Advertisement

ಹಾರರ್ ಥ್ರಿಲ್ಲರ್ ‘ರಿಯಾ’

05:22 PM Sep 08, 2022 | Team Udayavani |

“ರಿಯಾ’- ಹೀಗೊಂದು ಸಿನಿಮಾ ಸದ್ದಿಲ್ಲದೇ ಆರಂಭವಾಗಿ ಚಿತ್ರೀಕರಣ ಪೂರೈಸಿದೆ. ಇತ್ತೀಚೆಗೆ ಶಿಕ್ಷಕರ ದಿನದಂದು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮೂಲತಃ ಶಿಕ್ಷಕಿಯಾಗಿರುವ ಆಂಧ್ರ ಪ್ರದೇಶದವರಾದ ವಿಜಯಾ ನರೇಶ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರ ಪತಿ ಕಣಿಗೊಂಡ ನರೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Advertisement

“ಇದು ಒಂದು ಹಾರರ್‌ ಸಿನಿಮಾ. ಹದಿನಾಲ್ಕು ಪಾತ್ರಗಳ ಜೊತೆಗೆ ಒಂದೇ ಮನೆಯಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸೆ. 16ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು ಚಿತ್ರದ ಪ್ರಮುಖ ಪಾತ್ರಧಾರಿ ಕಾರ್ತಿಕ್‌ ವರ್ಣೆಕರ್‌.

ನಾಯಕಿ ಸಾವಿತ್ರಿ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಕಲಾವಿದರಾದ ವಿಕಾಸ್‌, ಶ್ವೇತಾ, ರಾಜ್‌ ಉದಯ್‌, ರಿಯಾ ಪಾತ್ರಧಾರಿ ಬೇಬಿ ಅನನ್ಯ ಮುಂತಾದವರು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ವಿತರಕರಾದ ಪಿ.ವಿ.ಆರ್‌. ಸ್ವಾಮಿ, ಚೇತನ್‌ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next