ತೆಕ್ಕಟ್ಟೆ: ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ 19 ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಮಟ್ಟದ ಕಾರ್ಯಪಡೆ ಯ ನಿರ್ಣಯದಂತೆ ಕೋವಿಡ್‌ನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಿಂದ ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗಳಾದ ಜಪ್ತಿ, ಗುಡ್ಡೆಯಂಗಡಿ-ಗುಡ್ಡಟ್ಟು, ಹುಣ್ಸೆಮಕ್ಕಿ-ಮೊಳಹಳ್ಳಿ , ಬಿದ್ಕಲ್‌ಕಟ್ಟೆ ಕಾಲೇಜು ಸಮೀಪ ಹಾಗೂ ಹುಣ್ಸೆಮಕ್ಕಿ-ಬೇಳೂರು , ದಬ್ಬೆಕಟ್ಟೆ -ಜಪ್ತಿ, ಇಂಬಾಳಿ ಸೇರಿದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಜೂ.2 ರಂದು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
ಗ್ರಾಮದಲ್ಲಿ ಇಳಿಮುಖವಾದ ಸೋಂಕಿತರ ಸಂಖ್ಯೆ : ಈ ಹಿಂದೆ ಗ್ರಾ.ಪಂ. ವ್ಯಾಪ್ತಿಯಲ್ಲಿ 50 ಕ್ಕೂ ಅಧಿಕ ಕೋವಿಡ್ ಸೋಂಕಿತರನ್ನು ಒಳಗೊಂಡಿದ್ದು, ಜಪ್ತಿ ಪರಿಸರದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಪ್ರಸ್ತುತ ಸೋಂಕಿತರ ಸಂಖ್ಯೆ 30ಕ್ಕೆ ಇಳಿಮುಖವಾಗಿದೆ . ಈ ಕುರಿತು ಜನ ಜಾಗೃತರಾಗುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಮುಕ್ತ ಗ್ರಾಮವನ್ನಾಗಿಸುವಲ್ಲಿ ಕೈಜೋಡಿಸಬೇಕಾಗಿದೆ ಎನ್ನುವುದು ಗ್ರಾಮಮಟ್ಟದ ಕಾರ್ಯಪಡೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶ್ವದರ್ಜೆಯ ಸೇವೆ ದೊರೆಯುವಂತೆ ಕಾರ್ಯನಿರ್ವಹಿಸಿ:ಡಾ.ಕೆ.ಸುಧಾಕರ್
ವಿನಾಃ ಕಾರಣ ಸಂಚಾರ ನಡೆಸಿದವರಿಗೆ ದಂಡ : ಜೂ.2 ರಿಂದ ಐದು ದಿನಳ ಕಾಲ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಜೂ.2 ರಂದು ಗ್ರಾಮಸ್ಥರಿಗೆ ದೈನಂದಿನ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು ಮನೆಯಲ್ಲಿ ಸುರಕ್ಷಿತವಾಗಿ ಇರಲು ಗ್ರಾಮಮಟ್ಟದ ಕಾರ್ಯಪಡೆ ಸೂಚಿಸಲಾಗಿದ್ದು, ವಿನಾಃ ಕಾರಣ ಸಂಚಾರ ನಡೆಸಿದವರಿಗೆ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಸತೀಶ್ ಮಡಿವಾಳ, ಪಿಡಿಒ ಚಂದ್ರಕಾಂತ್ ಬಿ., ಗ್ರಾ.ಪಂ.ಸದಸ್ಯರಾದ ಅರುಣ್ ಕುಮಾರ್ ಹೆಗ್ಡೆ, ಚಂದ್ರಶೇಖರ್ ಹೆಗ್ಡೆ, ಗಣೇಶ್ ಶೆಟ್ಟಿ, ಸಂತೋಷ ಪೂಜಾರಿ,ದಿನೇಶ್ ಮೊಗವೀರ, ಕೋಟ ಪೊಲೀಸ್ ಸಿಬಂದಿ ಸುರೇಶ್ ಹೆಮ್ಮಾಡಿ, ಸೂರ್ಯ ಹಾಲಾಡಿ , ರಾಘವೇಂದ್ರ ಪ್ರಭು, ಚಂದ್ರಶೇಖರ್ ತೋಟಾಡಿಮನೆ, ಹಾಗೂ ಗ್ರಾ.ಪಂ.ಸಿಬಂದಿಗಳಾದ ಸಚಿನ್, ನಾಗರಾಜ,ಉಪಸ್ಥಿತರಿದ್ದರು.
ವರದಿ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ.