ಮೈಸೂರು: ನ್ಯಾಯಾಧೀಶರಿಗೆ ಬುದ್ಧಿವಂತಿಕೆಗಿಂತ ಪ್ರಾಮಾಣಿಕತೆ ಅತ್ಯಂತ ಮುಖ್ಯ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಅಭಿಪ್ರಾಯಪಟ್ಟರು. ಜೆಎಸ್‌ಎಸ್ ಕಾನೂನು ಕಾಲೇಜು, ಮೈಸೂರು ವಕೀಲರ ಸಂಘ ಹಾಗೂ ಲಾಗೈಡ್ ಕನ್ನಡ ಮಾಸ ಪತ್ರಿಕೆ ವತಿಯಂದ ಸೋಮವಾರ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಸಿವಿಲ್ ನ್ಯಾಯಾಧೀಶರ (ಕಿರಿಯ ಶ್ರೇಣಿ) ಹುದ್ದೆಗಳ ಪರೀಕ್ಷೆಗೆ ಆಯೋಜಿಸಿರುವ ಉಚಿತ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ನ್ಯಾಯಾಧೀಶರಾದವರು ಅಪರಾಧಿ ಮತ್ತು ನಿರಪರಾಧಿ ಇಬ್ಬರನ್ನು ಸಮನಾಗಿ ನೋಡುವ ಅವಶ್ಯಕತೆ ಇದೆ. ಹೀಗಾಗಿ ನ್ಯಾಯಾಧೀಶರು ಕೇವಲ ಬುದ್ದಿವಂತಿಕೆಗೆ ಮಾತ್ರ ಆದ್ಯತೆ ನೀಡದೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹತ್ತು ದಿನಗಳವರೆಗೆ ನಡೆಯುವ ಶಿಬಿರದಲ್ಲಿ ನುರಿತ ವಕೀಲರು ಮತ್ತು ನ್ಯಾಯಾಧೀಶರು ನೀಡುವ ತರಬೇತಿಯನ್ನು ಎಲ್ಲಾ ಶಿಬಿರಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ಡಾ.ಸಿ.ಜೆ. ಬೆಟ್‌ಸೂರ್‌ಮs… ಮಾತನಾಡಿ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರ 110 ಹುದ್ದೆಗಳ ನೇಮಕಾತಿಗೆ ಆದೇಶ ಬಂದಿದೆ. ರಾಜ್ಯದಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶರ 60 ಹುದ್ದೆಗಳು ಖಾಲಿಯಿದ್ದು, ಹೀಗಾಗಿ ಶಿಬಿರಾರ್ಥಿಗಳು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಖಾಲಿ ಇರುವ ಹುದ್ದೆಗಳನ್ನು ಪಡೆಯುವ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಪಿಜಿಎಂ ಪಾಟೀಲ್ ಕಾರ್ಯಕ್ರಮ ಉದ್ಘಾಟಿ ಸಿದರು. ಜೆಎಸ್‌ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಸುರೇಶ್, ಲಾ ಗೈಡ್ ಮಾಸ ಪತ್ರಿಕೆ ಸಂಪಾದಕ ಎಚ್.ಎನ್.ವೆಂಕಟೇಶ್, ಹಿರಿಯ ವಕೀಲ ಹರೀಶ್‌ಕುಮಾರ್ ಹೆಗಡೆ, ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ ಎಚ್.ಪಿ. ಪ್ರಭು, ಕಾರ್ಯದರ್ಶಿ ಕೆ.ಬಿ.ಸುರೇಶ್ ಹಾಜರಿದ್ದರು.