ಡ ವರ್ಚುವಲ್‌ ಮೇಳ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದೇಶಾದ್ಯಂತ 721 ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ಗಳು ಹಾಗೂ ಸಾವಿರಾರು ರೈತ ಉತ್ಪಾದಕ ಸಂಸ್ಥೆ (ಎಫ್ಪಿಒ)ಗಳಿವೆ. ಜತೆಗೆ ತೋಟಗಾರಿಕೆ ವಿಶ್ವವಿದ್ಯಾಲಯಗಳು, ವಿವಿಧ ಬೆಳೆಗಾರರ ಸಂಘಗಳಲ್ಲಿ ತೋಟಗಾರಿಕೆ ಮೇಳದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲಿ 100-200 ರೈತರು ಕುಳಿತುಕೊಳ್ಳಲು ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಹೆಸರಘಟ್ಟ ಸುತ್ತಲಿನಕೆಲವು ಜಮೀನುಗಳಲ್ಲೂಐಐಎಚ್‌ಆರ್‌ತಳಿಗಳನ್ನುರೈತರುಬೆಳೆದಿದ್ದಾರೆ. ಅವುಗಳ ನೇರ ಪ್ರದರ್ಶನ ಕೂಡ ಮೇಳದಲ್ಲಿ ಇರಲಿದೆ. ಇಂತಹ ಸುಮಾರು 15-20 ತಾಕುಗಳು ಇರಲಿವೆ. ವಿಜ್ಞಾನಿಗಳು ಅಲ್ಲಿ ಆಯಾ ಬೆಳೆಗಳಬಗ್ಗೆ ರೈತರಿಗೆಮಾಹಿತಿ ನೀಡಲಿದ್ದಾರೆ. ಸಂವಾದಕ್ಕೂ ಅವಕಾಶ ಇರಲಿದೆ. ಇನ್ನು 11 ವಲಯಗಳಿದ್ದು, ಪ್ರತಿಯೊಂದರಲ್ಲಿ ಸುಮಾರು40-50ಕೆವಿಕೆಗಳು ಬರುತ್ತವೆ. ಇವು ಒಂದಕ್ಕಿಂತ ಮತ್ತೂಂದು ಭಿನ್ನವಾಗಿರುತ್ತದೆ. ಆದ್ದರಿಂದ ಐದು ದಿನಗಳ ಮೇಳದಲ್ಲಿ ಪ್ರತಿ ಅರ್ಧ ದಿನ ಆಯಾ ವಲಯಕ್ಕೆ ಸಂಬಂಧಿಸಿದ ತಳಿ ಮತ್ತು ತಂತ್ರಜ್ಞಾನಗಳ ಪರಿಚಯ ಮತ್ತು ಪ್ರದರ್ಶನಕ್ಕೆಮೀಸಲಿಡಲುಉದ್ದೇಶಿಸಲಾಗಿದೆ. ಇದರಿಂದ ನಿರ್ದಿಷ್ಟ ಪ್ರದೇಶದ ತೋಟಗಾರಿಕೆ ಮಾಹಿತಿ ರೈತರಿಗೆ ದೊರೆಯಲಿದೆ ಎಂದು ಐಐಎಚ್‌ಆರ್‌ ತಿಳಿಸಿದೆ.

ಜತೆಗೆ ಐದು ದಿನಗಳ ಮೇಳವನ್ನು ದೂರ ದರ್ಶನದಲ್ಲಿ ಪ್ರಸಾರ ಮಾಡಲು ಹೆಚ್ಚುಸಮಯ ಮೀಸಲಿಡುವಂತೆ ಕೋರಲಾಗಿದೆ. ವಿಜ್ಞಾನಿಗಳೊಂದಿಗೆ ನೇರ ಸಂವಾದ ಏರ್ಪಡಿಸಲಾಗಿದ್ದು, ರೈತರು ಪ್ರಶ್ನೆಗಳನ್ನು ಕೇಳಿ ಪರಿಹಾರ ಕಂಡು ಕೊಳ್ಳಬಹುದು.ಇದಲ್ಲದೆ,ವರ್ಚುವಲ್‌ ಮತ್ತು ಭೌತಿಕವಾಗಿ ರೈತರಿಗೆ ತರಬೇತಿ ಶಿಬಿರ ಕೂಡ ಹಮ್ಮಿಕೊಳ್ಳಲಾಗಿದೆ.

6 ಸಾವಿರ ರೈತರಿಗೆ ಅವಕಾಶ :  ನಿತ್ಯ ಮೇಳಕ್ಕೆ ಆರು ಸಾವಿರ ರೈತರಿಗೆ ಮಾತ್ರ ಅವಕಾಶ ಇರಲಿದೆ. ತಲಾ ಎರಡು ಸಾವಿರದಂತೆ ಮೂರು ಅವಧಿಯಲ್ಲಿ ಮೇಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಪ್ರಗತಿಪರ ರೈತರು ವಿವಿಧ ರಾಜ್ಯಗಳಿಂದ ಮತ್ತುಜಿಲ್ಲೆಗಳಿಂದ ಭಾಗವಹಿಸಲಿದ್ದಾರೆ. ನಗರದಿಂದ ಬರುವವರಿಗೆ ಎಂದಿನಂತೆ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಇರುತ್ತದೆ.

ಮಳಿಗೆಗಳಿಗೆ ಅವಕಾಶ :  ಮೇಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯ ಇರುವುದರಿಂದ ನೂರು ಮಳಿಗೆಗಳಿಗೆ ಮಾತ್ರ ಅವಕಾಶ ಕಲ್ಪಿಸುವ ಚಿಂತನೆ ಇದೆ.ಈಬಗ್ಗೆ ನಿರ್ಧಾರಕೈಗೊಳ್ಳಲಾಗುತ್ತಿದೆ. ಪ್ರದರ್ಶನ ಜತೆಗೆ ಮಾರಾಟವೂ ಇರಲಿದೆ.ಕಳೆದ ಮೇಳದಲ್ಲಿ265 ಮಳಿಗೆಗಳಿದ್ದು, 28 ರಾಜ್ಯಗಳಿಂದ 70 ಸಾವಿರಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

Advertisement

ಹೊಸ ತಳಿ-ತಂತ್ರಜ್ಞಾನ :

  • ಸೀಬೆಯಲ್ಲಿ ಹೊಸ ತಳಿ “ಅರ್ಕ ಪೂರ್ಣ’
  • ಮೆಣಸಿನಕಾಯಿಯಲ್ಲಿ ಎಲೆ ಸುರುಳಿ ರೋಗ ನಿರೋಧಕ ಶಕ್ತಿ ಇರುವ ಹೈಬ್ರಿಡ್‌ “ಅರ್ಕ ಗಗನ್‌’
  • ಐಸ್‌ ಬಾಕ್ಸ್‌ ಪ್ರಕಾರದಕಲ್ಲಂಗಡಿ ತಳಿ “ಅರ್ಕ ಶ್ಯಾಮ್‌’
  • ಹಣ್ಣು-ತರಕಾರಿ ತೊಳೆಯುವ ರಾಸಾಯನಿಕ ಮುಕ್ತವಾದ ಉತ್ಪನ್ನ “ಅರ್ಕ ಹರ್ಬಿ ವಾಶ್‌’.

ಮಾಹಿತಿಗೆ ಇಲ್ಲಿ ಸಂಪರ್ಕಿಸಿ : 

ಮಾಹಿತಿ ನೋಂದಣಿ ಮಾಡಲು ಮತ್ತು ಅರ್ಜಿಗಳನ್ನು ಸಲ್ಲಿಸಲು https://forms.gle/oGCk6ELMeSkRfufw7 ಇಲ್ಲಿ ಸಂಪರ್ಕಿಸಲು ತೋಟಗಾರಿಕಾ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next