Advertisement

28ರಂದು ನೂತನ ಉಪವಿಭಾಗಾಧಿಕಾರಿ ಕಚೇರಿ ಉದ್ಘಾಟನೆ

03:47 PM Feb 25, 2022 | Team Udayavani |

ಹೊನ್ನಾಳಿ: ಚನ್ನಗಿರಿ, ನ್ಯಾಮತಿ ಮತ್ತು ಹೊನ್ನಾಳಿತಾಲೂಕು ವ್ಯಾಪ್ತಿಗೆ ಸಂಬಂ ಧಿಸಿದಂತೆ ನೂತನಉಪವಿಭಾಗಾಧಿಕಾರಿ ಕಚೇರಿ ಮಂಜೂರಾಗಿದ್ದು,ಫೆ. 28ರಂದು ಅಧಿಕೃತವಾಗಿ ಉದ್ಘಾಟನೆನೆರವೇರಿಸಲಾಗುವುದು ಎಂದು ಜಿಲ್ಲಾ ಧಿಕಾರಿಮಹಾಂತೇಶ ಬೀಳಗಿ ತಿಳಿಸಿದರು.

Advertisement

ಗುರುವಾರ ಪಟ್ಟಣದ ಅಗಳ ಮೈದಾನಕ್ಕೆಭೇಟಿ ನೀಡಿ ಉಪವಿಭಾಗಾಧಿಕಾರಿ ಕಚೇರಿಉದ್ಘಾಟನಾ ಸಮಾರಂಭ ನಡೆಯುವ ಸ್ಥಳಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆಅವರು ಮಾತನಾಡಿದರು. ಈಗ ತಾತ್ಕಾಲಿಕವಾಗಿತಹಶೀಲ್ದಾರ್‌ ಕಚೇರಿ ಮೇಲ್ಭಾಗದ ಕಟ್ಟಡದಲ್ಲಿಉಪವಿಭಾಗಾಧಿಕಾರಿಯವರಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಎಚ್‌.ಕಡದಕಟ್ಟೆ ಸಮೀಪದಲ್ಲಿರುವ ತುಂಗಾ ಮೇಲ್ದಂಡೆಕಚೇರಿ ವ್ಯಾಪ್ತಿಯ ಶಿಥಿಲಗೊಂಡ ಕಟ್ಟಡವನ್ನು ರಿಪೇರಿಮಾಡಿಸಿ ನೂತನ ಉಪವಿಭಾಗಾಧಿಕಾರಿ ಕಚೇರಿಆರಂಭಿಸಲಾಗುವುದು. ಯುಟಿಪಿ ಕಚೇರಿಯನ್ನುನೀರಾವರಿ ಇಲಾಖೆಗೆ ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗಿದೆ.

ಕಚೇರಿ ಆರಂಭಕ್ಕೆ ಅಗತ್ಯವಾದಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿಮಾಡಲಾಗಿದೆ. ಅನುದಾನ ಬಿಡುಗಡೆಯಾದನಂತರ ಅಗತ್ಯ ಮೂಲ ಸೌಲಭ್ಯ ಹಾಗೂಪೀಠೊಪಕರಣಗಳನ್ನು ಒದಗಿಸಲಾಗುವುದು.ಉಪವಿಭಾಗಾಧಿಕಾರಿ ಕಚೇರಿಗೆ ಅಗತ್ಯವಿರುವ 2ಪ್ರಥಮದರ್ಜೆ ಸಹಾಯಕರು, 2 ದ್ವಿತೀಯ ದರ್ಜೆಸಹಾಯಕರು ಹಾಗೂ ಗ್ರೇಡ್‌-2 ತಹಶೀಲ್ದಾರನ್ನುನೇಮಕ ಮಾಡಲಾಗಿದೆ ಎಂದರು.ಉಪವಿಭಾಗಾಧಿಕಾರಿ ಕಚೇರಿಗೆ ಅಗತ್ಯವಿರುವಅಭಿಲೇಖಾಲಯವನ್ನು ಸದ್ಯಕ್ಕೆ ತಾಲೂಕುಕಚೇರಿಯಲ್ಲಿಯೇ ವ್ಯವಸ್ಥೆ ಮಾಡಿಕೊಡಲಾಗುವುದುಎಂದರು.

ಇನ್ನು ಮುಂದೆ ಎಸಿ ಕಚೇರಿಯಲ್ಲಿಆಗಬೇಕಾದ ಕೆಲಸ ಕಾರ್ಯಗಳಿಗೆ ಮೂರುತಾಲೂಕುಗಳ ಜನತೆ ದಾವಣಗೆರೆಗೆಹೋಗಬೇಕಾಗಿಲ್ಲ. ದಾವಣಗೆರೆಯಿಂದ ಚನ್ನಗಿರಿ,ನ್ಯಾಮತಿ, ಮತ್ತು ಹೊನ್ನಾಳಿಗೆ ಸಂಬಂಧಪಟ್ಟ ಎಲ್ಲಾದಾಖಲೆಗಳನ್ನು ಇಲ್ಲಿಗೆ ವರ್ಗಾಯಿಸಲಾಗುವುದು.ಫೆ. 28ರಂದೇ ಶಾಸಕ ಎಂ.ಪಿ. ರೇಣುಕಾಚಾರ್ಯಅವರ ಜನ್ಮದಿನವಿದೆ. ಹಾಗಾಗಿ ಪಟ್ಟಣದಅಗಳ ಮೈದಾನದಲ್ಲಿಯೇ ಎಸಿ ಕಚೇರಿಉದ್ಘಾಟನೆಯ ಜೊತೆಗೆ ಶಾಸಕರ ಜನ್ಮದಿನವನ್ನೂಆಚರಿಸಲಾಗುವುದು. ಈ ಸಂದರ್ಭದಲ್ಲಿ ಒಂದುಸಾವಿರ ಫಲಾನುಭವಿಗಳಿಗೆ ಸರ್ಕಾರದ ವಿವಿಧಸೌಲಭ್ಯಗಳನ್ನು ವಿತರಿಸಲಾಗುವುದು ಎಂದುಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next