Advertisement

Hoode: ಅಕ್ರಮ ಮರಳು ಸಾಗಾಟ

06:28 PM Aug 13, 2024 | Team Udayavani |

ಮಲ್ಪೆ: ಕೆಮ್ಮಣ್ಣು ಗ್ರಾ.ಪಂ ವ್ಯಾಪ್ತಿಯ ಹೂಡೆ ಕಡೆಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಪಿಕ್‌ಅಪ್‌ ವಾಹನವನ್ನು ಮಲ್ಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಸೋಮವಾರ ಬೆಳಗ್ಗೆ ಮಲ್ಪೆ ಠಾಣಾ ಉಪ ನಿರೀಕ್ಷಕ ಪ್ರವೀಣ್‌ ಕುಮಾರ್‌ ಅವರು ಖಚಿತ ಮಾಹಿತಿ ಮೇರೆಗೆ ಮರಳು ತುಂಬಿದ ವಾಹನವನ್ನು ತಡೆದು ನಿಲ್ಲಿಸಿದ್ದು, ಈ ವೇಳೆ ಚಾಲಕ ಪರಾರಿಯಾಗಿದ್ದಾನೆ. ವಾಹನವನ್ನು ಪರಿಶೀಲಿಸಿದಾಗ ಮರಳು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಮತ್ತು ವಾಹನಕ್ಕೆ ಸಂಬಂಧಿಸಿ ದಾಖಲೆಗಳು ಇರಲಿಲ್ಲ. ಚಾಲಕ ಎಲ್ಲಿಂದಲೋ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿರುವುದಾಗಿ ಕಂಡು ಬಂದಿದೆ.

ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next