Advertisement

ಜಮ್ಮು ಕಾಶ್ಮೀರ ವಿಧಾನಸಭಾ ಕ್ಷೇತ್ರಗಳ ಹೊಸ ಪರಿಮಿತಿ: ದಿಟ್ಟ ಕ್ರಮಕ್ಕೆ ಅಮಿತ್‌ ಶಾ ಚಿಂತನೆ

10:20 AM Jun 05, 2019 | Sathish malya |

ಹೊಸದಿಲ್ಲಿ : ಜಮ್ಮು ಕಾಶ್ಮೀರ ವಿಧಾನಸಭಾ ಕ್ಷೇತ್ರಗಳು ಶೀಘ್ರವೇ ಹೊಸ ಪರಿಮಿತಿಗಳನ್ನು ಕಾಣಲಿವೆ. ಜನಸಂಖ್ಯೆ ಮತ್ತು ಪ್ರದೇಶದ ನೆಲೆಯಲ್ಲಿ ಈ ಹೊಸ ಪರಿಮಿತಿಗಳನ್ನು ರೂಪಿಸಲಾಗುವುದು.

Advertisement

ಪ್ರಧಾನಿ ನರೇಂದ್ರ ಮೋದಿ ಮತ್ತು ನೂತನ ಗೃಹ ಸಚಿವ ಅಮಿತ್‌ ಶಾ ಅವರ ದಿಟ್ಟ ನಡೆಯ ಅಂಗವಾಗಿ ಜಮ್ಮು ಕಾಶ್ಮೀರದ ವಿಧಾನಸಭೆಗಳ ಹೊಸ ಪರಿಮಿತಿಯನ್ನು ಪರಿಗಣಿಸಲಾಗುತ್ತಿದೆ.

ಜಮ್ಮು ಪ್ರಾಂತ್ಯದಲ್ಲಿ ಕಾಶ್ಮೀರ ಕಣಿವೆಯಲ್ಲಿ ಹೆಚ್ಚು ವಿಧಾನಸಭಾ ಸೀಟುಗಳಿದ್ದರೆ ಜಮ್ಮು ವಿನಲ್ಲಿ ಕಡಿಮೆ ಸೀಟುಗಳಿವೆ. ಇದರಿಂದ ಜಮ್ಮು ವಾಸಿಗಳಲ್ಲಿ ತಾರತಮ್ಯದ ಅಸಮಾಧಾನವಿದೆ.

ಈ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಜಮ್ಮು ಕಾಶ್ಮೀರ ವಿದಾನಸಭಾ ಕ್ಷೇತ್ರಗಳ ಹೊಸ ಪರಿಮಿತಿಯನ್ನು ರೂಪಿಸುವ ಆಯೋಗವನ್ನು ನೇಮಿಸುವ ಚಿಂತನೆ ನಡೆಸುತ್ತಿದೆ.

ಆಯೋಗದ ಶಿಫಾರಸನ್ನು ಪರಿಗಣಿಸಿ ಹೊಸ ಪರಿಮಿತಿಯನ್ನು ಜಾರಿಗೆ ತರಲಾಗುವುದೆಂದು ಮೂಲಗಳು ತಿಳಿಸಿವೆ. ಹಾಲಿ ವಿಧಾನಸಭಾ ಕ್ಷೇತ್ರಗಳ ಹೊಸ ಪರಿಮಿತಿಯನ್ನು ರೂಪಿಸುವಾಗ ಜನಸಂಖ್ಯೆ ಮತ್ತು ಭೂಪ್ರದೇಶವನ್ನು ಪರಿಗಣಿಸಲಾಗುವುದು ಎಂದು ಮೂಲಗಳು ಹೇಳಿವೆ.

Advertisement

ಆಯೋಗವು ವರದಿ ಸಲ್ಲಿಸಿದ ಬಳಿಕ ಗೃಹ ಸಚಿವಾಲಯ ವಿಧಾನಸಭಾ ಕ್ಷೇತ್ರಗಳ ಗಾತ್ರ ಮತ್ತು ಭೂವ್ಯಾಪ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಅದೇ ವೇಳೆ ಎಸ್‌ಸಿ ವರ್ಗದ ಜನರಿಗಾಗಿ ಮೀಸಲು ಸೀಟುಗಳ ಸಂಖ್ಯೆಯನ್ನು ಕೂಡ ನಿರ್ಧರಿಸಲಾಗುವುದು.

ಪ್ರಕೃತ ಕಾಶ್ಮೀರ ಕಣಿವೆಯಲ್ಲಿ 46 ವಿಧಾನಸಭಾ ಕ್ಷೇತ್ರಗಳಿವೆ. ಜಮ್ಮು ವಿನಲ್ಲಿ 37 ಮತ್ತು ಲದ್ದಾಕ್‌ ನಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ. ಜಮ್ಮು ಮತ್ತು ಲದ್ದಾಕ್‌ ವಾಸಿಗಳು ಜನತಾ ಪ್ರಾತಿನಿಧ್ಯದ ವಿಷಯದಲ್ಲಿ ತಮ್ಮ ವಿರುದ್ಧ ತಾರತಮ್ಯ ಇರುವುದನ್ನು ಆಕ್ಷೇಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಹೋಗಲಾಡಿಸುವುದೇ ಜಮ್ಮು ಕಾಶ್ಮೀರ ವಿಧಾನಸಭಾ ಕ್ಷೇತ್ರಗಳ ಹೊಸ ಪರಿಮಿತಿ ಪರಿಗಣನೆಯ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next