Advertisement
ತನ್ನನ್ನು ಅನಾರೋಗ್ಯ ಪೀಡಿಸುತ್ತಿದೆ ಎಂಬ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ತೇಲಿಬಂದಿರುವ ವದಂತಿಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಗೃಹ ಸಚಿವನಾಗಿ ನಾನು ದೇಶ ಎದುರಿಸುತ್ತಿರುವ ಕೋವಿಡ್-19 ಪರಿಸ್ಥಿತಿಯಲ್ಲಿ ಹಗಲಿರುಳೂ ದುಡಿಯುತ್ತಿದ್ದೇನೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಅನಾರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ನನಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದ ವಿಚಾರಗಳು. ಇಂದು ಈ ಬಗ್ಗೆ ಸ್ಪಷ್ಟನೆ ನೀಡಬಯಸುತ್ತೇನೆ. ನನಗೆ ಯಾವುದೇ ರೀತಿಯ ಅನಾರೋಗ್ಯ ಇಲ್ಲ. ನಾನು ಆರೋಗ್ಯದಿಂದ ಇದ್ದೇನೆ ಎಂದು ಶಾ ಹೇಳಿದ್ದಾರೆ.
ಹಿಂದೂ ನಂಬಿಕೆಗಳ ಪ್ರಕಾರ ಇಂಥ ವದಂತಿಗಳಿಂದ ವ್ಯಕ್ತಿಯ ಆರೋಗ್ಯ ಹೆಚ್ಚುತ್ತದೆ. ಹೀಗಾಗಿ ಸ್ಪಷ್ಟನೆ ನೀಡಿರ ಲಿಲ್ಲ. ಆದರೆ ನನ್ನ ಮೇಲೆ ಅಭಿಮಾನವಿರಿಸಿದ ಕಾರ್ಯ ಕರ್ತರು ಆತಂಕಕ್ಕೆ ಒಳಗಾದ್ದರಿಂದ ಸ್ಪಷ್ಟನೆ ನೀಡ ಬೇಕಾಯಿತು ಎಂದು ಶಾ ಚಾಟಿ ಯೇಟು ಬೀಸಿದ್ದಾರೆ. ನಾಲ್ವರ ಬಂಧನ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದಲ್ಲಿ ಅಹ್ಮದಾಬಾದ್‌ನ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಅಮಿತ್ ಶಾ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆದು ಅವರ ಅನಾರೋಗ್ಯದ ಬಗ್ಗೆ ವದಂತಿ ಹರಡಿದ್ದರು. ತನಿಖೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಹ್ಮದಾಬಾದ್ ಪೊಲೀಸ್ ವಿಶೇಷ ಆಯುಕ್ತ ಅಜಯ್ ತೋಮರ್ ಹೇಳಿದ್ದಾರೆ.
Related Articles
Advertisement