Advertisement

ರಾಜ್ಯದ ಜನ ಕಾಂಗ್ರೆಸ್‌ ಪ್ರಹಸನ ನಂಬಲ್ಲ

12:30 PM Feb 27, 2022 | Team Udayavani |

ಹೊನ್ನಾಳಿ: ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡುವಿಳಾಸ ಇಲ್ಲದಂತಾಗಿರುವ ಕಾಂಗ್ರೆಸ್‌ ಪಕ್ಷಕರ್ನಾಟಕದಲ್ಲಿ ಇಲ್ಲಸಲ್ಲದ ಕಾರ್ಯಕ್ರಮಗಳನ್ನುಹಮ್ಮಿಕೊಂಡು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.ರಾಜ್ಯದ ಜನರು ರಾಜ್ಯ ಕಾಂಗ್ರೆಸ್‌ನ ಪ್ರಹಸನವನ್ನುನಂಬುವುದಿಲ್ಲ ಎಂದು ಸಿಎಂ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯಹೇಳಿದರು.

Advertisement

ಹೊನ್ನಾಳಿ-ನ್ಯಾಮತಿ ತಾಲೂಕು ಬಿಜೆಪಿ ಮಂಡಲವತಿಯಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಕಾಂಗ್ರೆಸ್‌ ಜನ ವಿರೋಧಿ ನೀತಿ ವಿರುದ್ಧ ಶನಿವಾರಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರುಮಾತನಾಡಿದರು. ರಾಜ್ಯದ ಜನರ ಅನೇಕ ಸಮಸ್ಯಗಳಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಮಾಡುವುದನ್ನು ಬಿಟ್ಟುಒಂದೇ ಅಜೆಂಡಾ ಇಟ್ಟುಕೊಂಡು ಶಾಸನ ಸಭೆಯಲ್ಲಿಕಾಂಗ್ರೆಸ್‌ ಶಾಸಕರು ಬಾವಿಗಿಳಿದು ಪ್ರತಿಭಟಿಸಿದರು.ಅಲ್ಲದೆ ಅಹೋರಾತ್ರಿ ಧರಣಿ ನಡೆಸಿ ಸಮಯ ಹಾಳುಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

2013ರಿಂದ 2018ರವರೆಗೆ ಸಿದ್ದರಾಮಮಯ್ಯನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿತ್ತು.ಅಂದು ಮೇಕೆದಾಟು ಯೋಜನೆ ಬಗ್ಗೆ ಕಿಂಚಿತ್ತೂಚಿಂತಿಸದ ಕಾಂಗ್ರೆಸ್‌, ಈಗ ದಿಢೀರನೇ ಎದ್ದುಕುಳಿತು ಮೇಕೆದಾಟು ಯೋಜನೆಗೆ ಪಾದಯಾತ್ರೆಹಮ್ಮಿಕೊಳ್ಳುವ ನಾಟಕ ಪ್ರದರ್ಶನ ಮಾಡುತ್ತಿದೆ.ಕಾಂಗ್ರೆಸ್‌ನವರು ಏನೇ ಆಟವಾಡಿದರೂ2023ರ ವಿಧಾನಸಭಾ ಚುನಾವಣೆಯಲ್ಲಿಮತ್ತೆ ಬಿಜೆಪಿ ಅ ಧಿಕಾರಕ್ಕೆ ಬರುತ್ತದೆ ಎಂದುವಿಶ್ವಾಸ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವಾತಂತ್ರÂ ತಂದುಕೊಟ್ಟ ಅಂದಿನ ಕಾಂಗ್ರೆಸ್‌ ಬೇರೆ, ಇಂದಿನ ಕಾಂಗ್ರೆಸ್‌ಬೇರೆ. ಇಂದಿನ ಕಾಂಗ್ರೆಸ್‌ ಕೇವಲ ಕುರ್ಚಿಗಾಗಿಬಡಿದಾಡುತ್ತಿರುವ ಇಟಲಿ ಕಾಂಗ್ರೆಸ್‌ ಎಂದುಟೀಕಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್‌ಮಾತನಾಡಿ, ಮಾಜಿ ಶಾಸಕ ಡಿ.ಜಿ. ಶಾಂತನಗೌಡಅವರು ನಮ್ಮ ಶಾಸಕ ಎಂ.ಪಿ. ರೇಣುಕಾಚಾರ್ಯಅವರನ್ನು ಏಕವಚನದಿಂದ ಟೀಕೆ ಮಾಡುತ್ತಿದ್ದಾರೆ.ಇದನ್ನು ಬಿಟ್ಟರೆ ಅವರಿಗೆ ಬೇರೆ ಯಾವ ಕೆಲಸವೂಇಲ್ಲವೆಂದು ಕಾಣುತ್ತದೆ. ಶಾಂತನಗೌಡರು ಎರಡುಬಾರಿ ಶಾಸಕರಾಗಿದ್ದರೂ ರೇಣುಕಾಚಾರ್ಯರಂತೆಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಜನರು ತಿರಸ್ಕರಿಸಿದಮೇಲೆ ಹತಾಶ ಮನೋಭಾವದಿಂದ ಟೀಕಿಸುತ್ತಿದ್ದಾರೆಎಂದು ಕುಟುಕಿದರು

Advertisement

Udayavani is now on Telegram. Click here to join our channel and stay updated with the latest news.

Next