ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರಿ ಏರಿಕೆಯಾಗುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಭಾರತ ಇದೀಗ ಅಮೆರಿಕಾ ನಂತರದ ಸ್ಥಾನದದಲ್ಲಿದೆ. ಇದೇ ಕಾರಣಕ್ಕೆ ಕೆಲವು ದಿನಗಳ ಹಿಂದೆ ಭಾರತಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನಗಳಿಗೆ ನಿಷೇಧ ಹೇರಿ ನ್ಯೂಜಿಲ್ಯಾಂಡ್ ಆದೇಶಿಸಿತ್ತು. ಇದೀಗ ಹಾಂಕಾಂಗ್ ಕೂಡಾ ಇದೇ ನಿರ್ಧಾರ ಕೈಗೊಂಡಿದೆ.
ಕೋವಿಡ್ 19 ಸೋಂಕು ತಡೆಯುವ ಹಿನ್ನೆಲೆಯಲ್ಲಿ ಮೇ 3ರವರೆಗೆ ಭಾರತಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನಗಳನ್ನು ಹಾಂಕಾಂಗ್ ನಿಷೇಧಿಸಿದೆ.
ಇದನ್ನೂ ಓದಿ:ಕಠಿನ ನಿರ್ಬಂಧ: ನಾವೆಷ್ಟು ಸಿದ್ಧ? ಸರಕಾರ, ಜನರು ಈಗಲೇ ತಯಾರಾಗಲಿ
ಭಾರತ ಮಾತ್ರವಲ್ಲದೆ ಪಾಕಿಸ್ಥಾನ ಮತ್ತು ಫಿಲಿಫೈನ್ಸ್ ದೇಶಗಳಿಂದ ಬರುವ ವಿಮಾನಗಳನ್ನೂ ಹಾಂಕಾಂಗ್ ನಿಷೇಧಿಸಿದೆ. ಈ ತಿಂಗಳಿನಲ್ಲಿ ಎರಡು ವಿಸ್ತಾರಾ ವಿಮಾನಗಳಲ್ಲಿ ಆಗಮಿಸಿದ 50 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ನಂತರ ಅಲ್ಲಿನ ಆಡಳಿತ ನಿರ್ಬಂಧ ಹೇರಿದೆ.
ರವಿವಾರ ಮುಂಬೈನಿಂದ ಹಾಂಕಾಂಗ್ ಗೆ ತೆರಳಿದ ವಿಸ್ತಾರ ವಿಮಾನದಲ್ಲಿ ಮೂವರು ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಎಪ್ರಿಲ್ 4ರಂದು ದೆಹಲಿಯಿಂದ ತೆರಳಿದ್ದ ವಿಮಾನದಲ್ಲಿ 47 ಮಂದಿ ಪ್ರಯಾಣಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು.
ಇದನ್ನೂ ಓದಿ: ದೇಶಕ್ಕೆ ಅವಳಿ ರೂಪಾಂತರಿ ಕಾಟ : ಡಬಲ್ ಮ್ಯುಟೆಂಟ್‌ಗೆ ಭಾರತವೇ ಮೂಲ