Advertisement

ಮನೆ ಕೆಲಸಗಾರರ ಕಲ್ಯಾಣ ಮಂಡಳಿ: ಸರಕಾರಕ್ಕೆ ಪ್ರಸ್ತಾವ

12:03 AM Jun 01, 2022 | Team Udayavani |

ಬೆಂಗಳೂರು: ಮನೆಕೆಲಸದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್‌ ವಸತಿ ಕಲ್ಪಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಸರಕಾರಕ್ಕೆ ಪ್ರಸ್ತಾವನೆ ಬರೆದಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಕೆಲಸದಲ್ಲಿ ತೊಡಗಿಸಿ ಕೊಂಡ ಮಹಿಳೆಯರಿಗೆ ವೃತ್ತಿಯ ಅಭದ್ರತೆ ಕಾಡುತ್ತಿದೆ. ಕೋವಿಡ್‌ ವೇಳೆ ಮನೆ ಕೆಲಸವನ್ನು ಕಳೆದುಕೊಂಡ ಒಂದು ಹೊತ್ತಿನ ತುತ್ತಿಗೆ ಪರದಾಡುತ್ತಿದ್ದರು. ಅವರಿಗೆ ಸರಕಾರದಿಂದ ಅಥವಾ ಮನೆಯ ಮಾಲಕರಿಂದ ಯಾವುದೇ ರೀತಿಯಾದ ಪರಿಹಾರ ಸಿಕ್ಕಿಲ್ಲ. ಇದರಿಂದ ಅನೇಕರು ಮಹಿಳೆಯರು ತಮ್ಮ ಜೀವ ಕಳೆದುಕೊಳ್ಳಲು ಮುಂದಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಎನ್‌ಜಿಒ ಮನವಿ
ಕಳೆದ ಎರಡು ವರ್ಷಗಳಿಂದ ರಾಜ್ಯದ ಎನ್‌ಜಿಒ ಹಾಗೂ ಹತ್ತಾರು ಮಹಿಳಾ ಪರವಾಗಿ ಕೆಲಸ ಮಾಡುವ ಸಂಸ್ಥೆಗಳು ಮಹಿಳಾ ಆಯೋಗ್ಯಕ್ಕೆ ಮಹಿಳಾ ಮನೆ ಕೆಲಸ ಮಾಡುವವರಿಗೆ ಕಲ್ಯಾಣ ಮಂಡಳಿ ಸ್ಥಾಪಿಸುವಂತೆ ಮನವಿ ಮಾಡಿದ್ದರು. ಕೆಆರ್‌ಪುರಂ ಮನೆ ಕಳ್ಳತನದ ವಿಷಯಕ್ಕೆ ಸಂಬಂಧಿಸಿದಂತೆ ಮನೆಕೆಲಸದಾಕೆಯ ದೂರು ನೀಡಿದ್ದು, ಈ ವೇಳೆ ಪೊಲೀಸರು ಆಕೆ ಮನೆ ತಪಾಸಣೆ ಹಾಗೂ ವಿಚಾರಣೆಗೆ ಒಳಪಡಿಸಿದಾಗ ಆಕೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿತ್ತು. ಈ ಘಟನೆಯ ಬಳಿಕ ಸಭೆ ನಡೆಸಿ ಕಲಾÂಣ ಮಂಡಳಿಯ ಅವಶ್ಯಕತೆ ಅರಿತುಕೊಂಡು ಸರಕಾರಕ್ಕೆ ಮನೆ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದುಹೇಳಿದರು.

ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ವಸತಿ-ಪ್ರಸ್ತಾವ
ಲೈಂಗಿಕ ಕಾರ್ಯರ್ತೆಯರನ್ನು ಪೊಲೀಸರು ಘನತೆಯಿಂದ ನಡೆಸಿಕೊಳ್ಳಬೇಕು. ದಾಳಿ ಅಥವಾ ವಿಚಾರಣೆ ವೇಳೆ ಅವಾಚ್ಯವಾಗಿ ನಿಂದಿಸಿ, ದೈಹಿಕ ಹಿಂಸೆ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಈ ತೀರ್ಪು ಸ್ವಾಗತಾರ್ಹ. ಲೈಂಗಿಕ ಕಾರ್ಯಕರ್ತೆಯರು ವೃತ್ತಿಯಿಂದ ಹೊರ ಬರಲು ಯತ್ನಿಸುವವರಿಗೆ ಸರಕಾರದ ಸಹಾಯ ಅಗತ್ಯವಾಗಿ ಬೇಕಾಗಿದೆ. ಅವರ ಜೀವನ ರೂಪಿಸಿಕೊಳ್ಳಲು ಪುನರ್ವಸತಿ ಕಲ್ಪಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next