Advertisement

ಗೃಹ ರಕ್ಷಕ ದಳ ಸಿಬ್ಬಂದಿ ಭತ್ಯೆ ಹೆಚ್ಚಳ

01:25 PM Dec 27, 2017 | Team Udayavani |

ಬೆಂಗಳೂರು: ಗೃಹ ರಕ್ಷಕರಿಗೆ ನೀಡುವ ದಿನ ಭತ್ಯೆಯನ್ನು 400ರಿಂದ 500 ರೂಗೆ ಹೆಚ್ಚಳ ಮಾಡಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಬೆಂಗಳೂರು ಉತ್ತರ ಜಿಲ್ಲೆಯ ಗೃಹ ರಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೃಹ ರಕ್ಷಕ ದಳದ ಗೌರವ ಸ್ವೀಕರಿಸಿ ಮಾತನಾಡಿದರು.

Advertisement

ಗೃಹ ರಕ್ಷಕರಿಗೆ ದಿನ ಭತ್ಯೆಯನ್ನು 500ರೂಗೆ ಹೆಚ್ಚಿಸುವ ಸಂಬಂಧ  ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ 30 ಸಾವಿರ ಮಂದಿ ಗೃಹ ರಕ್ಷಕರಿದ್ದಾರೆ. ಅವರಲ್ಲಿ 15 ಸಾವಿರ ಮಂದಿ ನಿತ್ಯ ಪೊಲೀಸರ ಜತೆ ಕಾನೂನು ಸುವ್ಯವಸ್ಥೆ, ಸಂಚಾರ ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸುತ್ತಿರುವ ರಕ್ಷಕರಿಗೆ ದಿನ ಭತ್ಯೆ ಹೆಚ್ಚಿಸುವುದನ್ನು ಬರುವ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದರು.

ರಾಜ್ಯದ ಭದ್ರತೆ ಕಾಪಾಡುವಲ್ಲಿ ಪೊಲೀಸರ ಜತೆ ಕೈ ಜೋಡಿಸಿರುವ ಗೃಹರಕ್ಷಕರಿಗೆ ಕರ್ತವ್ಯದ ವೇಳೆ ಪೊಲೀಸರಿಗೆ ನೀಡುವ ಸೌಲಭ್ಯ ನೀಡಲಾಗುವುದು., ಗೃಹ ರಕ್ಷಕ ದಳ ಸ್ವಂತ ಬ್ಯಾಂಡ್‌ ರಚಿಸಿಕೊಂಡಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗೃಹ ರಕ್ಷಕರಿಗೆ ಪೊಲೀಸರಿಗೆ ನೀಡುವಂತೆ ಕಾಲಕಾಲಕ್ಕೆ ತರಬೇತಿ ಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಮಹಾನಿರ್ದೇಶಕ ಎಂ.ಎನ್‌.ರೆಡ್ಡಿ, ಜಂಟಿ ಪೊಲೀಸ್‌ ಆಯುಕ್ತ ಡಾ ಡಿ.ಸಿ.ರಾಜಪ್ಪ, ಡಿಸಿಪಿ ಭೂಷಣ್‌ ಗುಲಾಬ್‌ ರಾವ್‌ ಬೊರಸೆ, ಕಮಾಂಡೆಂಟ್‌ ಅಮರ್‌ನಾಥ್‌ ಇತರುì ಇದ್ದರು. ಇದೇ ವೇಳೆ ಗೃಹರಕ್ಷಕದಳದ ಟೇಬಲ್‌ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next