Advertisement
ಆಫ್ಘನ್ ನಲ್ಲಿ ಇಸ್ಲಾಮಿಕ್ ತತ್ವಗಳೊಂದಿಗೆ ತಾಲಿಬಾನಿಗಳು ಉತ್ತಮ ಆಡಳಿತ ನಡೆಸಬೇಕು. ಅವರು ಬೇರೆ ದೇಶಗಳೊಂದಿಗೆ ಸ್ನೇಹ ಸಾಧಿಸಿಕೊಳ್ಳಲು ನೋಡಬೇಕು. ದೇಶದ ಎಲ್ಲ ಜನರ ಮಾನವ ಹಕ್ಕುಗಳನ್ನು ಕಾಪಾಡಬೇಕು ಹಾಗೂ ಎಲ್ಲರಿಗೂ ಗೌರವ ಸಿಗುವಂತೆ ನೋಡಿಕೊಳ್ಳಬೇಕು ಎಂದು ಫಾರೂಕ್ ಅಬ್ದುಲ್ಲಾ ನುಡಿದಿದ್ದಾರೆ.
ತಾಲಿಬಾನಿಗಳು ಸರಿಯಾದ ರೀತಿಯಲ್ಲಿ ಶರಿಯಾ ನೀತಿ ಅನುಸರಿಸಿದರೆ ಅವರು ಪೂರ್ತಿ ವಿಶ್ವಕ್ಕೇ ಉದಾಹರಣೆಯಾಗಬಲ್ಲರು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ತಾಲಿಬಾನಿಗಳು ಈ ಹಿಂದಿನಂತೆ ಮಾನವ ಹಕ್ಕು ಉಲ್ಲಂಘನೆ ಮಾಡಬಾರದು. ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡಿ ನಿಜ ವಾದ ಶರಿಯಾ ನಿಯಮ ಪಾಲಿಸಬೇಕು. 1990ರಲ್ಲಿ ಮಾಡಿ ದಂತೆಯೇ ಮಾಡಿದರೆ ಅದು ಇಡೀ ವಿಶ್ವಕ್ಕೇ ಅಪಾಯ ಎಂದು ಅವರು ಹೇಳಿದ್ದಾರೆ.
Related Articles
Advertisement
ಫಾರೂಕ್ ಮತ್ತು ಮೆಹ ಬೂಬಾ ಹೇಳಿಕೆಗಳು ನಮ್ಮ ದೇಶ ದಲ್ಲೂ ತಾಲಿಬಾನಿ ಮನಸ್ಥಿತಿಯ ಜನರಿದ್ದಾರೆ ಹಾಗೂ ಉಗ್ರರ ಏಜೆಂಟ್‌ಗಳಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ಸಾಬೀತು ಪಡಿಸಿದೆ.– ರಾಕೇಶ್ ಸಿನ್ಹಾ, ಬಿಜೆಪಿ ರಾಜ್ಯ ಸಭಾ ಸಂಸದ