Advertisement

“ಪ್ರಾಮಾಣಿಕತೆ, ಕಠಿನ ಶ್ರಮ, ಸಾಧನೆಗೆ ರಹದಾರಿ’

02:28 PM Mar 16, 2017 | |

ಕುಂದಾಪುರ: ಜೀವನದಲ್ಲಿ ಪಡೆದ ನಿರಂತರ ಶ್ರಮ, ಪಡೆದ ಅನುಭವ, ಪ್ರಾಮಾಣಿಕತೆ, ವಿಶೇಷ ಸಾಧನೆ ಮಾಡಲು ಶಕ್ತಿ, ಸ್ಫೂರ್ತಿ  ಒದಗಿಸುತ್ತದೆ.  ಗ್ರಾಮೀಣ ಪ್ರದೇಶದಲ್ಲಿದ್ದ ಕುಟುಂಬದ ವಿದ್ಯಾರ್ಥಿಗಳಲ್ಲಿ ಕೆಲವರು ಕಷ್ಟಪಟ್ಟು ಶಿಕ್ಷಣ ಪಡೆದುದರಿಂದ ಅವರಲ್ಲಿ ಹಲವರು ಮಹತ್‌ ಸಾಧನೆ ಮಾಡಿದರು ಎಂದು ಖ್ಯಾತ ಚಿತ್ರನಟ, ಮಾಜಿ ಶಾಸಕ ಬಿ.ಸಿ.ಪಾಟೀಲ್‌ ಹೇಳಿದರು.

Advertisement

ಅವರು ಮಣಿಪಾಲ ಯುನಿವರ್ಸಿಟ ಪ್ರಸ್‌ ಹಾಗೂ ಕುಂದಪ್ರಭ ಸಂಸ್ಥೆ ಕುಂದಾಪುರ ಆಶ್ರಯದಲ್ಲಿ ಕುಂದಾ ಪುರದ ಸ.ಪ.ಪೂ. ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ  ಇಲ್ಲಿನ ವೈದ್ಯ  ಡಾ| ಉಮೇಶ್‌ ಭಟ್‌  ಅವರ  ಆಂಗ್ಲಭಾಷಾ ಕಾದಂಬರಿ ಕಲರ್ ಆಫ್‌ ದಿ ರೈನ್‌ ಬೋ  ಬಿಡುಗಡೆ ಮಾಡಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಣಿಪಾಲ ಯುನಿವರ್ಸಿಟಿ ಪ್ರಿಂಟರ್ನ ಪ್ರಧಾನ ಸಂಪಾದಕಿ ಡಾ|ನೀತಾ ಇನಾಂದರ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್‌. ಐ.ಬಿ.ಎಂ. ಮಣಿಪಾಲದ ಪ್ರಾಂಶುಪಾಲ ಬೆಳಗೋಡು ರಮೇಶ್‌ ಭಟ್‌, ಹಿರಿಯ ವೈದ್ಯ, ಕಾದಂಬರಿಕಾರ ಡಾ| ರಂಜಿತ್‌ ಕುಮಾರ್‌ ಶೆಟ್ಟಿ, ಕುಂದಾಪುರ ಐ.ಎಂ.ಎ. ಮಾಜಿ ಅಧ್ಯಕ್ಷೆ ಡಾ|ಭವಾನಿ ರಾವ್‌ ಭಾಗವಹಿಸಿದ್ದರು.

ಸಮಾರಂಭದ ಉದ್ಘಾಟನೆ ನಡೆಸಿ ಅಧ್ಯಕ್ಷತೆ  ವಹಿಸಿದ್ದ  ಡಾ| ನೀತಾ ಇನಾಂಧರ್‌ ಮಾತನಾಡಿ  ಮಣಿಪಾಲ ಯುನಿವರ್ಸಿಟಿ ಪ್ರಸ್‌ ಈ ತನಕ ಹಲವು ವಿಷಯಗಳ ಉಪಯುಕ್ತ ಪುಸ್ತಕ ಪ್ರಕಟಿಸಿದ್ದರೂ  ಕಲರ್ ಆಫ್‌ ದಿ ರೈನ್‌ ಬೋ ಅಂತಹ ಪುಸ್ತಕ ಪ್ರಥಮವಾಗಿ ಪ್ರಕಟಿಸುತ್ತಿದೆ. ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶದಿಂದಲೂ ಈ ಕೃತಿ ಉತ್ತಮವಾಗಿದ್ದು, ಅಪರೂಪದ್ದಾಗಿದೆ. ದೇಶ ವಿದೇಶ ಗಳಲ್ಲಿ ಈ ಪುಸ್ತಕ ಬೆಳಕಿಗೆ ಬರಲಿದೆ ಎಂದರು.

ಲೇಖಕ ಡಾ|ಉಮೇಶ್‌ ಭಟ್‌ ಕೃತಿ ರಚನೆಯ ಹಿನ್ನೆಲೆ ವಿವರಿಸಿ ಬದುಕಿನ  ಹಲವು ಮಜಲುಗಳ ಪರಿಚಯ ಒದಗಿಸಿದರು. ಈ ಕಾದಂಬರಿ ಧಾರವಾಹಿಯಾಗಿ ಪ್ರಕಟಿಸಿದ ಡಾ| ಭಾಸ್ಕರ ಆಚಾರ್ಯ -ಡಾ| ಸಬಿತಾ ಆಚಾರ್ಯ ಅವರ  ಎನ್‌.ಆರ್‌.ಎಂ.ಎಚ್‌. ಪ್ರಕಾಶನ ಹಾಗೂ ಈ ಕೃತಿಯನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಮಣಿಪಾಲ ಯುನಿವರ್ಸಿಟಿ ಪ್ರಸ್‌ನ ಡಾ|ನೀತಾ ಇನಾಂದರ್‌ ಹಾಗೂ ಸಂಸ್ಥೆಗೆ ಆಭಾರ ವ್ಯಕ್ತಪಡಿಸಿದರು.

Advertisement

ಬಾಲಕೃಷ್ಣ ಶೆಟ್ಟಿ, ಪ್ರಕಾಶ್‌ ಸೋನ್ಸ್‌, ರಾಜೀವ್‌ ನಾಯ್ಕ, ಎ.ಎ.ಕೊಡ್ಗಿ , ಅನುರಾಧಾ ಭಟ್‌, ಅತಿಥಿಗಳನ್ನು ಪರಿಚಯಿಸಿ ಗೌರವಿಸಿದರು. ಕಲಾವಿದ ಕೇಶವ ಸಸಿಹಿತ್ಲು ಅವರನ್ನು ಗೌರವಿಸಲಾಯಿತು. ಚಿತ್ರನಟ ಬಿ.ಸಿ. ಪಾಟೀಲರನ್ನು ಡಾ| ಉಮೇಶ್‌ ಭಟ್‌ ಸಮ್ಮಾ¾ನಿಸಿ ಗೌರವಿಸಿದರು.

ಕುಂದಪ್ರಭ ಅಧ್ಯಕ್ಷ ಯು.ಎಸ್‌.ಶೆಣೆ„ ಸ್ವಾಗತಿಸಿದರು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಪಿ. ಜಯವಂತ ಪೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next