Advertisement

ಶಿಕ್ಷಣದಲ್ಲಿ ಧರ್ಮ-ರಾಜಕಾರಣದ ಹಸ್ತಕ್ಷೇಪ ಬೇಡ

02:11 PM Feb 15, 2022 | Team Udayavani |

ಹೊನ್ನಾಳಿ: ಶಿಕ್ಷಣದಲ್ಲಿ ಧರ್ಮ ಮತ್ತುರಾಜಕಾರಣ ಬೆರೆಯಬಾರದು.ಇವರೆಡೂ ಬೆರೆತರೆ ವಿದ್ಯಾರ್ಥಿಗಳುಶಿಕ್ಷಣದಿಂದ ವಂಚಿತರಾಗುವುದು ನಿಶ್ಚಿತಎಂದು ಸಿಎಂ ರಾಜಕೀಯ ಕಾರ್ಯದರ್ಶಿಎಂ.ಪಿ. ರೇಣುಕಾಚಾರ್ಯ ಹೇಳಿದರು.ಸೋಮವಾರ 9 ಮತ್ತು 10ನೇತರಗತಿಗಳು ಪ್ರಾರಂಭವಾದ ಹಿನ್ನೆಲೆಯಲ್ಲಿಪಟ್ಟಣದ ಸರ್ಕಾರಿ ಪ್ರೌಢಶಾಲೆಗೆಭೇಟಿ ನೀಡಿದ್ದ ಸಂದರ್ಭದಲ್ಲಿ ಅವರುಮಾತನಾಡಿದರು.

Advertisement

ಮಕ್ಕಳ ಮನಸ್ಸುಶುದ್ಧ ಹಾಲಿನಷ್ಠೆà ಶ್ರೇಷ್ಠವಾದುದು.ಕಿಡಿಗೇಡಿಗಳು ಹಿಜಾಬ್‌ ಮತ್ತು ಕೇಸರಿ ಬಗ್ಗೆಸಲ್ಲದ ವಿಷಯವನ್ನು ಸೃಷ್ಟಿಸಿದ್ದಾರೆ. ಕೇವಲ6 ವಿದ್ಯಾರ್ಥಿನಿಯರಿಂದ ಪ್ರಾರಂಭವಾದಪ್ರಕರಣ ಇಂದು ರಾಜ್ಯಾದ್ಯಂತ ಹಬ್ಬಲುಕಾರಣವಾಗಿದೆ. ಪ್ರೌಢಶಾಲಾ ಮಕ್ಕಳುತಲೆಕೆಡಿಸಿಕೊಳ್ಳದೆ ಅಭ್ಯಾಸದ ಕಡೆ ಗಮನನೀಡಬೇಕೆಂದರು.ಇದುವರೆಗೆ ಎಲ್ಲಾ ವಿದ್ಯಾರ್ಥಿಗಳುಏಕೋ ಮನೋಭಾವದಿಂದಹಾಗೂ ಸಾಮರಸ್ಯದಿಂದ ಶಿಕ್ಷಣಪಡೆಯುತ್ತಿದ್ದರು.

ಈಗ ಎಲ್ಲೋ ಒಂದುಸಣ್ಣ ಕಿಡಿ ಹೊತ್ತಿಕೊಂಡು ಬೆಳೆಯುವಮಕ್ಕಳ ಮನಸ್ಸಿನಲ್ಲಿ ಕ್ರೋಧ ಉಂಟುಮಾಡುವುದು ವಿಷಾದನೀಯ.ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರಕಡ್ಡಾಯ ಮಾಡದೇ ಇದ್ದಿದ್ದರೆ ಉಳ್ಳವರಮಕ್ಕಳು ಹೆಚ್ಚಿನ ಬೆಲೆ ಬಟ್ಟೆಗಳನ್ನುಧರಿಸಿಕೊಂಡು ಶಾಲೆಗೆ ಬರುತ್ತಿದ್ದರು.ಇದರಿಂದ ಬಡ ಮಕ್ಕಳ ಮೇಲೆದುಷ್ಪರಿಣಾಮ ಉಂಟಾಗುತ್ತಿತ್ತು. ಸಮವಸ್ತ್ರಧರಿಸುವುದರಿಂದ ಮೇಲು-ಕೀಳುಎನ್ನುವ ಮನೋಭಾವ ತೊಲಗಿ ಎಲ್ಲರೂಒಂದೇ ಎನ್ನುವ ದೃಷ್ಟಿಕೋನ ಬರುತ್ತದೆಎಂದು ಅಭಿಪ್ರಾಯಪಟ್ಟರು.

ಹಿಜಾಬ್‌-ಕೇಸರಿ ಪ್ರಕರಣನ್ಯಾಯಾಲಯದಲ್ಲಿರುವುದರಿಂದಹಾಗೂ ತರಗತಿಯೊಳಗೆ ಯಾರೂಹಿಜಾಬ್‌ ಮತ್ತು ಕೇಸರಿ ಧರಿಸಿತೆರಳುವಂತಿಲ್ಲ. ಪೂರ್ಣ ಪ್ರಮಾಣದತೀರ್ಪು ಬರುವವರೆಗೆ ಎಲ್ಲರೂಕಾಯಬೇಕು ಎಂದು ನ್ಯಾಯಾಲಯಮೌಖೀಕವಾಗಿ ಹೇಳಿದೆ. ಅದರಂತೆಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಿದೆ.ನ್ಯಾಯಾಲಯದ ಮೌಖೀಕ ಆದೇಶ ಮತ್ತುಸರ್ಕಾರದ ಆದೇಶವನು °ಧಿಕ್ಕರಿಸಿದರೆಅಧಿ ಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ.ನ್ಯಾಯಾಲಯಕ್ಕೆ ಹಾಗೂ ಸರ್ಕಾರಕ್ಕೆಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ.ಕೊರೊನಾದಿಂದ ಈಗಾಗಲೇ ಎರಡುವರ್ಷಗಳ ಶೈಕ್ಷಣಿಕ ಅವಧಿ ಹಾಳಾಗಿದೆ.ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದವಿದ್ಯಾರ್ಥಿಗಳು ತಂಟೆ-ತಕರಾರುಮಾಡದೆ ವಿದ್ಯಾಭ್ಯಾಸದತ್ತ ಚಿತ್ತಹರಿಸಬೇಕು ಎಂದರು.

ಉಪವಿಭಾಗಾಧಿ ಕಾರಿ ತಿಮ್ಮಣ್ಣಹುಲುಮನಿ ಮಾತನಾಡಿದರು. ಪುರಸಭೆಸದಸ್ಯ ಕೆ.ವಿ. ಶ್ರೀಧರ್‌, ತಹಶೀಲ್ದಾರ್‌ಬಸನಗೌಡ ಕೋಟೂರ, ಡಿವೈಎಸ್‌ಪಿಡಾ| ಕೆ.ಎಂ. ಸಂತೋಷಕುಮಾರ್‌, ಬಿಇಒಜಿ. ರಾಜೀವ್‌, ತಾಪಂ ಇಒ ರಾಮಾಭೋವಿ, ಸಿಪಿಐ ದೇವರಾಜ್‌, ಪಿಎಸ್‌ಐಬಸವರಾಜ್‌, ಮುಖ್ಯೋಪಾಧ್ಯಾಯರಂಗನಾಥ್‌ ಹಾಗೂ ಅ ಧಿಕಾರಿಗಳುಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next