Advertisement

Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ

07:44 AM Jan 04, 2025 | Team Udayavani |

ಮೇಷ: ಕೆಲವು ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆ. ಉದ್ಯೋಗಸ್ಥರಿಗೆ ಸಹವರ್ತಿಗಳ ಸಕಾಲಿಕ ಸಹಾಯ. ವ್ಯವಹಾರಸ್ಥರಿಗೆ ದೇವತೋಪಾಸನೆಯಿಂದ ಕ್ಷಿಪ್ರಾನುಗ್ರಹ. ಹಿರಿಯ ರಿಗೆ, ಗೃಹಿಣಿಯರಿಗೆ ಹರ್ಷದ ಸನ್ನಿವೇಶ.

Advertisement

ವೃಷಭ: ಕಾಲಕ್ಕೆ ಸರಿಯಾದ ಬದಲಾವಣೆಗೆ ಚಿಂತನೆ. ಹೂಡಿಕೆಗೆ ಹೊಸ ಕ್ಷೇತ್ರಗಳು ಗೋಚರ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ಉಳಿತಾಯ ಯೋಜನೆಗಳ ಏಜೆಂಟರಿಗೆ ಒಳ್ಳೆಯ ದಿನ. ಕಲೋಪಾಸಕರಿಗೆ ಹೊಸ ಅವಕಾಶ.

ಮಿಥುನ: ಕಾಗದದ ಹುಲಿಗಳಿಗೆ ಅಂಜ ಬೇಡಿ. ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ. ಕರಕುಶಲ ಸಾಮಗ್ರಿಗಳ ನಿರ್ಮಾಪಕರಿಗೆ ಏಳಿಗೆಯ ಕಾಲ. ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ. ವಿದ್ಯಾರ್ಥಿಗಳಿಗೆ ಪಾಠೇತರ ಚಟುವಟಿಕೆಗಳಲ್ಲಿ ಆಸಕ್ತಿ.

ಕಟಕ: ಶಾಸ್ತ್ರಜ್ಞಾನ ವೃದ್ಧಿಗೆ ವಿಶೇಷ ಪ್ರಯತ್ನ. ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ವ್ಯವಹಾರ ನಿಧಾನ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಸದವಕಾಶ. ಆಪ್ತವರ್ಗದಿಂದ ಶುಭಸಮಾಚಾರ.

ಸಿಂಹ: ಉದ್ಯೋಗ, ವ್ಯವಹಾರಗಳಲ್ಲಿ ಮುನ್ನಡೆ. ಪಾರದರ್ಶಕ ನಡೆಯಿಂದ ವಿಶ್ವಾಸ ವೃದ್ಧಿ. ದೂರದ ಬಂಧುಗಳ ಆಗಮನದಿಂದ ಸಂತಸ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಪ್ರಯತ್ನ. ಮಕ್ಕಳ ವ್ಯಾಸಂಗಾಸಕ್ತಿ ವೃದ್ಧಿಗೆ ಪ್ರಯತ್ನ.

Advertisement

ಕನ್ಯಾ: ಸಂಗೀತಾಭ್ಯಾಸಿಗಳಿಗೆ ಸುದಿನ. ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಲಾಭ. ಪ್ರಾಪ್ತವಯಸ್ಕರಿಗೆ ವಿವಾಹ ಯೋಗ. ಗೃಹೋ ಪಕರಣಗಳ ಖರೀದಿಗೆ ಧನವ್ಯಯ. ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.

ತುಲಾ: ಅಧ್ಯಾಪಕ ವರ್ಗದವರಿಗೆ ಬಹುವಿಧ ಹೊಣೆಗಾರಿಕೆಗಳು. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ. ಪುತ್ರಿಯ ವಿವಾಹಕ್ಕೆ ಸಿದ್ಧತೆ.

ವೃಶ್ಚಿಕ: ಅಶಕ್ತರಿಗೆ ನೆರವಾಗುವ ಸನ್ನಿವೇಶ.ಮಕ್ಕಳ ಹೊಸ ಉದ್ಯಮ ಪ್ರಗತಿಪಥದಲ್ಲಿ…ವಸ್ತ್ರ ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳ ಆದಾಯ ವೃದ್ಧಿ. ಕರಕುಶಲ ಸಾಮಗ್ರಿ ತಯಾರಕರಿಗೆ ಶುಭಕಾಲ. ಕುಟುಂಬದಲ್ಲಿ ಸಂತಾನ ವೃದ್ಧಿ.

ಧನು: ಹೊಸ ಕಲ್ಪನೆಗಳಿಗೆ ರೂಪ ನೀಡುವ ಪ್ರಯತ್ನ. ರಿಯಲ್‌ ಎಸ್ಟೇಟ್‌ ವ್ಯವಹಾರಸ್ಥರಿಗೆ ಹಿನ್ನಡೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸದವಕಾಶ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ವ್ಯವಹಾರದ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ.

ಮಕರ: ವೈವಿಧ್ಯಮಯ ಕೆಲಸಗಳ ವಿತರಣೆ. ಮಕ್ಕಳ ಅಧ್ಯಯನಾಸಕ್ತಿ ಕುರಿತು ಆತಂಕ.ಸಿವಿಲ್‌ ಎಂಜಿನಿಯರರು, ಕಂಟ್ರಾಕ್ಟರ್‌ಗಳಿಗೆ ಹೊಸ ಅವಕಾಶ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಕೇಟರಿಂಗ್‌ ವ್ಯವಹಾರಸ್ಥರಿಗೆ ಆದಾಯ ವೃದ್ಧಿ.

ಕುಂಭ: ಚಿಂತಿಸಲು ಸಮಯವಿಲ್ಲದಷ್ಟು ಕೆಲಸಗಳು. ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ.ತೋಟಗಾರಿಕೆ ಬೆಳೆಗಾರರಿಗೆ ಅನುಕೂಲದ ದಿನ. ಕುಟುಂಬದಲ್ಲಿ ಆನಂದದ ಘಟನೆ.

ಮೀನ: ದೈನಂದಿನ ವ್ಯವಹಾರಗಳಲ್ಲಿ ಯಶಸ್ಸು.ಸರಕಾರಿ ಕಾರ್ಯಾಲಯಗಳಲ್ಲಿ ಸಹಕಾರ. ಹಣಕಾಸು ವ್ಯವಹಾರ ನಡೆಸುವವರಿಗೆ ಹಿನ್ನಡೆ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ.

Advertisement

Udayavani is now on Telegram. Click here to join our channel and stay updated with the latest news.

Next