Advertisement

Honnavar: ಲಿಂಗನಮಕ್ಕಿಯಿಂದ 6000 ಕ್ಯೂಸೆಕ್ಸ್ ನೀರು ಬಿಡುಗಡೆ; ನೆರೆ ಭೀತಿ ಇಲ್ಲ

01:30 PM Aug 01, 2024 | Team Udayavani |

ಹೊನ್ನಾವರ: ಆ.1ರ ಗುರುವಾರ (ಇಂದು) ಮುಂಜಾನೆ 8 ಗಂಟೆಗೆ ಲಿಂಗನಮಕ್ಕಿ ಜಲಾಶಯ ನೀರಿನ ಮಟ್ಟ 1814 ಅಡಿ ತುಂಬಿದ್ದು 1816 ಅಡಿ ಆದ ಮೇಲೆ ಬಿಡಬೇಕಾದ ನೀರನ್ನು ಸ್ವಲ್ಪ ಸ್ವಲ್ಪವಾಗಿ ಇಂದಿನಿಂದಲೇ ಬಿಡಲು ಆರಂಭಿಸಲಾಗಿದೆ.

Advertisement

ಆಣೆಕಟ್ಟಿನ 3 ದ್ವಾರಗಳನ್ನು ತೆರೆದು ಅಂದಾಜು 6000 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಈ ನೀರು ನಾಳೆ ಮುಂಜಾನೆಯ ಸುಮಾರಿಗೆ ಜಲಪಾತದಿಂದ ಧುಮುಕಿ ಶರಾವತಿ ಕೊಳ್ಳವನ್ನು ಸೇರಿಕೊಳ್ಳಲಿದೆ.

ಗೇರಸೊಪ್ಪಾದ ಟೇಲರೀಸ್ ಆಣೆಕಟ್ಟಿನ ಹಿಂದಿನ 3.5 ಕಿಮೀ ಉದ್ದದ ಕೊಳ್ಳದಲ್ಲಿ 10 ಮೀ. ಜಲ ಸಂಗ್ರಹಕ್ಕೆ ಅವಕಾಶವಿದೆ. ಆದ್ದರಿಂದ ಗೇರಸೊಪ್ಪೆ ಆಣೆಕಟ್ಟಿನಿಂದ ನೇರ ನೀರು ಬಿಡುವ ಪ್ರಶ್ನೆ ಇಲ್ಲ. ಟೇಲರೀಸ್ ಯೋಜನೆಯಿಂದ ಗರಿಷ್ಠ ವಿದ್ಯುತ್ ಉತ್ಪಾದಿಸಿ ಹೊರ ಬರುವ ನೀರು ಮತ್ತು ಮಳೆಯ ನೀರು ಮಾತ್ರ ಶರಾವತಿ ಕೊಳ್ಳದಲ್ಲಿದೆ. ಆದ್ದರಿಂದ ನೆರೆ ಭೀತಿ ಅಗತ್ಯ ಇಲ್ಲ ಎಂದು ಪ್ರಕಟಿಸಲಾಗಿದೆ.

Advertisement

ಆಣೆಕಟ್ಟಿನ ಗರಿಷ್ಠ ಜಲಮಟ್ಟ 1819 ಆಗಿದ್ದು, ಇನ್ನೂ 5 ಅಡಿ ತುಂಬಿಸಬೇಕಾಗಿದೆ. ಮಳೆ ಪ್ರಮಾಣ, ಒಳಹರಿವು ಗಮನಿಸಿ ಈಗಿನಿಂದಲೇ ಸಮತೋಲನ ಸಾಧಿಸಿ ನೆರೆ ಆಗದಂತೆ, ಆಣೆಕಟ್ಟು ತುಂಬುವಂತೆ ಕೆಪಿಸಿ ಎಚ್ಚರಿಕೆ ವಹಿಸುತ್ತಿದ್ದು, ಶರಾವತಿ ಕೊಳ್ಳದ ಜನ ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next