Advertisement

Daily Horoscope: ಹೊಸ ವರ್ಷದ ಪ್ರಥಮ ದಿನದ ಭವಿಷ್ಯ

07:28 AM Jan 01, 2024 | Team Udayavani |

ಮೇಷ: ಮನುಷ್ಯನ ಪ್ರಾರ್ಥನೆ, ಭಗವಂತನ ಇಚ್ಛೆ, ಒಂದೇ ಆಗಿದ್ದರೆ ಎಲ್ಲವೂ ಸುಲಭ. ಉದ್ಯೋಗ ಸ್ಥಾನದಲ್ಲಿ ತಾತ್ಕಾಲಿಕ ನಿಶ್ಚಿಂತೆಯ ಪರಿಸ್ಥಿತಿ. ಉದ್ಯಮ, ವ್ಯವಹಾರದಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರ ಹಾನಿಕರ. ದೂರದಲ್ಲಿರುವ ನೆಂಟರ ಆಗಮನ.

Advertisement

ವೃಷಭ: ಇಂದು ಇಷ್ಟಾರ್ಥಸಿದ್ಧಿಯ ದಿನ ವೆನ್ನಬಹುದು. ಎಂದೋ ಆಗಬೇಕಾಗಿದ್ದ ಪದೋನ್ನತಿಯ ಯೋಗ. ಸರಕಾರಿ ಅಧಿಕಾರಿಗಳಿಗೆ ಇಷ್ಟಪಟ್ಟ ಊರಿಗೆ ವರ್ಗಾವಣೆ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ.

ಮಿಥುನ: ಬದುಕಿನಲ್ಲಿ ಪಾಠದ ರೂಪದಲ್ಲಿ ಬರುವ ಪರೀಕ್ಷೆಗಳು. ಉದ್ಯೋಗ ಸ್ಥಾನದಲ್ಲಿ ಬದಲಾದ ವಿಭಾಗಕ್ಕೆ ಹೊಂದಾಣಿಕೆ. ಹೊಸ ಸಹೋದ್ಯೋಗಿಗಳಿಗೆ ಜವಾಬ್ದಾರಿ ಹಂಚಿಕೆ. ಸ್ವಂತ ಉದ್ಯಮಕ್ಕೆ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ.

ಕರ್ಕಾಟಕ: ಹೊಣೆಗೇಡಿಗಳ ಸಡಿಲ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಉದ್ಯೋಗ ಸ್ಥಾನದಲ್ಲಿ ಸತತ ಪರಿಶ್ರಮಕ್ಕೆ ಗೌರವ. ಉದ್ಯಮಕ್ಕೆ ಎದುರಾಗಿದ್ದ ಕಾನೂನು ಸಮಸ್ಯೆ ನಿವಾರಣೆ. ನೌಕರರ ಯೋಗಕ್ಷೇಮಕ್ಕೆ ಯೋಜನೆ.

ಸಿಂಹ: ಕಳೆದ ಸಪ್ತಾಹದ ಕಾರ್ಯಗಳ ಅವಲೋಕನದಿಂದ ಸಮಾಧಾನ.ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆಗಳು ಆರಂಭ. ಉದ್ಯಮದ ಉತ್ಪನ್ನಗಳಿಗೆ ಹೊರಗಿನ ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಬೇಡಿಕೆ ಹೆಚ್ಚಳ.

Advertisement

ಕನ್ಯಾ: ವ್ಯವಹಾರದಲ್ಲಿ ದಿನಕ್ಕೊಂದು ಹೊಸ ಅನುಭವ. ಸರಕಾರಿ ಉದ್ಯೋಗಿಗಳಿಗೆ ಕೊಂಚ ಆತಂಕ. ಎಲೆಕ್ಟ್ರಾನಿಕ್ಸ್‌ ಉದ್ಯಮಗಳಿಗೆ ಅಧಿಕ ಬೇಡಿಕೆ. ವಯಸ್ಸು ಮೀರುವ ಭೀತಿಯಲ್ಲಿರುವ ಅವಿವಾಹಿತರಿಗೆ ಶೀಘ್ರ ವಿವಾಹ. ವೃತ್ತಿ ಪರಿಣತಿ ವೃದ್ಧಿಗೆ ಖಾಸಗಿ ವ್ಯವಸ್ಥೆ.

ತುಲಾ: ಅದೃಷ್ಟ ಒಲಿಯುವ ಸಮಯ ಸನ್ನಿಹಿತ. ಮನೋಬಲ ವೃದ್ಧಿಗೆ ಸಾಧನೆ ಮುಂದುವರಿಕೆ. ಹಳೆಯ ಪರಿಚಿತರಿಂದ ವೃತ್ತಿ ಪರಿಣತಿ ಹೊಂದಲು ಮಾರ್ಗದರ್ಶನ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ.

ವೃಶ್ಚಿಕ: ಕಾಲಕ್ಕೆ ಸರಿಯಾಗಿ ಬದಲಾಗುವ ಬದುಕಿಗೆ ಹೊಂದಿಕೊಳ್ಳುವ ಅನಿವಾರ್ಯತೆ. ಉದ್ಯೋಗ ಸ್ಥಾನದಲ್ಲಿ ತಾತ್ಕಾಲಿಕ ಹಿನ್ನಡೆಯ ಸಾಧ್ಯತೆ. ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆಯೊಂದಿಗೆ ನಿಧಾನಗತಿಯಲ್ಲಿ ಪ್ರಗತಿ.ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ.

ಧನು: ಕ್ಷಣಿಕವಾದ ಸುಖ- ಸಂತೋಷಗಳ ನಡುವಿನ ಬದುಕಿನಲ್ಲಿ ನಿತ್ಯ ಹೋರಾಟ. ಉದ್ಯೋಗದಲ್ಲಿ ಯೋಗ್ಯತೆಗೆ ಸರಿಯಾದ ಸ್ಥಾನ ಲಭ್ಯ. ಸಣ್ಣ ಪ್ರಮಾಣದ ಗೃಹೋದ್ಯಮ ಕೈಗೊಳ್ಳಲು ಸಿದ್ಧತೆ. ಸ್ವಂತ ಮನೆ ಹೊಂದುವ ಹಂಬಲ ಈಡೇರುವ ಭರವಸೆ.

ಮಕರ: ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿರ್ವಹಣೆ ಆರಂಭ. ಉದ್ಯಮಕ್ಕೆ ಸೇರ್ಪಡೆಯಾದ ಹೊಸ ನೌಕರರಿಗೆ ಆನಂದ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ.

ಕುಂಭ: ಸತ್ಕರ್ಮಗಳಿಂದ ಪುಣ್ಯಸಂಪತ್ತು ವೃದ್ಧಿ. ಉದ್ಯೋಗಸ್ಥಾನದಲ್ಲಿ ಹೊಸಬರಿಗೆ ಮಾರ್ಗದರ್ಶನದ ಜವಾಬ್ದಾರಿ. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ಸಾಮಗ್ರಿಗಳ ವಿತರಕರಿಗೆ ಬಿಡುವು ಇಲ್ಲದಷ್ಟು ಬೇಡಿಕೆ.

ಮೀನ: ಸಪ್ತಾಹದ ಪ್ರಾರಂಭದÇÉೇ ಕೆಲಸದ ಹೊರೆಯನ್ನು ಕಂಡು ಗಾಬರಿಯಾಗದಿರಿ. ಸಹೋದ್ಯೋಗಿಗಳಿಂದ ಸರ್ವವಿಧ ಸಹಾಯ. ಸರಕಾರಿ ಇಲಾಖೆಗಳವರಿಂದ ಸಕಾರಾತ್ಮಕ ಸ್ಪಂದನ. ಜನಸೇವಾ ಕಾರ್ಯಗಳು ಮುಂದುವರಿಕೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ವ್ಯವಸ್ಥೆ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next