Advertisement

ಕಲ್ವಾ ಶ್ರೀ ಸದ್ಗುರು ಅಯ್ಯಪ್ಪ ಚಾರಿಟೆಬಲ್‌ ಟ್ರಸ್ಟ್‌ : ಗಣ್ಯರಿಗೆ ಗೌರವಾರ್ಪಣೆ

06:59 PM Jan 28, 2021 | Team Udayavani |

ಥಾಣೆ: ಕಲ್ವಾ ಖಾರೇಗಾಂವ್‌ ಇಲ್ಲಿನ ಶ್ರೀ ಸದ್ಗುರು ಅಯ್ಯಪ್ಪ ಚಾರಿಟೆಬಲ್‌ ಟ್ರಸ್ಟ್‌ ಇದರ 13ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಕೊರೊನಾ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಸಂಪನ್ನಗೊಂಡಿತು.

Advertisement

ಶ್ರೀ ಅಯ್ಯಪ್ಪ ಮಹಾಪೂಜೆಯು ಶ್ರೀಕಾಂತ್‌ ಭಟ್‌ ಅವರ ಪೌರೋಹಿತ್ಯದಲ್ಲಿ ರಾಜು ಗುರುಸ್ವಾಮಿ ಬೆಳ್ಮಣ್‌ ಅವರ ಮಾರ್ಗದರ್ಶನದಲ್ಲಿ ಜರಗಿತು. ಮಹಾಪೂಜೆಯಲ್ಲಿ ಪಾಲ್ಗೊಂಡ ಸ್ಥಳೀಯ ನಗರ ಸೇವಕ ಉಮೇಶ್‌ ಪಾಟೀಲ್‌, ನಗರ ಸೇವಕಿ ಅನಿತಾ ಗೌರಿ ಅವರನ್ನು ಶಾಲು ಹೊದೆಸಿ, ಪ್ರಸಾದವನ್ನಿತ್ತು ಗೌರವಿಸಲಾಯಿತು.

ಈ ಸಂದರ್ಭ ಶ್ರೀ ಸದ್ಗುರು ಅಯ್ಯಪ್ಪ ಚಾರಿಟೆಬಲ್‌ ಟ್ರಸ್ಟ್‌ ಇದರ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್‌ ಪೂಜಾರಿ, ಕೋಶಾಧಿಕಾರಿ ಸುರೇಶ್‌ ಪೂಜಾರಿ, ಸದಸ್ಯರಾದ ಲೋಕೇಶ್‌ ಕರ್ಕೇರ, ಬಾಲಕೃಷ್ಣ ರಾವ್‌, ಪ್ರಸನ್ನ ಶೆಟ್ಟಿ, ಶುಭಕರ್‌ ಪೂಜಾರಿ, ನವೀನ್‌ ಶೆಟ್ಟಿ, ವಿಶಾಲ್‌ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:“ಮಕ್ಕಳಿಗ್ಯಾಕವ್ವ ಮದುವೆ’ ಬೀದಿ ನಾಟಕ ಪ್ರದರ್ಶನ

ಮಹಾಪೂಜೆಯಲ್ಲಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಉಪಾಧ್ಯಕ್ಷ ದಯಾನಂದ ಆರ್‌. ಪೂಜಾರಿ, ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ನಾರಾಯಣ ಎಲ್‌. ಸುವರ್ಣ, ಘೋಡ್‌ಬಂದರ್‌ ಕನ್ನಡ ಅಸೋಸಿಯೇಶನ್‌ ಇದರ ಅಧ್ಯಕ್ಷ ಹರೀಶ್‌ ಡಿ. ಸಾಲ್ಯಾನ್‌ ಬಜಗೋಳಿ,

Advertisement

ಉದ್ಯಮಿಗಳಾದ ಪ್ರವೇಶ್‌ ಶೆಟ್ಟಿ, ಸೀತಾರಾಮ್‌ ಶೆಟ್ಟಿ, ರಾಘವ ಶೆಟ್ಟಿಗಾರ್‌ ಹಾಗೂ ಅನೇಕ ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.

ಬೆಳಗ್ಗೆ ಗಣಪತಿಹೋಮ, ಬಳಿಕ ಶರಣು ಘೋಷ, ಪಡಿಪೂಜೆ, ಶ್ರೀ ಅಯ್ಯಪ್ಪ ಮಹಾಪೂಜೆ ನಡೆಯಿತು. ಆಕರ್ಷಣೀಯ ಶ್ರೀ ಅಯ್ಯಪ್ಪ ದೇವರ ಮಂಟಪಕ್ಕೆ ರಾಜು ಗುರುಸ್ವಾಮಿ ಯವರು ಮಹಾಆರತಿ ಬೆಳಗಿಸಿದ ಬಳಿಕ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next