Advertisement
ಭಾನುವಾರ ಪಟ್ಟಣದ ಬಂಟರ ಭವನದಲ್ಲಿ ನೆಡೆದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರಿದ ಕಾರ್ಯಕರ್ತರ ಸೇರ್ಪಡೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪವನ್ನು ಮಾತನಾಡುತ್ತಿದ್ದಾರೆ. ನನ್ನ ಚಾರಿತ್ರ್ಯ ವಧೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಪಿಎಸ್ಐ ಹಗರಣವನ್ನು ನಾನು ಹೇಗೆ ಬಯಲಿಗೆ ಎಳೆದೆ ಎಂದು ಇಡೀ ರಾಜ್ಯವೇ ನೋಡಿದೆ. ರಾಜಕೀಯವಾಗಿ ನನ್ನನ್ನು ಮುಗಿಸಬೇಕು ಎಂದು ನೋಡುವವರು ಏನು ಬೇಕಾದರೂ ಮಾಡಬಹುದು. ನಮ್ಮ ಮನೆಗೆ ನನ್ನನ್ನು ನೋಡಲು ಸಾವಿರಾರು ಜನರು ಬರುತ್ತಾರೆ. ಕಳ್ಳರು ಸುಳ್ಳರು ಯಾರು ಎಂದು ನೋಡಲು ಆಗುವುದಿಲ್ಲ. ಅವರ ಬಳಿ ಸರ್ಟಿಫಿಕೇಟ್ ತೆಗೆದುಕೊಂಡು ಒಳಗೆ ಬಿಡಲಾಗುವುದಿಲ್ಲ. ಬರುತ್ತಾರೆ ಫೋಟೋ ತೆಗೆಸಿಕೊಳ್ಳುತ್ತಾರೆ ಆಗುವುದಿಲ್ಲ ಎನ್ನಲಾಗುವುದಿಲ್ಲ ಎಂದರು.
Related Articles
Advertisement
ಇವತ್ತು 45 ಜನ ಅರೆಸ್ಟ್ ಆಗಿದ್ದಾರೆ. ಅವತ್ತು ಅವಮಾನ ಆಗಿಲ್ಲವಾ ತಾಲೂಕಿಗೆ, ಕಡಿದಾಳ್ ಮಂಜಪ್ಪನವರಿಗೆ, ತೀರ್ಥಹಳ್ಳಿಯ ಸುಸಂಸ್ಕೃತ ಜನರಿಗೆ. ಪಿಯುಸಿ ಪ್ರೆಶ್ನೆ ಪತ್ರಿಕೆ ಲಿಕ್ ಔಟ್ ಆಯ್ತು ಹತ್ತಾರು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ನಾಲ್ಕು ಬಾರಿ ಪರೀಕ್ಷೆ ಮುಂದೆ ಹೋಯಿತು ನಿಮ್ಮ ಕಾಲದಲ್ಲಿಯೇ ಅಲ್ಲವಾ ಎಂದು ವಾಗ್ದಾಳಿ ನೆಡೆಸಿದರು.
ಆರ್ ಎಂ ಬಿಸ್ಎ ಬಿಲ್ಡಿಂಗ್ ಬಸವಾನಿ, ಕಟ್ಟೆಹಕ್ಲು ಕೋಣಂದೂರು, ಮೇಗರವಳ್ಳಿ, ಮಾಳೂರು ಸಿಂಗನಬಿದರೆ, ಸೊಂನ್ಲೆ, ಮಂಡಗದ್ದೆಯಲ್ಲಿ ಇತ್ತು. ನೀವು ಯಾಕೆ ಮಂತ್ರಿಯಾಗಿದ್ದಾಗ ಕಂಪ್ಲೀಟ್ ಮಾಡಿಲ್ಲ.ಕಂಟ್ರಾಕ್ಟರ್ ನ ಆಂಧ್ರಪ್ರದೇಶಕ್ಕೆ ಹೋಗಲು ಯಾಕೆ ಬಿಟ್ರಿ. ಇದರಲ್ಲಿ ನಿಮ್ಮದೇನಿತ್ತು ಹೊರಗೆ ಬರ್ಲಿ. ಹೇಳಿ ಜನರಿಗೆ. ನಿಮ್ಮ ಕೈವಾಡ ಇಲ್ಲ ಅಂತ ಹೇಳ್ತೀರಾ ? ನಾನು ಸಚಿವನಾದ ಮೇಲೆ ಹೋರಾಡಿ ಬಿಲ್ಡಿಂಗ್ ಕಂಪ್ಲೀಟ್ ಮಾಡಿದ್ದೇನೆ. ಎರಡು ವರ್ಷ ಎಂಎಲ್ಎ ಆಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೂ ನಿಮ್ಮ ಹೊಲಸನ್ನು ತೊಳೆದಿದ್ದೇನೆ ಎಂದು ಕಿಮ್ಮನೆ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಮಲ್ಲೇಕಾವು ಅಂಚೆ ಇಲಾಖೆಯ ತುರ್ತುಸೇವೆ ಸ್ಥಗಿತ: ಕಚೇರಿಯಲ್ಲೇ ಉಳಿದ ದಾಖಲೆಗಳು, ಜನರ ಪರದಾಟ
ನೀವು ಹೇಗೆ ಅಧಿಕಾರ ಮಾಡಿದ್ರಿ, ನಾನು ಹೇಗೆ ಅಧಿಕಾರ ಮಾಡಿದ್ದೇನೆ ನಾನು ಎದೆ ತಟ್ಟಿ ಹೇಳಿಕೊಳ್ಳುತ್ತೇನೆ. ಅವರು ಯಾವಾಗಲು ಒಂದು ಮಾತು ಹೇಳುತ್ತಿರುತ್ತಾರೆ ಗುಮ್ಮಿ ಭಾವಿ ನೀರು ಕುಡಿತಿದ್ದೆ ಅಂತಿದ್ರು. ಅಂದ್ರೆ ಸಾಯೋ ತನಕ ಎಲ್ರು ಗುಮ್ಮಿ ಭಾವಿ ನೀರು ಕುಡಿಬೇಕು ನೀವು ಮಾತ್ರ ಚಿನ್ನದ ಚಮಚದಲ್ಲಿ ಊಟ ಮಾಡಬೇಕಾ ? ಈ ಬಡವರು ಉದ್ದಾರ ಆದ್ರೆ ಇವರು ಸಹಿಸೋದಿಲ್ಲ.ಸಾಲುರಲ್ಲಿ ಹೇಳ್ತಾ ಇದ್ದರು. ಅವರ ಎದುರು ಒಳ್ಳೆ ಬಟ್ಟೆ ಹಾಕಿಕೊಂಡು ಹೋಗಬೇಡಿ ಹೋದರೆ ಅವನು ಗಂಧ ಕಡಿದಿದ್ದಾನೆ ಅಂತ ಹೇಳ್ತಾರೆ. ಯಾರ ಏಳಿಗೆಯನ್ನು ಸಹಿಸದ ವಿಷ ಮನಸಿನ ವೆಕ್ತಿಗಳು ಇವರು ಎಂದು ವಾಗ್ದಾಳಿ ನೆಡೆಸಿದರು.
ನನ್ನ ಚಾರಿತ್ರ್ಯ ವಧೆ ಮಾಡಿ ನೀವು ದೊಡ್ಡವರಾಗಬಹುದು ಎಂದು ತಿಳಿದುಕೊಂಡಿಲ್ಲ. ನಿಮ್ಮ ಪಕ್ಷಾಂತರ ಪ್ರಕ್ರಿಯೆ ಎಲ್ಲರಿಗೂ ಕೂಡ ಗೊತ್ತಿತ್ತು. ನೀವೇನು ಬಹಳ ಶೀಲಾವಂತರಲ್ಲ. ನಿಮ್ಮ ಚಾರಿತ್ರ್ಯ ಒಳ್ಳೆದಿಲ್ಲ. ಯಾವ ಪಕ್ಷದಲ್ಲಿದ್ರಿ, ಅಲ್ಲೇನು ಭಾಷಣ ಮಾಡ್ತಿದ್ರಿ. ಇಲ್ಲಿ ಇವಾಗ ಬಂದು ಏನು ಮಾಡುತ್ತಿದ್ದೀರಾ ನೀವು ಬಾರಿ ಸಾಭಿತಾ.
ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷಕ್ಕೆ ಬರುತ್ತಾರೆ ಅಂತ ಗೊತ್ತಾದ ಕೂಡಲೇ 10 ಲಕ್ಷ 15 ಲಕ್ಷ ಅಂತ ಅವರೇ ಫಿಕ್ಸ್ ಮಾಡುತ್ತಿದ್ದಾರೆ. ಇವರೆಲ್ಲ ಬಡತನದಿಂದ ಬಂದಿದ್ದಾರೆ ಎಂದು ಅವಮಾನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷದಿಂದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೊಸಹಳ್ಳಿ ಸುಧಾಕರ್, ಬಿದರಗೋಡು ಗ್ರಾಮಪಂಚಾಯಿತಿ ಅಧ್ಯಕ್ಷರಾದ ವೆಂಕಟೇಶ್, ಸದಸ್ಯರಾದ ಪುಷ್ಪವತಿ, ಆಗುಂಬೆ ಗ್ರಾಮಪಂಚಾಯಿತಿ ಸದಸ್ಯ ಜಗದೀಶ್ ಮಳಲಿ, ಅರ್ಜುನ್ ಹೊಸಳ್ಳಿ, ಕೇಶವ ಕಾಸರವಳ್ಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ಚಕ್ಕೊಡಬೈಲು ರಾಘವೇಂದ್ರ, ನವೀನ್ ಹೆದ್ದೂರು, ಕುಕ್ಕೆ ಪ್ರಶಾಂತ್, ಸಾಲೇಕೊಪ್ಪ ರಾಮಚಂದ್ರ ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.