Advertisement

ಹೋಂ ಐಸೋಲೇಷನ್‌ ಸೌಲಭ್ಯ ಪರಿಶೀಲನೆಗೆ ತಂಡ

04:14 PM May 19, 2021 | Team Udayavani |

ಚಾಮರಾಜನಗರ: ಸೋಂಕಿತರ ಮನೆಗಳಲ್ಲಿ ಪ್ರತ್ಯೇಕ ಸೌಲಭ್ಯಗಳಿಲ್ಲದಿದ್ದರೆ ಅಂತಹವರನ್ನು ಹೋಂಐಸೋಲೇಷನ್‌ನಿಂದ ಕೋವಿಡ್‌ ಕೇರ್‌ ಸೆಂಟರ್‌ಗೆ ಕಡ್ಡಾಯವಾಗಿ ದಾಖಲಿಸಲು ನಿರ್ಧರಿಸಲಾಗಿದೆ.ಇದಕ್ಕಾಗಿ ಪ್ರತಿ ತಾಲೂಕಿನ ತಹಶೀಲ್ದಾರ್‌, ತಾಪಂಇಒ, ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳ ತಂಡ ರಚಿಸಿ,ಕೋವಿಡ್‌ ಕೇರ್‌ ಕೇಂದ್ರಕ್ಕೆ ದಾಖಲಿಸುವ ಜವಾಬ್ದಾರಿನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್‌ ಸಮಿತಿ ಸಭೆನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯತಿಳಿಸಿದರು. ಈಗಾಗಲೇ ಎರಡು ಅಥವಾ ಮೂರುದಿನಗಳಿಂದ ಹೋಂ ಐಸೋಲೇಷನ್‌ನಲ್ಲಿರುವಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆದಾಖಲಿಸಬೇಕು. ಈ ಶುಕ್ರವಾರದೊಳಗೆ ಕೋವಿಡ್‌ಕೇರ್‌ ಕೇಂದ್ರಗಳಿಗೆ ಕರೆತರಲು ಅಧಿಕಾರಿಗಳ ತಂಡಕ್ಕೆಆದೇಶಿಸಲಾಗಿದೆ.

ಈಗಾಗಲೇ 7, 8 ದಿನಗಳಾಗಿದ್ದಲಿಕರೆತರುವ ಅವಶ್ಯಕತೆ ಇಲ್ಲ ಎಂದರು.ಜಿಲ್ಲೆಯಲ್ಲಿ ಖಾಸಗಿ ವೈದ್ಯರ ಬಳಿಗೆ ಬರುವರೋಗಿಗಳಿಗೆ ಸೋಂಕಿನ ಲಕ್ಷಣವಿದ್ದರೆ ಅವರನ್ನುಕೋವಿಡ್‌ ಪರೀಕ್ಷೆ ಮಾಡಿಸುವಂತೆ ಸೂಚಿಸಬೇಕು.ಕೋವಿಡ್‌ ಪರೀಕ್ಷೆಗೆ ಒಳಪಡಿಸದೇ ಐದಾರುದಿನಗಳುಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದ ಹಲವರು ಸ್ಯಾಚುರೇಷನ್‌ ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗಿಗಂಭೀರ ಪರಿಸ್ಥಿತಿಗೆ ಒಳಗಾಗುತ್ತಿರುವುದು ಗಮನಿಸಲಾಗಿದೆ. ಕ್ಲಿನಿಕ್‌ ಆಸ್ಪತ್ರೆಗಳ ಮುಂದೆ ರೋಗಿಗಳುಗುಂಪುಗೂಡಲು ಅವಕಾಶ ನೀಡಬಾರದು.

ಅಲ್ಲಿಯೇ ರ್ಯಾಟ್‌ ಮೂಲಕ ಕೋವಿಡ್‌ ಪರೀಕ್ಷೆಗೆ ಒಳಪಡಿಸಲುತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.ಈಗಾಗಲೇಕೋವಿಡ್‌ ನಿಯಮಕ್ಕೆ ತದ್ವಿರುದ್ಧವಾಗಿಹೆಚ್ಚು ಜನಸಂದಣಿಗೆ ಅವಕಾಶ ನೀಡಿದಯಳಂದೂರಿನ 8 ಖಾಸಗಿ ವೈದ್ಯರಿಗೆ ನೋಟಿಸ್‌ನೀಡಲಾಗಿದೆ. ಅವರು ನೀಡುವ ಉತ್ತರದ ಆಧಾರದಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.ಉಳಿದ ತಾಲೂಕುಗಳಲ್ಲೂ ಖಾಸಗಿ ವೈದ್ಯರ ವಿರುದ್ಧ ಇದೇ ಕ್ರಮ ಅನುಸರಿಸಲು ಟಾಸ್ಕ್ಫೋರ್ಸ್‌ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.ಕೆಲವು ಕಡೆ ಆಶಾ ಕಾರ್ಯಕರ್ತೆಯರು ಮನೆಮನೆ ಸಮೀಕ್ಷೆಗೆ ಭೇಟಿ ನೀಡುವ ಸಮಯದಲ್ಲಿ ಕೆಲವರು ಅಡ್ಡಿ ಪಡಿಸುತ್ತಿರುವ ಬಗ್ಗೆ ದೂರು ಬಂದಿದೆ.ಹೀಗಾಗಿ ಇವರ ತಂಡದ ಜೊತೆ ಪೊಲೀಸ್‌, ಹೋಂಗಾರ್ಡ್‌ಗಳನ್ನು ನಿಯೋಜಿಸುವಂತೆ ತಿಳಿಸಲಾಗಿದೆಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಹೋಂ ಐಸೋಲೇಷನ್‌ನಲ್ಲಿ 3,842ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಕೇರ್‌ಕೇಂದ್ರಗಳಲ್ಲಿ ಒಟ್ಟು 2,006 ಹಾಸಿಗೆಗಳು ಇವೆ. ಈಪೈಕಿ 400 ಹಾಸಿಗೆಗಳು ಮಾತ್ರ ಬಳಕೆಯಾಗುತ್ತಿವೆ.ಜಿಲ್ಲೆಯಲ್ಲಿ 328 ಆಕ್ಸಿಜನ್‌ ಪೂರೈಕೆ ಇರುವ ಹಾಸಿಗೆಗಳಿವೆ. ಜಿಲ್ಲೆಗೆ ಲಿಕ್ವಿಡ್‌ ಆಕ್ಸಿಜನ್‌ ಬರುತ್ತಿದೆ. ಅದರಜೊತೆಗೆ ಸಿಲಿಂಡರ್‌ಗಳಲ್ಲೂ ಆಕ್ಸಿಜನ್‌ ಪೂರೈಕೆಯಾಗುತ್ತಿದೆ.

Advertisement

ಆಕ್ಸಿಜನ್‌ ಸಾಂದ್ರಕಗಳು ಬಳಕೆಯಾಗುತ್ತಿವೆ. ಇನ್ನೂ10 ರಿಂದ 12 ದಿನಗಳಲ್ಲಿ ಪ್ರತಿ ನಿಮಿಷಕ್ಕೆ 1000ಲೀಟರ್‌ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯದಆಕ್ಸಿಜನ್‌ ಜನರೇಟರ್‌(ಪಿಎಸ್‌ಎ) ಬರಲಿದೆ ಎಂದರು.ಶಾಸಕರಾದ ಆರ್‌. ನರೇಂದ್ರ, ಎನ್‌. ಮಹೇಶ್‌,ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾಸಾರಾ ಥಾಮಸ್‌, ಹೆಚ್ಚುವರಿ ಜಿಲ್ಲಾಧಿಕಾರಿಕಾತ್ಯಾಯಿನಿದೇವಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next