Advertisement

ಮಾಸ್ಕ್ ಧರಿಸಿ ಮನೆಯಲ್ಲಿಯೇ ಯೋಗ ಆಚರಣೆ

11:23 PM Jun 21, 2020 | Sriram |

ಮಹಾನಗರ: ಕೋವಿಡ್‌-19 ಭೀತಿ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮೇಲೆಯೂ ಪರಿಣಾಮ ಬೀರಿದೆ. ಈ ಕಾರಣಕ್ಕೆ ಸಾರ್ವಜನಿಕವಾಗಿ ಯೋಗ ದಿನಾಚರಣೆ ನಡೆಯಲಿಲ್ಲ. ಬದಲಾಗಿ ಅನೇಕ ಮಂದಿ ಮನೆಯಲ್ಲೇ ಕುಳಿತು ತಮ್ಮ ಕುಟುಂಬ ಸದಸ್ಯರೊಂದಿಗೆ ಯೋಗದಲ್ಲಿ ತೊಡಗಿದ್ದರು.

Advertisement

ಕೋವಿಡ್‌-19 ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳು ಮತ್ತಿತರ ಕಾರ್ಯಕ್ರಮಗಳಿಗೆ ನಿಷೇಧವಿದೆ. ಅದೇ ಕಾರಣಕ್ಕೆ ಈ ಬಾರಿ “ಮನೆಯಲ್ಲಿಯೇ ಯೋಗ-ಕುಟುಂಬದೊಂದಿಗೆ ಯೋಗ’ ಎಂಬ ಪರಿಕಲ್ಪನೆಯಲ್ಲಿ ಯೋಗ ದಿನ ವನ್ನು ಆಚರಿಸಲಾಗಿತ್ತು.

ಯೋಗ ಪ್ರಾತ್ಯಕ್ಷಿಕೆಯನ್ನು ನೋಡಿಕೊಂಡು ಮನೆಯಲ್ಲಿಯೇ ಯೋಗ ನಡೆ ಸಬೇಕು ಎಂದು ಜಿಲ್ಲಾಡಳಿತ ನೀಡಿದ ಸೂಚನೆ ಮೇರೆಗೆ ರವಿವಾರ ಬೆಳಗ್ಗಿ ನಿಂದಲೇ ಅನೇಕರು ತಮ್ಮ ಮನೆ ಮಂದಿಯೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗದಲ್ಲಿ ತೊಡಗಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಯೋಗದ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಕೆಲವರು ಯೋಗದ ತುಣುಕುಗಳನ್ನು ನೋಡಿ ಯೋಗ ಮಾಡುತ್ತಿದ್ದರು. ಇನ್ನು, ಹೆಚ್ಚಿನ ಜನಪ್ರತಿನಿಧಿಗಳು ಕೂಡ ತಮ್ಮ ಮನೆ ಯಲ್ಲೇ ಯೋಗ ಮಾಡಿದ್ದರು.

ಆನ್‌ಲೈನ್‌ ಯೋಗ
ಕೋವಿಡ್‌-19 ಹಾವಳಿಯಿಂದಾಗಿ ಈ ಬಾರಿ ಆನ್‌ಲೈನ್‌ ಯೋಗಕ್ಕೆ ಹೆಚ್ಚಿನ ಪ್ರಾಶಸ್ತÂ ನೀಡಲಾಗಿತ್ತು. ಆಯುಷ್‌ ಸಚಿವಾಲಯ ಕೂಡ ಶಿಷ್ಟಾಚಾರದಂತೆ ಯೋಗ ಮಾಡಬೇಕು ಎಂಬ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಮಂದಿ ಆನ್‌ಲೈನ್‌ ಸೇರಿದಂತೆ ಕೆಲವೊಂದು ಆ್ಯಪ್‌ ಮೂಲಕ ಯೋಗ ಮಾಡಿದರು. ಇದಕ್ಕೆಂದು ಕಳೆದ ಕೆಲ ದಿನಗಳ ಹಿಂದಿನಿಂದಲೇ ಅಭ್ಯಾಸದಲ್ಲಿ ತೊಡಗಿದ್ದರು. ಇನ್ನೂ ಕೆಲವೆಡೆ ಆನ್‌ಲೈನ್‌ನಲ್ಲಿ ಯೋಗಾಬ್ಯಾಸದ ಉಪನ್ಯಾಸ ಸರಣಿ, ಕಾರ್ಯಾಗಾರ ಕೂಡ ಆಯೋಜಿಸಲಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next