Advertisement

200ರೂಪಾಯಿ ಡೀಲ್‌ ಗೂ ಸೈ;ಹನಿಟ್ರ್ಯಾಪ್‌ ದಂಧೆ:ಮಹಿಳೆಯರು ಸೇರಿ 6 ಸೆರೆ

04:12 PM Jan 13, 2017 | Team Udayavani |

ಬೆಂಗಳೂರು : ವಿಜಯನಗರದ ಮಾರೇನಹಳ್ಳಿಯ 11 ನೇ ಮುಖ್ಯ ರಸ್ತೆಯ ಬಿಬಿಎಂಪಿ ಕಚೇರಿಯ ಕಟ್ಟಡದ ಮೇಲ್ಮಹಡಿಯಲ್ಲೇ ಭಾರೀ ಹನಿಟ್ರ್ಯಾಪ್‌ ದಂಧೆ ನಡೆಸುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

Advertisement

 ರವಿಕುಮಾರ್‌, ಆನಂದ್‌ ಆಚಾರ್ಯ, ರವಿ, ನಿಹಾರಿಕ ಮತ್ತು ಇನ್ನಿಬ್ಬರು ಮಹಿಳೆಯರು ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. 

ಬಂಧಿತರು ಕಳೆದ ಕೆಲ ವರ್ಷಗಳಿಂದ 70ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್‌ ದಂಧೆಗೆ ಬೀಳಿಸಿ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದಾರೆ. ವಿಚಾರಣೆ ವೇಳೆ 70ಕ್ಕೂ ಹೆಚ್ಚು ಜನರಿಗೆ ವಂಚಿಸಿರುವುದು ಬೆಳಕಿಗೆ ಬಂದಿದ್ದು, 200 ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ವರೆಗೆ ಡೀಲ್‌ ಮಾಡುತ್ತಿದ್ದರು. ಈ ಬಗ್ಗೆ ಡಿಸಿಪಿ ಅನುಚೇತ್‌ ಅವರು ವಿವರ ನೀಡಿದ್ದಾರೆ. 

ಪುರುಷರನ್ನು ಬಲೆಗೆ ಬೀಳಿಸಿ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದರು. ಹಣವನ್ನು ಪೇಟಿಎಂ ಮೂಲಕ ಪಡೆಯುತ್ತಿದ್ದರು ಎಂದು ಹೇಳಲಾಗಿದ್ದು, ಎನ್‌ಜಿಓ ಒಂದರ ಹೆಸರಲ್ಲಿ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next