Advertisement

ಹಾಂಕಾಂಗ್‌ ಏಶ್ಯನ್‌ ಯೂತ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌: ಭಾರತ ದ್ವಿತೀಯ

07:31 PM Mar 26, 2019 | Team Udayavani |

ಮುಂಬಯಿ: ಹಾಂಕಾಂಗ್‌ನಲ್ಲಿ ಇತ್ತೀಚೆಗೆ ನಡೆದ ಏಶ್ಯನ್‌ ಯೂತ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನ ಕೊನೆಯ ದಿನ ನಡೆದ ರಿಲೇಯಲ್ಲಿ ಭಾರತದ ಮಿಡ್ಲೆ ರಿಲೆ ತಂಡ ಚಿನ್ನದ ಪದಕ ಪಡೆದಿದೆ.

Advertisement

ವಿಶೇಷವಾಗಿ ಭಾರತ ತಂಡದ ಮ್ಯಾನೇಜರ್‌ ಆಗಿ ಬಿಪಿನ್‌ ಫುಟ್ಬಾಲ್‌ ಅಕಾಡೆಮಿಯ ಅಧ್ಯಕ್ಷ, ಮಹಾರಾಷ್ಟ್ರ ರಾಜ್ಯ ಆ್ಯತ್ಲೆಟಿಕ್ಸ್‌ನ ಪ್ರಧಾನ ಕಾರ್ಯದರ್ಶಿ, ತುಳು-ಕನ್ನಡಿಗ ಸತೀಶ್‌ ಉಚ್ಚಿಲ್‌ ಅವರು ಉಪಸ್ಥಿತರಿದ್ದು ತಂಡವನ್ನು ಪ್ರೋತ್ಸಾಹಿಸಿದರು.

ಭಾರತ ಯುವ ತಂಡವು ಒಟ್ಟು 26 ಪದಕಗಳೊಂದಿಗೆ ಕೂಟವನ್ನು ಕೊನೆಗೊಳಿಸಿದೆ. ಭಾರತ 8 ಚಿನ್ನ, 9 ಬೆಳ್ಳಿ, 9 ಕಂಚಿನ ಪದಕದೊಂದಿಗೆ ಕೂಟದಲ್ಲಿ ದ್ವಿತೀಯ ಸ್ಥಾನ ಗಳಿಸಿದರೆ, 12 ಚಿನ್ನ, 12 ಬೆಳ್ಳಿ, 8 ಕಂಚಿನೊಂದಿಗೆ ಚೀನಾ ಮೊದಲ ಸ್ಥಾನ ಗಳಿಸಿದೆ. ಜಪಾನ್‌ 6 ಚಿನ್ನ, 8 ಬೆಳ್ಳಿ, 6 ಕಂಚು ಸೇರಿದಂತೆ ಒಟ್ಟು 20 ಪದಕಗಳೊಂದಿಗೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next