Advertisement

ಪರೇಶ್‌ ಹತ್ಯೆ ಸಿಬಿಐ ತನಿಖೆ

06:00 AM Dec 14, 2017 | |

ಬೆಂಗಳೂರು :ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ಹೊನ್ನಾವರದ ಪರೇಶ್‌ ಮೇಸ್ತ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ಬುಧವಾರ ಪರಪ್ಪನ ಅಗ್ರಹಾರದ ಕೇಂದ್ರಕಾರಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪರೇಶ್‌ ತಂದೆ ನೀಡಿರುವ ಮನವಿಯ ಆಧಾರದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ ಎಂದು ಹೇಳಿದರು.

ಪರೇಶ್‌ ಮೇಸ್ತ¤ ಸಾವಿನ ನಂತರ ಕರಾವಳಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಮೇಸ್ತ¤ ತಂದೆಯ ಕೋರಿಕೆ ಮೇರಿಗೆ ಪ್ರಕರಣವನ್ನು ಸಿಬಿಐಗೆ ನೀಡುತ್ತಿದ್ದೇವೆ. ಬಿಜೆಪಿ ನಾಯಕರ ಅಥವಾ ಹಿಂದು ಸಂಘಟನೆಗಳ ಒತ್ತಡಕ್ಕೆ ಮಣಿಸಿದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹಿಂದಿನ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣ, ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದೆವು. ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸ್ಪಷ್ಟ ವರದಿ ನೀಡಿದೆ ಎಂಬ ಮಾಹಿತಿ ನೀಡಿದರು.

ಡಿ.ಕೆ.ರವಿ ಪ್ರಕರಣದಲ್ಲಿ ಸರ್ಕಾರದ ಮೇಲೆ ಆರೋಪ ಮಾಡಿರುವ ಬಿಜೆಪಿಯವರು, ರವಿಯವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ನಂದಿತಾ ಪ್ರಕರಣದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ವಿರುದ್ಧ ಆರೋಪ ಮಾಡಿ,  ಅವರೇ ಮರಣೋತ್ತರ ವರದಿಯನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಯವರು  ಪರೇಶ್‌ ಸಾವಿನ ಪ್ರಕರಣವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ವಿರೋಧ ಪಕ್ಷದವರಿಗೆ ಅನುಭವ  ಹಾಗೂ ಕಾಮನ್ಸೆನ್ಸ್‌ ಇಲ್ಲ. ಪರೇಶ್‌ ಸಾವಿನ ಪ್ರಕರಣದ ಎಫ್ಎಸ್‌ಎಲ್‌ ಅಂತಿಮ ವರದಿ ಬರಲಿ, ಆರೋಪಿಗಳು ಯಾರೇ ಆಗಲಿ ಬಂಧಿಸಲಿದ್ದೇವೆ ಎಂಬ ಎಚ್ಚರಿಕೆ ನೀಡಿದರು.

Advertisement

ಉತ್ತರವೀಗ ಶಾಂತ
ಕಳೆದೊಂದು ವಾರದಿಂದ ಹೊತ್ತಿ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಇದೀಗ ಶಾಂತವಾಗಿದೆ. ಹೊನ್ನಾವರ, ಕುಮಟಾ, ಶಿರಸಿಯಲ್ಲಿ  ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಎಲ್ಲ ಸಮುದಾಯಗಳ ಶಾಂತಿ ಸಭೆ ನಡೆಸಿರುವುದು ಫ‌ಲ ನೀಡಿದೆ. ಜಿಲ್ಲಾ ಪೊಲೀಸ್‌ ಗುಪ್ತದಳಕ್ಕೆ ಬಂದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಶಾಂತ ವಾತಾವರಣವಿದೆ. ಜನ ಮುಕ್ತವಾಗಿ ಪಟ್ಟಣಗಳಲ್ಲಿ ಸಂಚರಿಸಲು ತೊಡಗಿದ್ದಾರೆ. ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಮುಂಡಗೋಡ, ಸಿದ್ದಾಪುರ ಪಟ್ಟಣಗಳು ಶಾಂತವಾಗಿವೆ. ಎಲ್ಲೆಡೆ ಪೊಲೀಸ್‌ ಬಂದೋಬಸ್ತ್ ಮುಂದುವರಿದಿದೆ. ಆಯಕಟ್ಟಿನ ಜಾಗಗಳಲ್ಲಿ ನಿಗಾ ವಹಿಸಲಾಗಿದೆ.

ಕುರಿತು ಸರ್ಕಾರ ಬಿಡುಗಡೆ ಮಾಡಿದ ಪ್ರಶ್ನೋತ್ತರಗಳಿರುವ ಫೊರೆನ್ಸಿಕ್‌ ವರದಿ ನಿಜವಾದ ವರದಿಯಲ್ಲ. ಕೊಲೆ ಪ್ರಕರಣ ಮುಚ್ಚಿಹಾಕಿ ಇದೊಂದು ಆಕಸ್ಮಿಕ ಸಾವು ಎಂದು ಬಿಂಬಿಸಲು ಸರ್ಕಾರ ವರದಿಯನ್ನೇ ತಿರುಚಿದೆ.
– ಶೋಭಾ ಕರಂದ್ಲಾಜೆ, ಮಾಜಿ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next