Advertisement

ಶಾಸಕರಿಂದ ನಿತ್ಯ ಅನ್ನದಾಸೋಹ

04:12 PM Apr 16, 2020 | Naveen |

ಹೊನ್ನಾಳಿ: ಲಾಕ್‌ಡೌನ್‌ ಮುಗಿಯುವವರೆಗೂ ಕೋವಿಡ್  ವಿರುದ್ಧ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ಅನ್ನದಾಸೋಹ ಮಾಡುವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಪ.ಪಂ ಆವರಣದಲ್ಲಿ ಪಪಂ 45 ಪೌರ ನೌಕರರಿಗೆ ತಾಲೂಕು ಆಡಳಿತದಿಂದ ನಿತ್ಯದ ಆಹಾರ ಪದಾರ್ಥಗಳ ಕಿಟ್‌ ವಿತರಿಸಿ ಅವರು ಮಾತನಾಡಿದರು. ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆರು, ಪೊಲೀಸರು, ಅಲೆಮಾರಿ ಜನಾಂಗಕ್ಕೆ ಹಾಗೂ ಕೊರೊನಾ ವಿರುದ್ಧ ಹೋರಾಟ ನಡೆಸಿದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ನಾಗರಿಕರಿಗೆ ದಿನ ನಿತ್ಯ ಮಧ್ಯಾಹ್ನದ ಆಹಾರ ಪೂರೈಸುವ ಕಾರ್ಯ ಹಮ್ಮಿಕೊಂಡಿರುತ್ತೇನೆ ಎಂದರು.

ಪಪಂ ಮುಖ್ಯಾ ಧಿಕಾರಿ ಎಸ್‌.ಆರ್‌.ವೀರಭದ್ರಯ್ಯ, ತಾಪಂ ಪ್ರಭಾರಿ ಅಧ್ಯಕ್ಷ ಕೆ.ಎಲ್‌. ರಂಗಪ್ಪ, ಇಒ ಗಂಗಾಧರಮುರ್ತಿ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next