Advertisement
ವಿಟಮಿನ್ ಸಿ ಯನ್ನು ಹೊರತುಪಡಿಸಿ ಉಳಿದೆಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಏಕೈಕ ನಾನ್ ವೆಜ್ ಆಹಾರವೆಂದರೆ ಅದುವೇ “ಮೊಟ್ಟೆ”.
Related Articles
Advertisement
ಬೇಕಾಗುವ ಸಾಮಗ್ರಿಗಳುಬೇಯಿಸಿದ ಮೊಟ್ಟೆ -8, ತುಪ್ಪ-2ಚಮಚ, ಈರುಳ್ಳಿ-2,ಒಣಮೆಣಸು-8ರಿಂದ10, ಟೊಮೆಟೋ-2,ಕೊತ್ತಂಬರಿ (ಧನಿಯಾ)-2ಚಮಚ, ಕಾಳುಮೆಣಸು-1ಚಮಚ,ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ, ಜೀರಿಗೆ-1 ಚಮಚ, ಅರಿಶಿನ ಪುಡಿ-ಅರ್ಧ ಚಮಚ, ಕರಿಬೇವು- ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ,ಉಪ್ಪು-ರುಚಿಗೆ ತಕ್ಕಷ್ಟು. ತಯಾರಿಸುವ ವಿಧಾನ
ಒಂದು ಬಾಣಲೆಗೆ ಒಣಮೆಣಸು,ಕೊತ್ತಂಬರಿ, ಜೀರಿಗೆ ಮತ್ತು ಕಾಳುಮೆಣಸು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಮಿಕ್ಸಿಜಾರಿಗೆ ಹುರಿದಿಟ್ಟ ಮಸಾಲೆಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿರಿ. ತದನಂತರ ಒಂದು ಪ್ಯಾನ್ ಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಟೊಮೆಟೋ, ಅರಿಶಿನ ಪುಡಿ ಹಾಕಿ ಹುರಿಯಿರಿ ಈರುಳ್ಳಿ ಕಂದುಬಣ್ಣ ಬರುವವರೆಗೆ ಹುರಿಯಿರಿ.ಆಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ರುಬ್ಬಿಟ್ಟ ಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಹದಕ್ಕೆ ತಕ್ಕಷ್ಟು ನೀರನ್ನು ಸೇರಿಸಿರಿ.ಈ ಮಿಶ್ರಣ ಕುದಿಯಲು ಆರಂಭಿಸಿದ ಮೇಲೆ ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗ ಮಾಡಿ ಹಾಕಿರಿ. ಸುಮಾರು 10 ನಿಮಿಷಗಳ ಕಾಲ ಕುದಿಸಿ ನಂತರ ಕೊತ್ತಂಬರಿ ಸೊಪ್ಪು ಹಾಕಿದರೆ ಸ್ವಾದಿಷ್ಟಕರವಾದ ಎಗ್ ಘೀ ರೋಸ್ಟ್ ಸವಿಯಲು ಸಿದ್ಧ. ಇದು ಚಪಾತಿ,ರೋಟಿ ಹಾಗೂ ಅನ್ನದ ಜೊತೆ ತಿನ್ನಲು ಬಹಳ ರುಚಿಕರವಾಗುತ್ತದೆ. -ಶ್ರೀರಾಮ್ ಜಿ . ನಾಯಕ್