ಮಾಗಡಿ: ಮಾಗಡಿ ಪಟ್ಟಣದ ಪುರಸಭೆ ನೂತನ ಅಧ್ಯಕ್ಷೆ ಭಾಗ್ಯಮ್ಮ ಗುರುವಾರ ಪದಗ್ರಹಣ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ವಾರ್ಡ್ ಮತದಾರರಿಗೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಶ್ರಮಿಸಿದ್ದ ಬಿಜೆಪಿ ರಾಜ್ಯ ಒಬಿಸಿ ಉಪಾಧ್ಯಕ್ಷ ಎ.ಎಚ್.ಬಸವರಾಜು ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಂ.ಧನಂಜಯ ಹಾಗೂ ಎಲ್ಲ 23 ವಾರ್ಡ್‌ನ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಸಕ ಎ.ಮಂಜುನಾಥ್, ಸಂಸದ ಡಿ.ಕೆ.ಸುರೇಶ್ ಮತ್ತು ಮಾಜಿ ಶಾಸಕ ಎಚ್ .ಸಿ.ಬಾಲಕೃಷ್ಣ ಹಾಗೂ ಮಾಜಿ ಸಚಿವ ಎಚ್. ಎಂ.ರೇವಣ್ಣ ಇವರ ಅನುಭವ ಹಾಗೂ ಮಾರ್ಗದರ್ಶನದಲ್ಲಿ ವಾರ್ಡ್‌ಗಳಿಗೂ ಸಮಾನವಾಗಿ ಅವಕಾಶ ನೀಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ ಹಾಗೂ ಚರಂಡಿಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.
ಭ್ರಷ್ಟಾಚಾರ ಮುಕ್ತ: ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಮಾತನಾಡಿ, ಕಳೆದ ಪುರಸಭೆಚುನಾವಣೆಯಲ್ಲಿ ಭ್ರಷ್ಟಾಚಾರ ಮುಕ್ತ ಪಟ್ಟಣವನ್ನಾಗಿಸಲು ಬಿಜೆಪಿಗೆ ಆಶೀರ್ವಾದ ಮಾಡುವಂತೆ ಪುರನಾಗರಿಕರಲ್ಲಿ ಮನವಿಮಾಡಿಕೊಂಡಿದ್ದೆವು. ಆದರೂ, ಮತದಾರರುಮೂರನೇ ಸ್ಥಾನಕ್ಕೆ ಅವಕಾಶ ನೀಡಿದರು. ಅನಿರೀಕ್ಷಿತವಾಗಿ ರಾಜಕೀಯ ಮೇಲಾಟದಿಂದ ಏಕೈಕ ಬಿಜೆಪಿ ಸದಸ್ಯೆ ಭಾಗ್ಯಮ್ಮ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ ಎಂದರು.
ಪುರಸಭೆ ಸದಸ್ಯರಾದ ರೇಖಾ ನವೀನ್, ಪುರುಷೋತ್ತಮ್, ತಾಲೂಕು ಬಿಜೆಪಿ ಅಧ್ಯಕ್ಷಬಿ.ಎಂ.ಧನಂಜಯ, ಪ್ರಧಾನ ಕಾರ್ಯದರ್ಶಿಮಂಜುನಾಥ್, ಕಾರ್ಯದರ್ಶಿ ಎಂ.ಆರ್. ರಾಘವೇಂದ್ರ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಶಂಕರ್, ತಾಲೂಕು ಒಬಿಸಿ ಅಧ್ಯಕ್ಷ ಮಾರಪ್ಪ, ಮಾಜಿ ಸದಸ್ಯ ಶಶಿಧರ್, ಶೇಷಪ್ಪ ನಾಗರಾಜು, ಲಿಂಗಮೂರ್ತಿ, ಟಿ.ಆರ್.ದಯಾನಂದ್, ನಾರಾಯಣಪ್ಪ, ಶಿವಣ್ಣ, ಕೃಷ್ಣಪ್ಪ, ಜ್ಯೋತಿನಗರದ ಧನಂಜಯ,ತಿರುಮಲೆ ಪಾಂಡು, ಪ್ರಸಾದ್, ಆನಂದ್, ಮೂರ್ತಿ, ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಎನ್,ಮಹೇಶ್ ಹಾಜರಿದ್ದರು.