Advertisement

Daily Horoscope: ಹೆಜ್ಜೆ ಮುಂದಿಡಲು ಅಂಜಬೇಕಾಗಿಲ್ಲ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

07:29 AM Jul 11, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಹೊಸ ಕಾರ್ಯಗಳ ಜವಾಬ್ದಾರಿ. ಉದ್ಯಮದ ನೌಕರರಿಗೆ ಹೆಚ್ಚು ಅನುಕೂಲ. ಮಹಿಳೆಯರ ಸ್ವೋದ್ಯೋಗ ಯೋಜನೆಯಲ್ಲಿ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

Advertisement

ವೃಷಭ: ಹೊಸ ಯೋಜನೆ ಕ್ಷಿಪ್ರಗತಿಯಲ್ಲಿ ಮುನ್ನಡೆ. ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳ ಮುಂದುವರಿಕೆ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫ‌ಲ. ಸತ್ಯ ಹೇಳಿ ನಿಷ್ಠುರಕ್ಕೆ ಗುರಿಯಾಗುವ ಸಾಧ್ಯತೆ.

ಮಿಥುನ: ಹೆಜ್ಜೆ ಮುಂದಿಡಲು ಅಂಜಬೇಕಾಗಿಲ್ಲ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ನೆರವು ಪ್ರಾಪ್ತಿ. ವಸ್ತ್ರ , ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ವ್ಯಾಪಾರಿಗಳಿಗೆ ಪೈಪೋಟಿಯಿಂದ ಲಾಭ.

ಕರ್ಕಾಟಕ: ಶೀಘ್ರ ಉತ್ಕರ್ಷ ಹೊಂದುವ ಬಯಕೆಗೆ ಪೋಷಣೆ. ಉದ್ಯೋಗದಲ್ಲಿ ದಿನೇ ದಿನೆ ಉನ್ನತಿ. ಅಕಸ್ಮಾತ್‌ ಧನಾಗಮ ಯೋಗ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಎಲ್ಲರಿಗೂ ಉತ್ತಮ ಆರೋಗ್ಯ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಅಗ್ರಪಂಕ್ತಿಯ ಸ್ಥಾನಮಾನ. ಎಲ್ಲೆಯಿಲ್ಲದ ಉದ್ಯಮದ ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷಿ ಕಾರ್ಮಿಕರಿಗೆ ಉತ್ತಮ ವಾತಾವರಣ. ಹಿರಿಯರು, ಗೃಹಿಣಿ, ಮಕ್ಕಳಿಗೆ ಸಮಾಧಾನದ ಅನುಭವ.

Advertisement

ಕನ್ಯಾ: ವೃತ್ತಿಗೌರವ ಕಾಪಾಡಿಕೊಳ್ಳುವ ಪ್ರಯತ್ನ. ಸಹೋದ್ಯೋಗಿಗಳಿಂದ ಸಹಕಾರ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ತುಲಾ: ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಹಿತಶತ್ರುಗಳ ಸಂಚಿಗೆ ಸೋಲು. ಗುರು ಸಮಾನ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ. ಮಕ್ಕಳ ಶೈಕ್ಷಣಿಕ ಸಾಧನೆ ಯಿಂದ ಹರ್ಷ.

ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯಪಾಲನೆ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಿ ಗಳಿಗೆ ಎದುರಾಳಿಗಳ ಪೈಪೋಟಿ ನಿವಾರಣೆ. ಸರಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಪಥದಲ್ಲಿ.

ಧನು: ಸಂಪಾದನೆಯ ಮಾರ್ಗದಲ್ಲಿ ಮುಂದುವರಿಕೆ. ಉದ್ಯೋಗ ಸ್ಥಾನದಲ್ಲಿ ಸಣ್ಣ ಬದಲಾವಣೆ. ಸಣ್ಣ ಉದ್ಯಮ ಘಟಕ ಲಾಭ ಗಳಿಕೆ. ಮಹಿಳೆಯರ ಉಸ್ತುವಾರಿಯ ಖಾದ್ಯ ಪದಾರ್ಥಗಳ ಘಟಕಕ್ಕೆ ದಾಖಲೆಯ ಪ್ರಮಾಣದಲ್ಲಿ ಲಾಭ.

ಮಕರ: ವೃತ್ತಿಯಲ್ಲಿ ಪರಿಣತಿ ಹೆಚ್ಚಿ ಆತ್ಮವಿಶ್ವಾಸ ವೃದ್ಧಿ.ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉತ್ಪನ್ನಗಳ ಗುಣ ಮಟ್ಟ ಸುಧಾರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವರಮಾನ ವೃದ್ಧಿ.

ಕುಂಭ: ಉದ್ಯೋಗ ಸ್ಥಾನದಲ್ಲಿ ಅರ್ಧವಾರ್ಷಿಕ ಗುರಿ ಬಹುಪಾಲು ಮುಕ್ತಾಯ. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ. ಟೈಲರಿಂಗ್‌ ವೃತ್ತಿ ಬಲ್ಲವರಿಗೆ ಉದ್ಯೋಗಾ ವಕಾಶ. ಸಮಾಜ ಸೇವಾ ಕಾರ್ಯಗಳಲ್ಲಿ ಭಾಗಿ.

ಮೀನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಹಲವು ಸೇವಾ ಕ್ಷೇತ್ರಗಳಿಂದ ಕರೆ. ಸರಕಾರಿ ಇಲಾಖೆಗಳವರಿಂದ ಸಹಕಾರ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.

Advertisement

Udayavani is now on Telegram. Click here to join our channel and stay updated with the latest news.

Next