Advertisement

“ನೀರು ಸಂಗ್ರಹಣ ಘಟಕ’ಕ್ಕೆ ತೋಟಗಾರಿಕೆ ಇಲಾಖೆ ನೆರವು

10:00 PM Apr 08, 2021 | Team Udayavani |

ಬಂಟ್ವಾಳ: ನಮ್ಮಲ್ಲಿ ಕೊಳವೆಬಾವಿ ಇದೆ, ಬೇರೆ ಯಾವುದೇ ರೀತಿಯ ನೀರಿನ ವ್ಯವಸ್ಥೆ ನಮಗೆ ಬೇಕಿಲ್ಲ ಎಂದು ಕರಾವಳಿ ಭಾಗದಲ್ಲಿ ಕೊಳವೆಬಾವಿ ಮೂಲಕ ತೋಟಕ್ಕೆ ನೀರು ಹಾಯಿಸಲಾಗುತ್ತಿದೆ. ಆದರೆ ತೋಟಗಾರಿಕೆ ಇಲಾಖೆಯು ಮಳೆಯ ನೀರನ್ನು ಸಂಗ್ರಹಿಸಿ “ನೀರು ಸಂಗ್ರಹಣ ಘಟಕ'(ಕೆರೆಯ ಮಾದರಿ)ಗಳ ಮೂಲಕ ತೋಟಕ್ಕೆ ನೀರು ಒದಗಿಸುವ ವ್ಯವಸ್ಥೆಗೆ ನೆರವಾಗುತ್ತಿದೆ.

Advertisement

ನೀರಿನ ಸಂಗ್ರಹದ ಸಾಮರ್ಥ್ಯಕ್ಕನುಗು ಣವಾಗಿ ನೆರವನ್ನು ನೀಡಲಾಗುತ್ತಿದ್ದು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ

(ಆರ್‌ಕೆವಿವೈ)ಯಡಿ ರೈತರಿಗೆ ಇಂತಹ ಘಟಕಗಳ ನಿರ್ಮಾಣಕ್ಕಾಗಿ ಸಬ್ಸಿಡಿ ಸಿಗುತ್ತಿದೆ. ಆದರೆ ನಮ್ಮ ಭಾಗದಲ್ಲಿ ಇದು ಉಪಯೋಗಕ್ಕೆ ಬರುವುದಿಲ್ಲ ಎಂಬುದು ಕೆಲವರ ಆಲೋಚನೆಯಾಗಿದ್ದರೆ, ಇನ್ನಷ್ಟು ರೈತರು ಪ್ರಯೋಜನ ಪಡೆದಿದ್ದಾರೆ.

ಕೃಷಿ ಇಲಾಖೆಯ ಕೃಷಿ ಹೊಂಡಗಳಲ್ಲಿ ನೀರು ಭೂಮಿಗೆ ಇಂಗಿದರೆ, ಇಲ್ಲಿ ನೀರನ್ನು ಮರು ಬಳಕೆಗೆ ಪ್ರೇರಣೆ ನೀಡುತ್ತದೆ. ನೆಲ ಮಟ್ಟಕ್ಕಿಂತ ಕೆಳ ಭಾಗದಲ್ಲಿ ಕೆರೆಯ ರೀತಿಯಲ್ಲಿ ಘಟಕ ನಿರ್ಮಾಣವಾಗಲಿದ್ದು, ತಳ ಭಾಗಕ್ಕೆ ನೀರು ಇಂಗದಂತೆ ಪ್ಲಾಸ್ಟಿಕ್‌ ಶೀಟನ್ನು ಬಳಕೆ ಮಾಡಬೇಕಾಗುತ್ತದೆ. ಜತೆಗೆ ನೆಲ ಭಾಗಕ್ಕಿಂತ ಮೇಲಾ^ಗದಲ್ಲಿ ಸ್ಟೀಲ್‌ ಕವರ್‌ ಮೂಲಕ ಟ್ಯಾಂಕ್‌ ನಿರ್ಮಾಣಕ್ಕೂ ಇಲಾಖೆಯಲ್ಲಿ ಅವಕಾಶವಿದೆ.

ಬಂಟ್ವಾಳ ತಾಲೂಕಿನಲ್ಲಿ ಇಂತಹ ಹಲವು ನೀರು ಸಂಗ್ರಹಣ ಘಟಕಗಳು ನಿರ್ಮಾಣಗೊಂಡಿದ್ದು, ನರಿಂಗಾನ ಭಾಗದಲ್ಲಿ ಬೃಹತ್‌ ಘಟಕವನ್ನೂ ನಿರ್ಮಿಸಲಾಗಿದೆ. ಈಗಲೂ ರೈತರಿಂದ ಘಟಕಗಳಿಗೆ ಬೇಡಿಕೆ ಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

1,200 ಘನ ಮೀ. ಘಟಕ ನಿರ್ಮಾಣ :

ಸಣ್ಣ ಮಟ್ಟದ್ದಾದರೆ ಗರಿಷ್ಠ 1,200 ಘನ ಮೀಟರ್‌ ಘಟಕ ನಿರ್ಮಾ ಣಕ್ಕೆ ಅವಕಾಶವಿರುತ್ತದೆ. 10 ಮೀ. x 10 ಮೀ.x 3 ಮೀ. ಅಂದರೆ 300 ಘನ ಮೀ.ನಿಂದ 20 ಮೀ. x 20 ಮೀ.x3 ಮೀ. ಅಂದರೆ 1,200 ಘನ ಮೀ. ಘಟಕ ನಿರ್ಮಾಣಕ್ಕೆ ಅವಕಾಶವಿದ್ದು, ಪ್ರತಿ ಘನ ಮೀಟರ್‌ಗೆ 62.50 ರೂ. ಸಹಾಯಧನ ತೋಟಗಾರಿಕಾ ಇಲಾಖೆಯಿಂದ ಲಭ್ಯವಾಗಲಿದೆ. ಗರಿಷ್ಠ ಎಂದರೆ ರೈತರು 72 ಸಾವಿರ ರೂ.ಗಳಷ್ಟು ಸಹಾಯಧನ ಸರಕಾರದಿಂದ ಪಡೆಯಬಹುದಾಗಿದೆ.

ನೀರಿನ ಮರು ಬಳಕೆಗೆ ಪ್ರೇರಣೆ :

ಬೃಹತ್‌ ಪ್ರಮಾಣದಲ್ಲಿ ಸಂಗ್ರಹಣ ಘಟಕ ಮಾಡು ವುದಾದರೆ 4, 6, 8 ಸಾವಿರ ಘನ ಮೀ.ಗಳ ಟ್ಯಾಂಕ್‌ಗೆ ಅವಕಾಶವಿದೆ. 37 ಮೀ. x 37 ಮೀ. 10 x 3 ಮೀ. ಸೇರಿ   4,000 ಘನ ಮೀ. ಘಟಕ ನಿರ್ಮಾಣಕ್ಕೆ ಸುಮಾರು 6 ಲಕ್ಷ ರೂ. ವೆಚ್ಚ ತಗಲಿದರೆ, ಶೇ. 50ರಂತೆ ಗರಿಷ್ಠ 3 ಲಕ್ಷ ರೂ. ಸಹಾಯಧನ ಪಡೆಯಬಹುದು. ಇನ್ನು 45 ಮೀ.x45 ಮೀ.x3 ಮೀ. ಸೇರಿ 6 ಸಾವಿರ ಘನ ಮೀ. ಘಟಕಕ್ಕೆ ಘಟಕ ವೆಚ್ಚ 8 ಲಕ್ಷ ರೂ. ಆದರೆ ಶೇ. 50ರಂತೆ ಗರಿಷ್ಠ 4 ಲಕ್ಷ ರೂ. ಸಹಾಯಧನ ಪಡೆಯಬಹುದು. 52 ಮೀ.x52 ಮೀ.x3 ಮೀ. ಸೇರಿ 8 ಸಾವಿರ ಘನ ಮೀ. ಘಟಕಕ್ಕೆ 10 ಲಕ್ಷ ರೂ. ವೆಚ್ಚವಾದರೆ ಶೇ. 50ರಂತೆ ಗರಿಷ್ಠ 5 ಲಕ್ಷ ರೂ. ಸಹಾಯಧನ ಪಡೆಯಬಹುದಾಗಿದೆ. ಇಲ್ಲಿ ಪ್ರತೀ ಹಂತದ ಘಟಕ ನಿರ್ಮಾಣಕ್ಕೆ ಕ್ರಮವಾಗಿ 1, 2, 4 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕ ಬೆಳೆ ಹೊಂದಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next