Advertisement

Daily Horoscope:ಅವಿವಾಹಿತ ಪುತ್ರನಿಗೆ ವಿವಾಹ ನಿಶ್ಚಯ,ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ

08:30 AM Sep 07, 2024 | Team Udayavani |

ಮೇಷ: ಗಣೇಶನ ಹಬ್ಬದ ಸಡಗರದ ನಡುವೆ ಭವಿಷ್ಯ ಚಿಂತನೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ. ಉದ್ಯೋಗ ಸಂಸ್ಥೆಯಲ್ಲಿ ವಿರಾಮದ ವಾತಾವರಣ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ.

Advertisement

ವೃಷಭ: ನಿಧಾನ ಗತಿಯಲ್ಲಿ ಸಾಗುವ ದಿನಚರಿಗಳು.ಕುಟುಂಬದ ಹಿರಿಯ ಮನೆಗೆ ಭೇಟಿ. ಅವಿವಾಹಿತ ಪುತ್ರನಿಗೆ ವಿವಾಹ ನಿಶ್ಚಯ. ಮನೆಮಕ್ಕಳ ಪ್ರತಿಭಾ ಪ್ರದರ್ಶನದಿಂದ ಕೀರ್ತಿ.ಹತ್ತಿರದ ಗಣಪತಿ ದೇವಾಲಯಕ್ಕೆ ಭೇಟಿ.

ಮಿಥುನ: ಅನವಶ್ಯ ಚಿಂತೆಯನ್ನು ದೂರವಿಡಿ. ಆರೋಗ್ಯ ಸಮಸ್ಯೆಗೆ ಸಹಜ ಕ್ರಿಯೆಗಳಿಂದ ಪರಿಹಾರ. ಬಂಧುಗಳೊಂದಿಗಿನ ವೈಮನಸ್ಯ ನಿವಾರಣೆ. ಧಾರ್ಮಿಕ ಕಾರ್ಯಕ್ರಮಕ್ಕಾಗಿ ಪುಟ್ಟ ಪ್ರವಾಸ. ದಿನದ ಕೊನೆಯಲ್ಲಿ ವಿಶಿಷ್ಟ ವ್ಯಕ್ತಿಯೊಬ್ಬರ ಭೇಟಿ.

ಕರ್ಕಾಟಕ: ಗಣೇಶನ ಆರಾಧನೆಯಿಂದ ಸಮಸ್ಯೆಗಳು ಪರಿಹಾರ.ಕುಟುಂಬದ ಆಸ್ತಿ ಉಳಿಸಿಕೊಳ್ಳಲು ಸಮಗ್ರ ಪ್ರಯತ್ನ. ನೆರೆಮನೆಯವರ ಆರೋಗ್ಯ ಸಮಸ್ಯೆ ನಿವಾರಣೆಗೆ ಸಹಾಯ. ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ.

ಸಿಂಹ: ಧಾರ್ಮಿಕ ಕಾರ್ಯಕ್ರಮದ ನೇತೃತ್ವ ಪ್ರಾಪ್ತಿ. ಉದ್ಯೋಗ ಅರಸುವ ಕಿರಿಯರಿಗೆ ಮಾರ್ಗದರ್ಶನ. ಪುತ್ರಿಯ ವಿವಾಹಕ್ಕೆ ಸಿದ್ಧತೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕ್ಷೇಮ. ವ್ಯವಹಾರದ ಸಂಬಂಧ ಪಶ್ಚಿಮ ದಿಕ್ಕಿಗೆ ಪ್ರಯಾಣ.

Advertisement

ಕನ್ಯಾ: ಆರಾಧನಾ ಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗಿ.ಬೆಳೆಸಿಕೊಂಡಿರುವ ಕೌಶಲ ವೃದ್ಧಿಗೆ ಅನುಕೂಲ.ಬಂಧುಗಳ ಮನೆಯ ಶುಭಕಾರ್ಯಕ್ಕೆ ಸಹಾಯ.ಹಳೆಯ ಗೆಳೆಯರೊಡನೆ ಸಮಾಗಮ.ಹಿರಿಯರ ಆರೋಗ್ಯ ಕ್ಷಿಪ್ರ ಸುಧಾರಣೆ.

ತುಲಾ: ಗಣೇಶನ ಉಪಾಸನೆಯಿಂದ ಚಾಂಚಲ್ಯಕ್ಕೆ ವಿದಾಯ. ಕುಟುಂಬದ ಯಜಮಾನರಿಗೆ ಶುಭದಿನ. ಆಧ್ಯಾತ್ಮಿಕ ಕಾರ್ಯ ಕ್ರಮಗಳತ್ತ ಒಲವು. ಸಂಗೀತ, ಹರಿಕಥೆ ಶ್ರವಣಕ್ಕೆ ಅವಕಾಶ. ಗುರುಸಮಾನ ವ್ಯಕ್ತಿಯ ಅಯಾಚಿತ ದರ್ಶನ.

ವೃಶ್ಚಿಕ: ಊರಿನವರ ಸಡಗರದಿಂದ ಮನೆಯಲ್ಲೂ ಉಲ್ಲಾಸ. ಸಣ್ಣ ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ.ಅಧ್ಯಾಪಕರಿಂದ ಮಕ್ಕಳಿಗಾಗಿ ಕಾರ್ಯಕ್ರಮ. ದಕ್ಷಿಣ ದಿಕ್ಕಿನಲ್ಲಿರುವ ಬಂಧುಗಳ ಆಗಮನ.

ಧನು: ಕುಟುಂಬದ ಹಿರಿಯ ವ್ಯಕ್ತಿಯ ಆರೋಗ್ಯ ಸುಧಾರಣೆ. ಸಹೋದ್ಯೋಗಿ ಮಿತ್ರರಿಗೆ ಖಾಸಗಿ ಮಾರ್ಗದರ್ಶನ. ಕೃಷಿಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಪರಿಸರ ಸ್ವತ್ಛತಾ ಕಾರ್ಯಕ್ರಮದಲ್ಲಿ ಭಾಗಿ.ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ.

ಮಕರ: ಉದ್ಯೋಗ ಸ್ಥಾನಕ್ಕೆ ವಿರಾಮದಿಂದ ಹಬ್ಬ ನಿರಾತಂಕ. ಸಹೋದ್ಯೋಗಿ ಮಿತ್ರರೊಂದಿಗೆ ಭ್ರಮಾಚರಣೆ. ಹಿರಿಯರ ಆರೋಗ್ಯ ಸುಧಾರಣೆ. ಮಾತೃಸ್ಥಾನದಲ್ಲಿರುವ ವ್ಯಕ್ತಿಯಿಂದ ಸಕಾಲಿಕ ಸಲಹೆ. ಹತ್ತಿರದ ದೇವಾಲಯ ದರ್ಶನ.

ಕುಂಭ: ಉದ್ಯೋಗ ಸ್ಥಾನದಲ್ಲಿ ಹಬ್ಬ ಆಚರಣೆಯ ನೇತೃತ್ವ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಗ್ನತೆ. ಮುದ್ರಣ ಸಾಮಗ್ರಿ, ಸ್ಟೇಶನರಿ ವಿತರಕರಿಗೆ ಬೇಡಿಕೆ ಪೂರೈಕೆಯ ಒತ್ತಡ. ಯಂತ್ರೋಪಕರಣ ವ್ಯಾಪಾರಿಗಳ ಪಾಲಿಗೆ ಶುಭದಿನ.

ಮೀನ: ಹಬ್ಬದ ದಿನವೂ ಸಹಾಯಕ್ಕೆ ಕರೆ. ಸೋದರಿಯ ಮನೆಯ ಸಂಭ್ರಮದಲ್ಲಿ ಭಾಗಿ. ಹಿರಿಯರ ಆರೋಗ್ಯ ಕ್ಷಿಪ್ರಗತಿಯಲ್ಲಿ ಸುಧಾರಣೆ. ಕೃಷಿ, ಹೈನುಗಾರಿಕೆ ಕೈಗೊಳ್ಳಲು ಸಂಕಲ್ಪ. ದೇವಾಲಯ, ಅನಾಥಾಲಯಕ್ಕೆ ಭೇಟಿ.

Advertisement

Udayavani is now on Telegram. Click here to join our channel and stay updated with the latest news.