Advertisement
ಐಪಿಎಲ್ ಸೀಸನ್ 2024ಕ್ಕೆ ರಾಯಲ್ ಚಾಲೆಂಜರ್ಸ್ ಜತೆಯಲ್ಲಿ ಹಾಂಗ್ಯೋ ಐಸ್‌ಕ್ರೀಮ್ ಹೊಸ ಹೆಜ್ಜೆಯನ್ನಿಡಲಿದೆ. ಬೆಂಗಳೂರಿನಲ್ಲಿ ಈ ಕುರಿತ ಒಡಂಬಡಿಕೆಯೊಂದಕ್ಕೆ ಎರಡೂ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ.
Related Articles
Advertisement
ಟಾಪ್ ಬ್ರ್ಯಾಂಡ್ ಗಳಲ್ಲಿ ಹಾಂಗ್ಯೋಹಾಂಗ್ಯೋ ಐಸ್‌ಕ್ರೀಮ್ ಪ್ರಸ್ತುತ ಐಸ್‌ಕ್ರೀಮ್‌ನ ಅಗ್ರ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಅದು 3 ದಶಲಕ್ಷ ಗ್ರಾಹಕರನ್ನು ಸಂತೃಪ್ತಗೊಳಿಸಿದೆ. ದಿನಕ್ಕೆ 1.2 ಲಕ್ಷ ಲೀ.ಗಳಷ್ಟು ಉತ್ಪಾದನ ಸಾಮರ್ಥ್ಯವನ್ನು ಹೊಂದಿದೆ. 30 ಸಾವಿರ ರಿಟೇಲ್ ಶಾಪ್‌ಗ್ಳು, 330 ಚಾನೆಲ್ ಪಾಲುದಾರರು ಮತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತನಾಗಿ ಯಶಸ್ಸು ಕಂಡಿದೆ. ಸಣ್ಣ ಪಟ್ಟಣವೊಂದರಲ್ಲಿ ನೆಚ್ಚಿನ ಐಸ್‌ಕ್ರೀಮ್ ತಾಣವಾಗಿ ಹುಟ್ಟಿಕೊಂಡು, ಕಠಿನ ಪರಿಶ್ರಮದಿಂದ ಉದ್ಯಮ ದೈತ್ಯನಾಗಿ ವಿಕಸನಗೊಳ್ಳುವವರೆಗಿನ ಹಾಂಗ್ಯೋ ಐಸ್ ಕ್ರೀಮ್ ಪಯಣ, ಕ್ರಿಕೆಟ್ ಬಾಂಧವ್ಯದೊಂದಿಗೆ ಹೊಸ ದಾರಿಗೆ ಹೊರಳಲಿದೆ.