Advertisement

ಉಡುಪಿ : ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ 22 ಮಂದಿ ವಿರುದ್ಧ FIR

02:44 PM Jul 28, 2020 | sudhir |

ಉಡುಪಿ : ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ ಹೋಮ್ ಕ್ವಾರಂಟೈನ್ ಉಲ್ಲಂಘನೆ ಮಾಡಿದ ಆರೋಪದಡಿ 22 ಜನರ ವಿರುದ್ಧ ಮಣಿಪಾಲ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

Advertisement

ರಾಜ್ಯ ಜಿಯೋ ಫೆನ್ಸಿಂಗ್ ರೂಮ್ ನಿಂದ ನಿಯಮ ಉಲ್ಲಂಘಿಸಿ ಹೊರಗಡೆ ಹೋದವರ ಪಟ್ಟಿಯನ್ನು ತರಸಲಾಗಿದ್ದು ಅವರಲ್ಲಿ 22 ಜನರು ಸುಮಾರು 150ಕ್ಕಿಂತ ಹೆಚ್ಚಿನ ಬಾರಿ ನಿಯಮ ಉಲ್ಲಂಘಿಸಿ ಹೊರಗಡೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಹೋಮ್ ಕ್ವಾರಂಟೈನ್ ನಲ್ಲಿರುವ ವ್ಯಕ್ತಿ ಮನೆಯಿಂದ ಹೊರ ಹೋಗಬಾರದೆಂಬ ನಿಯಮವಿದ್ದರೂ ಕೆಲವರು ಅದನ್ನು ಉಲ್ಲಂಘಿಸಿದ ಘಟನೆಗಳು ನಡೆದಿದೆ.

ಇಂದು ಕೂಡಾ 20 ಮಂದಿ ನಿಯಮ ಉಲ್ಲಂಘಿಸಿದ್ದು ಅವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗುತ್ತದೆ ಎಂದು ನಗರಸಭೆ ಎಇಇ ಮೋಹನ್ ರಾಜ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next