Advertisement

“ಆಯುಷ್ಮಾನ್‌’ನಲ್ಲಿ ಹಾರರ್‌ ಛಾಯೆ

10:19 AM Oct 16, 2019 | Lakshmi GovindaRaju |

ಶಿವರಾಜ ಕುಮಾರ್‌ ಅಭಿನಯದ “ಆಯುಷ್ಮಾನ್‌ ಭವ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ ನೋಡಿದವರಿಗೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಮಟ್ಟದ ಕುತೂಹಲವನ್ನು ಚಿತ್ರದ ಟೀಸರ್‌ನಲ್ಲಿ ಇಡಲಾಗಿದೆ. ಪಿ.ವಾಸು ಈ ಚಿತ್ರದ ನಿರ್ದೇಶಕರು. ಈಗಾಗಲೇ ಶಿವರಾಜ ಕುಮಾರ್‌ ಹಾಗೂ ಪಿ.ವಾಸು ಅವರ ಕಾಂಬಿನೇಶನ್‌ನಲ್ಲಿ “ಶಿವಲಿಂಗ’ ಚಿತ್ರ ಬಂದಿದ್ದು, ಹಾರರ್‌ ಹಿನ್ನೆಲೆಯಲ್ಲಿ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

Advertisement

ಶಿವರಾಜ ಕುಮಾರ್‌ ಕೂಡಾ ಹೊಸ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈಗ “ಆಯುಷ್ಮಾನ್‌ ಭವ’ ಮೂಲಕ ಮತ್ತೆ ಈ ಜೋಡಿ ಒಂದಾಗಿದ್ದು, ಈ ಚಿತ್ರದ ಟೀಸರ್‌ ನೋಡುವಾಗ ಇಲ್ಲೂ ಹಾರರ್‌ ಟಚ್‌ ಕೊಟ್ಟಂತಿದೆ. ಜೊತೆಗೆ ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲರ್‌ ಅಂಶಗಳು ಕೂಡಾ ಗೋಚರಿಸುತ್ತಿವೆ. ಈ ಮೂಲಕ ಈ ಜೋಡಿ ಮತ್ತೂಮ್ಮೆ ಹಾರರ್‌ ಸಿನಿಮಾ ಮಾಡಿದೆಯಾ ಎಂಬ ಪ್ರಶ್ನೆ ಸಿನಿ ಪ್ರೇಕ್ಷಕರನ್ನು ಕಾಡುತ್ತಿರುವುದು ಸುಳ್ಳಲ್ಲ. ಅಂದಹಾಗೆ, ಈ ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ ಅಂಡರ್‌ ವಾಟರ್‌ ಫೈಟ್‌ ಇದ್ದು, ಶಿವರಾಜ ಕುಮಾರ್‌ ಅವರಿಗೆ ಈ ಫೈಟ್‌ ಸಖತ್‌ ಖುಷಿ ಕೊಟ್ಟಿದೆಯಂತೆ. “ಆಯುಷ್ಮಾನ್‌ ಭವ’ ಚಿತ್ರ ದ್ವಾರಕೀಶ್‌ ಬ್ಯಾನರ್‌ನಲ್ಲಿ ತಯಾರಾಗಿದ್ದು, ಇದು ಆ ಬ್ಯಾನರ್‌ನ 52ನೇ ಸಿನಿಮಾ ಎಂಬುದು ವಿಶೇಷ. ಮನುಷ್ಯನ ಬದುಕು ಎಷ್ಟು ಮುಖ್ಯವಾಗುತ್ತೆ ಎಂಬುದನ್ನು ಇಲ್ಲಿ ಹೇಳಲಾಗಿದೆಯಂತೆ. ಇದು ಗುರುಕಿರಣ್‌ ಸಂಗೀತ ನಿರ್ದೇಶನದ ನೂರನೇ ಸಿನಿಮಾ ಇದಾಗಿದ್ದು, ಹಾಡುಗಳಿಗೆ ಇಲ್ಲಿ ಹೆಚ್ಚಿನ ಒತ್ತುಕೊಡಲಾಗಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next