Advertisement

ಚರ್ಚೆಗೆ ಗ್ರಾಸವಾದ ಮಧ್ಯರಾತ್ರಿ ಬಿಜೆಪಿ ಕಾರ್ಯಕರ್ತನ ಮನೆ ತಪಾಸಣೆ

09:51 AM Nov 18, 2017 | Team Udayavani |

ವಿಧಾನಸಭೆ: ಚಿಕ್ಕಮಗಳೂರಿನಲ್ಲಿ ರಾತ್ರಿ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರ ಮನೆಗೆ ಹೋಗಿ ತಪಾಸಣೆ ನಡೆಸುತ್ತಿರುವ ವಿಚಾರ ವಿಧಾನಸಭೆಯಲ್ಲಿ ಸ್ವಲ್ಪ ಹೊತ್ತು ಬಿಸಿಯೇರಿದ ಚರ್ಚೆಗೆ ಕಾರಣವಾಯಿತು. 

Advertisement

ಶೂನ್ಯ ವೇಳೆಯಲ್ಲಿ ಶುಕ್ರವಾರ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸಿ.ಟಿ.ರವಿ, ಚಿಕ್ಕಮಗಳೂರಿನಲ್ಲಿ ಗುರುವಾರ ರಾತ್ರಿ ಪೊಲೀಸರು ಬಿಜೆಪಿ ಕಾರ್ಯಕರ್ತರ ಮನೆಗೆ ಹೋಗಿ ಎಬ್ಬಿಸಿ ಅವರ ಫೋಟೋ ತೆಗೆಸಿಕೊಂಡು ಬಂದಿದ್ದಾರೆ. ಅವರೇನು ಡಕಾಯಿತರೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಈ ಘಟನೆಗೆ ಕಾರಣ ಗೊತ್ತಿಲ್ಲ. ಅಧಿಕಾರಿಗಳ ಜತೆ ಮಾತನಾಡಿ ಸೋಮವಾರ ಮಾಹಿತಿ ನೀಡುತ್ತೇನೆ. ಆದರೆ, ದತ್ತಮಾಲಾ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು
ಕೆಲವೊಂದು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಇದರಿಂದ ಆಕ್ರೋಶಗೊಂಡ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಅರವಿಂದ ಲಿಂಬಾವಳಿ, ಕೆ.ಜಿ. ಬೋಪಯ್ಯ, “ಹೇಳ್ಳೋರು ಕೇಳ್ಳೋರು ಇಲ್ಲವೇ? ಮಧ್ಯ ರಾತ್ರಿ ಮನೆಗೆ ನುಗ್ಗಿ ಫೋಟೋ ತೆಗೆಸಿಕೊಳ್ಳುವುದೆಂದರೆ ಏನರ್ಥ ‘ ಎಂದು ಕಿಡಿಕಿಡಿಯಾದರು. ಅಷ್ಟರಲ್ಲಿ ಸಚಿವರ ನೆರವಿಗೆ ಬಂದ ಸಿಎಂ ಸಿದ್ದರಾಮಯ್ಯ, ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮ ಕೈಗೊಳ್ಳ ಬೇಕು ಎಂಬುದು ಸಚಿವರ ಮಾತಿನ ಅರ್ಥ. ಪ್ರಕರಣದಲ್ಲಿ ಲೋಪ ಆಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಎಂದರು. 

ನನ್ನ ಏಳೂವರೆ ವರ್ಷದ ಸಭಾಪತಿ ಅವಧಿಯಲ್ಲಿ ಸದನದಲ್ಲಿ ಪ್ರಶ್ನೋತ್ತರ ಅವಧಿ ಸುಮಾರು ಎರಡೂ ಮುಕ್ಕಾಲು ತಾಸು
ಸುದೀರ್ಘ‌ವಾಗಿ ನಡೆದಿರುವುದು ದಾಖಲೆ. ಸದಸ್ಯರ ಪ್ರಶ್ನೆ, ಭಾವನೆಗಳ ವ್ಯಕ್ತಪಡಿಸಲು ಸಮಯ ಸಾಲದಾಗುತ್ತಿದ್ದು, ಸರ್ಕಾರ ಸದನ ನಡೆಸುವ ದಿನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅವಶ್ಯಕ.

 ●ಡಿ.ಎಚ್‌.ಶಂಕರಮೂರ್ತಿ, ಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next