Advertisement

ಮನೆಯಲ್ಲೆ ತಯಾರಿಸಿ ಆರೋಗ್ಯಕರ ಜ್ಯೂಸ್‌ಗಳು

10:24 AM Aug 08, 2017 | |

ಹಣ್ಣುಗಳು, ಹಾಲು, ಖರ್ಜೂರ ಇತ್ಯಾದಿಗಳನ್ನು ಉಪಯೋಗಿಸಿ ವಿವಿಧ ಜ್ಯೂಸ್‌ಗಳನ್ನು ಸೇವಿಸುವುದರಿಂದ ರುಚಿಯೊಂದಿಗೆ ಶಕ್ತಿಯನ್ನೂ ಪಡೆದು ಆರೋಗ್ಯದೊಂದಿಗೆ ನಳನಳಿಸಬಹುದು.

Advertisement

ಆ್ಯಪಲ್‌ ಜ್ಯೂಸ್‌
ಬೇಕಾಗುವ ಸಾಮಗ್ರಿ:

ಸೇಬು – ಒಂದು, ನೆನೆಸಿದ ಒಣದ್ರಾಕ್ಷಿ- ಹತ್ತು, ಜೇನುತುಪ್ಪ – ಎರಡು ಚಮಚ.
ತಯಾರಿಸುವ ವಿಧಾನ:
ಸಿಪ್ಪೆ ಸಹಿತ ಸೇಬನ್ನು ಒಣದ್ರಾಕ್ಷಿಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿ ನಂತರ ಬೇಕಾದಷ್ಟು ನೀರು ಸೇರಿಸಿಕೊಂಡು ಪುನಃ ರುಬ್ಬಿ . ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ಜೇನುತುಪ್ಪಸೇರಿಸಿ ಸರ್ವ್‌ ಮಾಡಬಹುದು. ಸೇವಿಸಿದ ಕೂಡಲೇ ಶಕ್ತಿ ಕೊಡುವ ಈ ಪಾನಕದ ಸೇವನೆ ಜಠರದ ಹುಣ್ಣು , ಹೊಟ್ಟೆಉರಿ ಇತ್ಯಾದಿ ಸಮಸ್ಯೆಗಳಿಗೆ ಉತ್ತಮ ಪ್ರಯೋಜನಕಾರಿ.

ಖರ್ಜೂರ ವಿದ್‌ ಬನಾನ ಶೇಕ್‌
ಬೇಕಾಗುವ ಸಾಮಗ್ರಿ:

ನೆನೆಸಿದ ಖರ್ಜೂರ – ಎಂಟು, ಹಾಲು – ಎರಡು ಕಪ್‌, ಬಾಳೆಹಣ್ಣು – ಒಂದು, ಸಕ್ಕರೆ – ನಾಲ್ಕು ಚಮಚ, ಏಲಕ್ಕಿ – ಸುವಾಸನೆಗಾಗಿ, ಬಾದಾಮಿತರಿ- ಒಂದು ಚಮಚ.
ತಯಾರಿಸುವ ವಿಧಾನ:
ಮಿಕ್ಸಿಜಾರಿಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಸ್ವಲ್ಪ ಹಾಲು ಸೇರಿಸಿ ರುಬ್ಬಿ. ನಂತರ, ಇದಕ್ಕೆ ತಂಪಾದ ಹಾಲು ಸೇರಿಸಿ ಪುನಃ ರುಬ್ಬಿ . ಸರ್ವ್‌ ಮಾಡುವಾಗ  ಮೇಲಿನಿಂದ ಬಾದಾಮಿ ಚೂರುಗಳನ್ನು ಉದುರಿಸಿ.

ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next