Advertisement

ಉಪ್ಪಿ “ಹೋಮ್‌ ಮಿನಿಸ್ಟರ್‌” : ಏ.1ರಂದು ರಿಲೀಸ್‌

12:50 PM Mar 07, 2022 | Team Udayavani |

ಉಪೇಂದ್ರ “ಹೋಮ್‌ ಮಿನಿಸ್ಟರ್‌’ ಎಂಬ ಸಿನಿಮಾದಲ್ಲಿ ನಟಿಸಿರೋದು ನಿಮಗೆ ಗೊತ್ತಿರಬಹುದು. ಈಗ ಆ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏ.01ರಂದು ಬಿಡುಗಡೆಯಾಗಲಿದೆ.

Advertisement

ಚಿತ್ರದ ಬಿಡುಗಡೆ ಹಾಗೂ ಸಿನಿಮಾದ ಬಗ್ಗೆ ಮಾತನಾಡುವ ಉಪೇಂದ್ರ, “ಇದು ನಾನು ಈವರೆಗೂ ಮಾಡಿರದ ಪಾತ್ರ.ಇಲ್ಲಿನ ನಿರ್ಮಾಪಕರು ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ನೂರು ಜನ ತೆಲುಗಿನನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣಮಾಡಬೇಕು’ ಎಂದರು. ಚಿತ್ರದಲ್ಲಿ ವೇದಿಕಾನಾಯಕಿಯಾಗಿ ನಟಿಸಿದ್ದಾರೆ.

ಇಲ್ಲಿ ಅವರು ಜರ್ನಲಿಸ್ಟ್‌ ಆಗಿ ನಟಿಸಿದ್ದಾರಂತೆ.ನಿರ್ಮಾಪಕರಾದ ಪೂರ್ಣಚಂದ್ರ ನಾಯ್ಡುಹಾಗೂ ಶ್ರೀಕಾಂತ್‌ ವೀರಮಾಚನೆನಿ ಚಿತ್ರಮೂಡಿಬಂದ ಬಗ್ಗೆ ವಿವರಿಸಿದರು. ಈಚಿತ್ರವನ್ನು ಸುಜಯ್‌ ಕೆ ಶ್ರೀಹರಿ ನಿರ್ದೇಶನ ಮಾಡಿದ್ದು, ಜಿಬ್ರಾನ್‌ ಸಂಗೀತವಿದೆ.

ಕರ್ನಾಟಕದಾದ್ಯಂತಸುಮಾರು 350ಕ್ಕೂ ಅಧಿಕಚಿತ್ರಮಂದಿರಗಳಲ್ಲಿಹೋಮ್‌ ಮಿನಿಸ್ಟರ್‌ ಚಿತ್ರವನ್ನು ಶ್ರೇಯಾಚಿತ್ರ ಮೂಲಕ ಬೆಂಗಳೂರು ಕುಮಾರ್‌ ಫಿಲಂಸ್‌ ಸಂಸ್ಥೆ ಬಿಡುಗಡೆ ಮಾಡುತ್ತಿರುವುದಾಗಿ ಬೆಂಗಳೂರು ಕುಮಾರ್‌ ತಿಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next