Advertisement
“ಹೊನ್ನಮಾತು’ ಯೋಜನೆಯ ಮೊದಲ ಕಂತಿನಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಸಾಹಿತಿಗಳ ವಿಚಾರ ಮಂಡನೆ ದೃಶ್ಯೀಕರಣ ಮಾಡಲಾಗುವುದು. ಮೊದಲ ಕಂತು ಯಶಸ್ವಿಗೊಂಡರೆ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲಿ ನೆಲೆಸಿರುವ ಸಾಹಿತಿಗಳ ವಿಚಾರಗಳನ್ನು ದಾಖಲಿಸುವ ಪ್ರಯತ್ನಕ್ಕೆ ಅಕಾಡೆಮಿ ಮುಂದಾಗಲಿದೆ.
Related Articles
Advertisement
ಯೂ ಟೂಬ್, ಫೇಸ್‌ಬುಕ್ಕಿನಲ್ಲಿ ಲಭ್ಯ: ಸಾಹಿತಿಗಳ ಮನೆಯಲ್ಲಿ ದೃಶ್ಯೀಕರಣ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ವಿಡಿಯೋಗ್ರಾಫರ್‌ಗಳಿಗೆ ಗುತ್ತಿಗೆ ನೀಡಿದ್ದು, ಅವರು ದೃಶ್ಯೀಕರಣ, ಸಂಕಲನ (ಎಡಿಟಿಂಗ್) ಸೇರಿದಂತೆ ಎಲ್ಲ ಕಾರ್ಯಗಳನ್ನು ಮುಗಿಸಿ ಸಿಡಿ ರೂಪದಲ್ಲಿ ಸಾಹಿತಿಗಳ ವಿಚಾರ ದಾಖಲೆಯನ್ನು ಅಕಾಡೆಮಿಗೆ ನೀಡಲಿದ್ದಾರೆ. ನಂತರ ಅಕಾಡೆಮಿ ಅದನ್ನು ಯೂ ಟೂಬ್, ಅಕಾಡೆಮಿ ವೆಬ್‌ಸೈಟ್ ಹಾಗೂ ಫೇಸ್‌ಬುಕ್ಕಿಗೆ ಅಳವಡಿಸಲಿದೆ.
ಹೊನ್ನ ಮಾತು ಯೋಜನೆಯನ್ನು ನಿರಂತರವಾಗಿ ಮುಂದುವರಿಸಿ ಹೆಚ್ಚು ಸಾಹಿತಿಗಳ ವಿಚಾರಗಳನ್ನು ದಾಖಲಿಸುವ ಆಲೋಚನೆ ಅಕಾಡೆಮಿಗಿದೆ. ಸರ್ಕಾರದಿಂದ ಅಕಾಡೆಮಿಗೆ ದೊರೆಯುವ ಅನುದಾನ ಬಳಸಿಕೊಂಡು ಹೊನ್ನ ಮಾತು ಪ್ರಕಟಿಸಲಾಗುವುದು. ಒಬ್ಬ ಸಾಹಿತಿಯ ಅರ್ಧಗಂಟೆಯ ದೃಶ್ಯೀಕರಣ, ಸಂಕಲನ ಸೇರಿದಂತೆ ಎಲ್ಲ ಕಾರ್ಯ ಮುಗಿದು ಸಿಡಿ ರೂಪದಲ್ಲಿ ಹೊರಬರಲು 18 ರಿಂದ 20 ಸಾವಿರ ರೂ. ಖರ್ಚಾಗುವ ಸಾಧ್ಯತೆ ಇದೆ.
ಸಾಹಿತ್ಯದ ಪರಿಚಾರಿಕೆಯನ್ನು ಎಲ್ಲ ಮಾಧ್ಯಮಗಳ ಮೂಲಕ ನಡೆಸಬೇಕೆಂಬುದು ಅಕಾಡೆಮಿಯ ಉದ್ದೇಶ. ಅದರಲ್ಲಿ ದೃಶ್ಯ ಮಾಧ್ಯಮವೂ ಒಂದು. ಇವತ್ತಿನ ಸಂದರ್ಭದಲ್ಲಿ ವೈಚಾರಿಕ ಸಾಹಿತ್ಯಕ್ಕೆ ಬಹುಮಹತ್ವವಿದೆ. ತಂತ್ರಜ್ಞಾನದ ಜೊತೆಗಿನ ಅಕಾಡೆಮಿ ಸಂಬಂಧವನ್ನು ಮತ್ತಷ್ಟು ವಿಸ್ತಾರಗೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ವ್ಯಕ್ತಿ ಚಿತ್ರಗಳಿಗಿಂತ ವ್ಯಕ್ತಿಯನ್ನು ವಿಚಾರದ ಮೂಲಕ ದಾಖಲಿಸುವುದು ಹೆಚ್ಚು ಪ್ರಾತಿನಿಧಿಕವಾಗಬಹುದೆಂದು “ಹೊನ್ನ ಮಾತು’ ಆರಂಭಿಸಲಾಗುತ್ತಿದೆ.-ಡಾ.ಅರವಿಂದ ಮಾಲಗತ್ತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ * ಶ್ರುತಿ ಮಲೆನಾಡತಿ