Advertisement

ಉಮಾಮಹೇಶ್ವರ ಸನ್ನಿಧಿಯಲ್ಲಿ ದೇವೇಗೌಡರ ಕುಟುಂಬದಿಂದ ಹೋಮ

06:29 AM May 05, 2019 | Team Udayavani |

ಚಿಕ್ಕಮಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ಕೊಪ್ಪ ತಾಲೂಕಿನ ಕಮ್ಮರಡಿ ಸಮೀಪದ ಕುಡೆ°ಲ್ಲಿನ ಉಮಾಮಹೇಶ್ವರ ದೇವಸ್ಥಾನದಲ್ಲಿ ಶನಿವಾರ ಹೋಮ ಕೈಗೊಂಡಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಪತ್ನಿ ಚನ್ನಮ್ಮ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಎಚ್‌.ಡಿ.ರೇವಣ್ಣ ಹೋಮದಲ್ಲಿ ಪಾಲ್ಗೊಂಡಿದ್ದರು.

Advertisement

ಹೋಮ ನಡೆಸುವ ಹಿನ್ನೆಲೆಯಲ್ಲಿ ಶುಕ್ರವಾರವೇ ಇಲ್ಲಿಗೆ ಆಗಮಿಸಿದ್ದ ದೇವೇಗೌಡರ ಕುಟುಂಬದ ಸದಸ್ಯರು, ತಲವಾನೆ ರಂಗನಾಥ್‌ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಶನಿವಾರ ಬೆಳಗ್ಗೆ 8 ಗಂಟೆಗೆ ದೇವಾಲಯಕ್ಕೆ ಆಗಮಿಸಿದ ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ದೇವಾಲಯದಲ್ಲಿ ನಡೆದ ಶತ ರುದ್ರಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಪೂರ್ಣಾಹುತಿಯೊಂದಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೋಮ ಸಂಪನ್ನಗೊಂಡಿತು. ನಂತರ ಅಲ್ಲಿಯೇ ಪ್ರಸಾದ ಸ್ವೀಕರಿಸಿ, ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ತೆರಳಿದರು. ಶುಕ್ರವಾರ ಆರಂಭಗೊಂಡ ಹೋಮದ ಸಂಕಲ್ಪ ಅಮಾವಾಸ್ಯೆ ದಿನ ಪೂರ್ಣಗೊಂಡಿರುವುದು ಕುತೂಹಲ ಮೂಡಿಸಿದೆ.

ಮುಂದುವರಿದ ನಿರ್ಬಂಧ: ಮುಖ್ಯಮಂತ್ರಿಯವರ ಖಾಸಗಿ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಸುಮಾರು 200 ಮೀ.ದೂರದವರೆಗೆ ಶನಿವಾರವೂ ಕೂಡ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು. ದೇವಸ್ಥಾನದ ಬಳಿ ಪೊಲೀಸರು ನಿಗದಿತ ವ್ಯಕ್ತಿಗಳನ್ನು ಹೊರತುಪಡಿಸಿ ಬೇರೆಯವರನ್ನು ಒಳ ಬಿಡುತ್ತಿರಲಿಲ್ಲ. ಮಾಧ್ಯಮಗಳನ್ನೂ ದೂರ ಇಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next