Advertisement

ಐಸಿಐಸಿಐ ಹೋಂ ಫೈನಾನ್ಸ್ ನಿಂದ ಐಟಿಆರ್ ಪುರಾವೆ ಇಲ್ಲದೆ ಗೃಹಸಾಲ

03:42 PM Sep 09, 2021 | Team Udayavani |

ಬೆಂಗಳೂರು: ಪ್ರಸ್ತುತ ಹಬ್ಬದ ಸಾಲಿನ ಹಿನ್ನೆಲೆಯಲ್ಲಿ ಐಸಿಐಸಿಐ ಹೋಮ್ ಫೈನಾನ್ಸ್ ಕಂಪನಿ (ಐಸಿಐಸಿಐ ಎಚ್‌ಎಫ್‌ಸಿ) ಐಟಿಆರ್ ಪುರಾವೆ ಇಲ್ಲದ ಆಸಕ್ತ ಗ್ರಾಹಕರು ಸೇರಿದಂತೆ ಎಲ್ಲ ಗ್ರಾಹಕರಿಗೆ ತಕ್ಷಣವೇ ಗೃಹ ಸಾಲ ನೀಡುವುದಾಗಿ ಘೋಷಿಸಿದೆ.  ಸೆ. 8 ಮತ್ತು 9ರಂದು ಬೆಂಗಳೂರಿನಲ್ಲಿರುವ ಐಸಿಐಸಿಐ ಹೋಮ್ ಫೈನಾನ್ಸ್ ನ ಯಾವುದೇ ಮೂರು ಶಾಖೆಗಳಿಗೆ ಭೇಟಿ ನೀಡುವ ಸಂಭಾವ್ಯ ಮನೆ ಖರೀದಿದಾರರು ಸ್ಥಳದಲ್ಲೇ ಮಂಜೂರಾತಿ ಪಡೆಯಬಹುದು ಮತ್ತು ಅವರ ಗೃಹ ಸಾಲದ ಅರ್ಜಿಯ ಲಾಗ್ ಇನ್ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಪಡೆಯಬಹುದು.

Advertisement

ಕಾರ್ಪೆಂಟರ್ಸ್, ಎಲೆಕ್ಟ್ರಿಷಿಯನ್ಸ್, ಟೈಲರ್ಸ್, ಪೇಂಟರ್‌ಗಳು, ವೆಲ್ಡರ್‌ಗಳು, ಆಟೋ ಮೆಕ್ಯಾನಿಕ್ಸ್ ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಮಾಲೀಕರು, ಕಿರಾಣಿ ಅಂಗಡಿ ಮಾಲೀಕರು ಮತ್ತಿತರ ಕೌಶಲ ವೃತ್ತಿಪರರು ಸ್ಥಳೀಯ ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಯಲ್ಲಿ ರದ್ದುಪಡಿಸಿದ ಖಾಲಿ ಚೆಕ್, ಕಳೆದ ಆರು ತಿಂಗಳ ಬ್ಯಾಂಕ್ ವಹಿವಾಟು ವಿವರಗಳು, ಪಾನ್ ಕಾರ್ಡ್, ಆಧಾರ್ ಕಾರ್ಡ್ ಸಲ್ಲಿಸಿ ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಯಿಂದ ಐಸಿಐಸಿಐ ಎಚ್‌ಎಫ್‌ಸಿ ಗೃಹ ಸಾಲಗಳನ್ನು ಪಡೆಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಐಟಿಆರ್ ಅನ್ನು ಸಲ್ಲಿಸಿರುವ ಗ್ರಾಹಕರು ಸಾಲವನ್ನು ಪಡೆಯಲು ಐಸಿಐಸಿಐ ಎಚ್‌ಎಫ್‌ಸಿ ಶಾಖೆಗೆ ಐಟಿಆರ್ ಪುರಾವೆಯನ್ನು ಕಡ್ಡಾಯವಾಗಿ ಅನ್ನು ತರಬೇಕು. ಐಸಿಐಸಿಐ ಎಚ್‌ಎಫ್‌ಸಿಯ ಒನ್-ಟೈಮ್ ಪಾವತಿ ಯೋಜನೆಯ ಮೂಲಕ ಗ್ರಾಹಕರು ಇಎಂಐ ಇಲ್ಲದೆ ಚಿನ್ನದ ಸಾಲವನ್ನು ಕೂಡಾ ಪಡೆಯಬಹುದು, ಇದು ಸಂಪೂರ್ಣ ಚಿನ್ನದ ಸಾಲದ ಮೊತ್ತವನ್ನು ಬಡ್ಡಿಯೊಂದಿಗೆ ಸಾಲದ ಅವಧಿಯ ಕೊನೆಯಲ್ಲಿ ಪಾವತಿಸಲು ಅನುವು ಮಾಡಿಕೊಡುತ್ತದೆ.

ಐಸಿಐಸಿಐ ಹೋಮ್ ಫೈನಾನ್ಸ್ ಶಾಖೆಗಳು ಈ ಕೆಳಗಿನ ವಿಳಾಸಗಳಲ್ಲಿವೆ: ಯಶವಂತಪುರ- 1 ನೇ ಮಹಡಿ ಸಂಖ್ಯೆ 165, 166 ಮಂಜುನಾಥ ಚೇಂಬರ್ಸ್ ಶಂಕರ್ ನಗರ, ಮುಖ್ಯ ರಸ್ತೆ ಮಹಾಲಕ್ಷ್ಮಿಪುರಂ, ವೈಟ್ ಫೀಲ್ಡ್ – 1 ನೇ ಮಹಡಿ, ನಂ. 181, ಸುಂದರಿ ಆರ್ಮಡೇಲ್ ಮತ್ತು ಜೆಪಿ ನಗರ- ಅಂಗಡಿ ಸಂಖ್ಯೆ 1316/ಸಿ, 2 ನೇ ಮಹಡಿ, 9 ನೇ ಕ್ರಾಸ್, ಸೆಂಟ್ರಲ್ ಬ್ಯಾಂಕ್ ಮೇಲೆ 9 ನೇ ಮುಖ್ಯರಸ್ತೆ.

ಐಸಿಐಸಿಐ ಹೋಮ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನಿರುದ್ಧ್ ಕಮಾನಿ ಈ ಬಗ್ಗೆ ಮಾತನಾಡಿ, “ಐಸಿಐಸಿಐ ಎಚ್‌ಎಫ್‌ಸಿಯ ಮಹಾ ಸಾಲದ ಹಬ್ಬವು ಆರ್ಥಿಕತೆಯ ಅನೌಪಚಾರಿಕ ವಿಭಾಗಗಳ ಗ್ರಾಹಕರಿಗೆ ಅಂದರೆ ಐಟಿಆರ್ ಪುರಾವೆ ಇರುವವರು ಅಥವಾ ಐಟಿಆರ್ ಪುರಾವೆ ಹೊಂದಿರದ ಸ್ವಯಂ ಉದ್ಯೋಗಿ ಅಥವಾ ನಗದು ವೇತನ ಪಡೆಯುತ್ತಿರುವವರು ಮತ್ತಿತರರಿಗೆ ಸಾ ಸೌಲಭ್ಯಗಳನ್ನು ಒದಗಿಸುತ್ತದೆ. ಬೆಂಗಳೂರಿನಲ್ಲಿರುವ ನಮ್ಮ ಎಲ್ಲ ಶಾಖೆಗಳು ಗೃಹ ಸಾಲಗಳ ಶೀಘ್ರ ಮಂಜೂರಾತಿಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಾಲ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿವೆ” ಎಂದು ವಿವರಿಸಿದ್ದಾರೆ.

Advertisement

ಐಸಿಐಸಿಐ ಹೋಮ್ ಫೈನಾನ್ಸ್ ತನ್ನ ಉದ್ಯೋಗಿಗಳು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಲಸಿಕೆ ಹಾಕಿರುವುದನ್ನು ಖಾತ್ರಿಪಡಿಸಿದೆ, ಏಕೆಂದರೆ ಇದು ಗ್ರಾಹಕರ ಮತ್ತು ಪಾಲುದಾರರಿಗಾಗಿ ಪ್ರತಿ ಐಸಿಐಸಿಐ ಎಚ್‌ಎಫ್‌ಸಿ ಶಾಖೆಗಳಲ್ಲಿ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅವರ ಆರೋಗ್ಯದ ಚಿಂತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಐಸಿಐಸಿಐ ಎಚ್‌ಎಫ್‌ಸಿ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಸುರಕ್ಷತೆಗಾಗಿ ಎಮ್‌ಎಚ್‌ಎ ಮತ್ತು ಎಂಒಎಚ್‌ಎಫ್‌ಡಬ್ಲ್ಯೂ ಕೋವಿಡ್ -19 ಅವಧಿಯಲ್ಲಿ ಎಲ್ಲ ಶಿಷ್ಟಾಚಾರಗಳನ್ನು ಅನುಸರಿಸುತ್ತಿದೆ ಮತ್ತು ಅದರ 157 ಶಾಖೆಗಳು ಮತ್ತು ಮಾರಾಟ ಕಚೇರಿಗಳಲ್ಲಿ ಸಾಂಕ್ರಾಮಿಕ ತಡೆಗೆ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next