Advertisement
ಪ್ರಾರಂಭದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಧರ್ಮೋದಕ,ಏಕೋದಿಷ್ಟ, ಸಪಿಂಡಿಕರಣ,ಇತ್ಯಾದಿ ಕಾರ್ಯಕ್ರಮಗಳು ಪತಿ ಸುಬ್ರಹ್ಮಣ್ಯ ರಾವ್ ಬಾಳ, ಪುತ್ರಿ ತೃಪ್ತಿ ಎಸ್. ರಾವ್ ಮತ್ತು ಕುಟುಂಬಿಕರ ನೇತೃತ್ವದಲ್ಲಿ ಜರ ಗಿತು. ವೇದಮೂರ್ತಿ ಶ್ರೀಪತಿ ಭಟ್ ಕೊಡಂಜ ಅವರು ವಿಷ್ಣುಪೂಜೆ ನೇರವೇರಿಸಿ ತೀರ್ಥಪ್ರಸಾದ ನೀಡಿ ಹರಸಿದರು. ಭವಾನಿಶಂಕರ್ ಭಟ್ ಮತ್ತು ಮುರಳೀಧರ್ ಭಟ್ ಪೂಜೆಗೆ ಸಹಕರಿಸಿದರು.
Related Articles
Advertisement
ಮನೆಮನೆಯಲ್ಲಿ ಭಜನೆ ಮಾಡಿಸುವಲ್ಲಿ ಪ್ರೇರಕರಾದ ತಾರಾ ನಿಧನದಿಂದ ಇಂದು ಮನಮನಗಳಲ್ಲೂ ಅವರದ್ದೇ ಸ್ಮರಣೆ ಮಾಡುವಂತಾಗಿದೆ. ನಮ್ಮನ್ನಗಲಿ ಮರಣದಲ್ಲಿ ಒಂದಾದರೂ ನಕ್ಷತ್ರಪ್ರಾಯರಾಗಿದ್ದಾರೆ. ಯಾವುದೇ ಕೆಲಸವನ್ನೂ ಲವಲವಿಕೆಯಿಂದ ಮಾಡುತ್ತಾ ಎಲ್ಲರನ್ನೂ ಉತ್ತೇಜಿಸುವ ಸದ್ಗುಣ ಅನನ್ಯವಾದದ್ದು. ಪ್ರತಿಯೋಂದು ಕಲೆಗಳನ್ನೂ ಕರಗತಗೊಳಿಸಿ ಕಲಾಜೀವಿಯಾಗಿಯೇ ಬದುಕಿದ ಅಪರೂಪದ ಕಲಾವಿದೆ ಎಂದು ತಾರಾ ಜತೆ ನಟಿಸಿದ ಹಿರಿಯ ಕಲಾವಿದ, ಬಾಲಿವುಡ್ ನಟ ಹರೀಶ್ ವಾಸು ಶೆಟ್ಟಿ ಅವರು ನುಡಿನಮನಗೈದರು.
ಕಾರ್ಯಕ್ರಮದಲ್ಲಿ ರವಿ ರಾವ್, ಗಣೇಶ್ ಆಚಾರ್ಯ, ಡಾ| ವ್ಯಾಸರಾಯ ನಿಂಜೂರು, ಬಿ.ರಮಾನಂದ ರಾವ್ ಕಲೀನ, ಕೃಷ್ಣ ವೈ. ಆಚಾರ್ಯ, ಅವಿನಾಶ್ ಶಾಸ್ತ್ರಿ, ವಾಮನ ಹೊಳ್ಳ, ಪಿ. ಉಮೇಶ್ ರಾವ್, ಪಿ. ಸಿ. ಎನ್ ರಾವ್, ವೈ. ಗುರುರಾಜ್ ಭಟ್, ಅವಿನಾಶ್ ಶಂಕರ್ ಶಾಸ್ತ್ರಿ, ಪ್ರಶಾಂತ್ ಆರ್. ಹೆರ್ಲೆ, ಡಾ| ಸಹನಾ ಎ. ಪೋತಿ, ಚಂದ್ರಶೇಖರ್ ಭಟ್, ಐ. ಕೆ. ಪ್ರೇಮಾ ಎಸ್.ರಾವ್, ಯು. ರವೀಂದ್ರ ರಾವ್, ವಿದ್ಯಾ ಆರ್. ರಾವ್, ಕಡೆಕಾರು ಶ್ರೀಶ ಭಟ್, ವಿಷ್ಣು ಕಾರಂತ್ ಚೆಂಬೂರು, ಎ. ಬಿ. ರಾವ್ ಖಾರ್, ಕಲಾವಿದರಾದ ಪದ್ಮನಾಭ ಸಸಿಹಿತ್ಲು, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಶ್ರದ್ಧಾಂಜಲಿ ಅರ್ಪಿಸಿದರು.
ಆರಂಭದಲ್ಲಿ ಸಂಕೀರ್ತನೆ, ಭಾವಗೀತೆ, ಭಜನೆ ನಡೆಸಲಾಯಿತು. ಚಂದ್ರಾವತಿ ರಾವ್ ತನ್ನ ಕವಿತೆಯಲ್ಲಿ ತಾರಾ ಜೀವನ ವೈಶಿಷ್ಟÂತೆಗಳನ್ನು ಮೆಲುಕು ಹಾಕುತ್ತಾ ನೆರೆದ ತಾರಾಭಿಮಾನಿಗಳನ್ನು ಮೂಕಪ್ರೇಕ್ಷಕರನ್ನಾಗಿಸಿದರು. ಬಿಎಸ್‌ಕೆಬಿ ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಕೆ. ಪೋತಿ ಕಾರ್ಯಕ್ರಮ ನಿರ್ವಹಿಸಿದರು. ತಾರಾ ಎಸ್.ರಾವ್ ಕೃತಿ ಪ್ರಕಟ ತಾರಾ ಎಸ್. ರಾವ್ ಅವರ ಸಿದ್ಧಿ-ಸಾಧನೆಗಳ ಬಗ್ಗೆ ಭವಿಷ್ಯತ್ತಿನ ಪೀಳಿಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಸಾಹಿತ್ಯ ಬಳಗ ಮುಂಬಯಿ ಕೃತಿಯೊಂದನ್ನು ಪ್ರಕಟಿಸಲು ನಿರ್ಧರಿಸಿದೆ. ತಾರಾ ಅವರ ಬಗೆಗಿನ ಚಿತ್ರ ಲೇಖನ, ಅವರ ಬಗೆಗಿನ ಒಡನಾಟದ ಒಂದಷ್ಟು ವಿಚಾರಗಳು ಸಹೃದಯಿಗಳು ನೀಡಿದಲ್ಲಿ ಕೃತಿಯಲ್ಲಿ ಪ್ರಕಾಶಿಸಲಾಗುವುದು. ವಿವರಗಳಿಗಾಗಿ ಮನುಶ್ರೀ, ಸಿ-42/2/2, ಸೆಕ್ಟರ್ 29, ವಾಶಿ, ನವಿಮುಂಬಯಿ ಅಥವಾ ದೂರವಾಣಿ 022-27880671, 9969533123 ಸಂಖ್ಯೆ ಗಳನ್ನು ಸಂಪರ್ಕಿಸಬಹುದು ಎಂದು ಎಚ್. ಬಿ. ಎಲ್. ರಾವ್ ಅವರು ತಿಳಿಸಿದ್ದಾರೆ. ಚಿತ್ರ-ವರದಿ : ರೋನ್ಸ್ ಬಂಟ್ವಾಳ್