Advertisement

ಕೆಜಿಎಫ್‌ ನ ಮುಂದಿನ ಭಾಗಗಳಲ್ಲಿ ರಾಕಿಭಾಯ್‌ ಪಾತ್ರವನ್ನು ಬೇರೆ ಹೀರೋ ಮಾಡಬಹುದು: ಹೊಂಬಾಳೆ ನಿರ್ಮಾಪಕ

04:13 PM Jan 09, 2023 | Team Udayavani |

ಬೆಂಗಳೂರು: ಸ್ಯಾಂಡಲ್‌ ವುಡ್‌ ಸಿನಿರಂಗದತ್ತ ತಿರುರಿ ನೋಡುವಂತೆ ಮಾಡಿದ ʼಕೆಜಿಎಫ್‌ʼ, ʼಕೆಜಿಎಫ್-2‌ʼ ಸಿನಿಮಾ ರಾಕಿಂಗ್‌ ಸ್ಟಾರ್‌ ಯಶ್‌ ಕೆರಿಯರ್‌ ನಲ್ಲಿ ದೊಡ್ಡ ಟರ್ನಿಂಗ್‌ ಪಾಯಿಂಟ್. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಕೆಜಿಎಫ್‌ ಸರಣಿ ಸೃಷ್ಟಿಸಿದ ಹವಾ ಒಂದೆರೆಡಲ್ಲ. ಕೆಜಿಎಫ್‌ ಚಾಪ್ಟರ್‌ -3 ಗಾಗಿ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ.

Advertisement

ಬ್ಯಾಟ್‌ ಟು ಬ್ಯಾಕ್‌ ಹಿಟ್‌ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್‌, ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ 3 ಸಾವಿರ ಕೋಟಿಯನ್ನು ಹೂಡಿಕೆ ಮಾಡುವುದಾಗಿ ಹೇಳಿದೆ. ವಿಜಯ್‌ ಕಿರಗಂದೂರು ಸಿನಿಮಾ ವೆಬ್‌ ಸೈಟ್‌ ವೊಂದರ ಜೊತೆ ಕೆಜಿಎಫ್‌ -3 ಸಿನಿಮಾದ ಬಗ್ಗೆ ಮಾತಾನಾಡಿದ್ದಾರೆ.

ಪ್ರಶಾಂತ್‌ ನೀಲ್‌ ಬ್ಯುಸಿ ಇರುವುದರಿಂದ ಕೆಜಿಎಫ್‌ -3 ಸಿನಿಮಾದ ಪ್ರೀ ಪ್ರೂಡಕ್ಷನ್ಸ್‌ ಕೆಲಸ ಆರಂಭವಾಗಿಲ್ಲ. ಶೀಘ್ರದಲ್ಲಂತೂ ಸಿನಿಮಾ ಆರಂಭವಾಗುವುದಿಲ್ಲ. ʼಕೆಜಿಎಫ್-3‌ʼ 2025 ರಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಕೆಜಿಎಫ್‌ -3  ರ ಬಳಿಕವೂ ಸಿನಿಮಾದ ಫ್ರಾಂಚೈಸಿ ಮುಂದುವೆರಯುವ ಸಾಧ್ಯತೆಯಿದೆ. 5 ಭಾಗಗಳ ಬಳಿಕವೂ ಕೆಜಿಎಫ್‌ ಬರಬಹುದು. ಜೇಮ್ಸ್‌ ಬಾಂಡ್‌ ಸರಣಿಯಲ್ಲಿ ನಾಯಕರು ಬದಲಾಗುವ ಹಾಗೆ ಕೆಜಿಎಫ್‌ ಮುಂದಿನ ಪಾರ್ಟ್‌ ಗಳಲ್ಲಿ  ರಾಕಿಭಾಯ್‌ ಪಾತ್ರವನ್ನು  ಬೇರೊಬ್ಬ ಹೀರೋ ನಿಭಾಯಿಸುವ ಸಾಧ್ಯತೆಯಿದೆ ಎಂದಿದ್ದಾರೆ.

202 ರಲ್ಲಿ ಸಿನಿಮಾ ತೆರೆಗೆ ಬರಬಹುದು ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next