Advertisement

ಕೋವಿಡ್ ವಿರುದ್ಧ ಹೋರಾಟ ಅನಿವಾರ್ಯ: ರೇಣು

04:43 PM May 01, 2020 | Naveen |

ಹೊನ್ನಾಳಿ: ಕೋವಿಡ್ ವೈರಸ್‌ ವಿರುದ್ಧ ಎಲ್ಲರೂ ಹೋರಾಟ ಮಾಡುವುದು ಅನಿವಾರ್ಯ. ದಾವಣಗೆರೆ ಹಸಿರು ವಲಯಕ್ಕೆ ಸೇರ್ಪಡೆಯಾದ ಬಳಿಕ ವೈರಸ್‌ ಸೋಂಕಿತ ವ್ಯಕ್ತಿ ಕಂಡು ಬಂದಿರುವುದು ಆತಂಕಕಾರಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಹನುಮಸಾಗರ, ಎಚ್‌.ಜಿ. ಹಳ್ಳಿ, ಹತ್ತೂರು, ಕತ್ತಿಗೆ, ಗುಡ್ಡೆಹಳ್ಳಿ ಬೆಳಗುತ್ತಿ, ಕೆಂಚಿಕೊಪ್ಪ ಸೇರಿದಂತೆ 12 ಗ್ರಾಪಂಗಳ ವ್ಯಾಪ್ತಿಯ ಬಡವರು, ಕೂಲಿ ಕಾರ್ಮಿಕರಿಗೆ ಗುರುವಾರ ಆಹಾರ ಕಿಟ್‌ ಮತ್ತು ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ನನ್ನ ಜನಸೇವೆಯ ಕಡೆ ಮಾತ್ರ ಗಮನ ಹರಿಸಿದ್ದೇನೆ. ನನ್ನ ಬಗ್ಗೆ ಹಲವಾರು ವರ್ಷಗಳಿಂದ ವಿರೋಧಿಗಳು ಇಲ್ಲಸಲ್ಲದ ಟೀಕೆ ಟಿಪ್ಪಣಿಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇವರ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಪೌರಕಾರ್ಮಿಕರು, ಕೂಲಿ ಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯರ್ತೆಯರು, ದುರ್ಬಲರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ ತಾಪಂ, ತಾಲೂಕು ಕಚೇರಿ, ಪಟ್ಟಣ ಪಂಚಾಯತ್‌, 4 ಚೆಕ್‌ಪೋಸ್ಟ್‌ಗಳು, ಕೆಇಬಿ, ಕೃಷಿ ಇಲಾಖೆ, ನಾಡಕಚೇರಿ, ಕಂದಾಯ ಸಿಬ್ಬಂದಿಗೆ ದಿನನಿತ್ಯ ಊಟ ನೀಡಲಾಗುತ್ತಿದೆ. ಲಾಕ್‌ಡೌನ್‌ ಮುಗಿಯುವವರಿಗೆ ಎಷ್ಟು ಸಾವಿರ ಜನರಿಗಾದರೂ ಮಧ್ಯಾಹ್ನದ ಊಟ ಮತ್ತು ದುರ್ಬಲರಿಗೆ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಲು ಸಿದ್ಧ ಎಂದು ಘೋಷಿಸಿದರು. ಗ್ರಾಪಂ ಚನ್ನನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್‌, ತಾಪಂ ಸದಸ್ಯ ಸಿ.ಆರ್‌. ಶಿವಾನಂದ್‌, ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರು, ತಾಪಂ ಇಒ ಗಂಗಾಧರಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next