ಮಲ್ಪೆ:ಹೂಡೆ ಸಮೀಪದ ಬೀಚ್ ನಲ್ಲಿ ನೀರಿಗೆ ಇಳಿದಿದ್ದ ಮೂವರು ಮಣಿಪಾಲದ ವಿದ್ಯಾರ್ಥಿಗಳು ನೀರು ಪಾಲಾಗಿ ಇಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ. ಮತ್ತೊರ್ವನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಬೆಂಗಳೂರಿನ ಷಣ್ಮುಖ (19), ನಿಶಾಂತ್ (19) ಸಾವನ್ನಪ್ಪಿದ್ದು, ನಾಪತ್ತೆಯಾದ ಹೈದರಾಬಾದಿನ ಶ್ರೀಕರನಿಗಾಗಿ (19)ಹುಡುಕಾಟ ನಡೆಸಲಾಗುತ್ತಿದೆ.
ವಾರಾಂತ್ಯದ ಹಿನ್ನಲೆಯಲ್ಲಿ ಸುಮಾರು 15ಮಂದಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಹೂಡೆ ಬೀಚ್ ನಲ್ಲಿ ವಿಹಾರಕ್ಕೆಂದು ಬಂದಿದ್ದರು. ಅಲ್ಲಿ ಕೆಲವರು ಸಮುದ್ರದ ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ಮೂವರು ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಟಿಹೋದರು. ಸ್ಥಳೀಯರು ಇಬ್ಬರ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಪೊಲೀಸರು ಮತ್ತು ಸ್ಥಳೀಯರು ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.
ರವಿವಾರ ಅಮಾವಾಸೆಯಾದ್ದರಿಂದ ಕಡಲ ಅಬ್ಬರ ಹೆಚ್ಚಾಗಿತ್ತು. ಈ ಮೂವರು ಮಾರಿಯಾ ಬೀಳುವ ಜಾಗದಲ್ಲಿ ( ಸಮುದ್ರತೀರದಲ್ಲಿರುವ ಹೊಂಡ)ಈಜುತ್ತಿದ್ದಾರೆನ್ನಲಾಗಿದೆ. ಇದು ಹೆಚ್ಚು ಅಪಾಯಕಾರಿ ಸ್ಥಳ.ಸ್ಥಳೀಯರು ಈ ಜಾಗಕ್ಕೆ ಹೋಗಬೇಡಿಯೆಂದು ಎಚ್ಚರಿಕೆ ನೀಡಿದ್ದರು ಬಹುತೇಕ ಮಂದಿ ಅವರ ಮಾತನ್ನು ಧಿಕ್ಕರಿಸಿ ಹೋಗುತ್ತಿದ್ದಾರೆನೆಲ್ಲಾಗಿದೆ. ಅಲ್ಲದೆ ಮಲ್ಪೆ ಬೀಚ್ ನಂತೆ ಹೂಡೆಯಲ್ಲಿ ಯಾವುದೇ ಜೀವರಕ್ಷಕ ತಂಡಗಳು ಇರುವುದಿಲ್ಲ.