Advertisement
ಶನಿವಾರ ಕುವೆಂಪು ಕನ್ನಡ ಭವನದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ 4ನೇ ದಾವಣಗೆರೆ ಸಾಂಸ್ಕೃತಿಕ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ದೇಶದ ಜನರ ಸ್ಥಿತಿ ಸುಧಾರಣೆಗೆ ಆ ದೇಶದರಾಜಕಾರಣಿಗಳು ಮಾತ್ರವಲ್ಲ ಅಲ್ಲಿನ ಜನರೂ ಸಹ ಕಾರಣರಾಗುತ್ತಾರೆ.
Related Articles
Advertisement
ಸಿನಿಮಾ, ಧಾರವಾಹಿಗಳು ಇಂದು ಸಾಂಸ್ಕೃತಿಕ ಕಾರ್ಯಕ್ರಮಗಳಾಗಿವೆ. ಆದರೆ, ಈ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೆ, ಮನಸ್ಸು, ಸಮಾಜ ಒಡೆಯುವಕೆಲಸ ಮಾಡುತ್ತಿವೆ. ಕಟ್ಟುವ ಕೆಲಸ ಮಾಡುತ್ತಿಲ್ಲ. ಇನ್ನು ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ಜನರನ್ನು ಮೂರ್ಖರನ್ನಾಗಿಸುತ್ತಿವೆ.
ಬೆಳ್ಳಂಬೆಳಿಗ್ಗೆ ಬರುವ ಜ್ಯೋತಿಷಿಗಳು ಮೂಢನಂಬಿಕೆ ಬಿತ್ತುತ್ತಿದ್ದಾರೆ. ನಾಗರಿಕರು ಪ್ರಜ್ಞಾವಂತರಾದರೆ ಇವನ್ನು ಸಾರಸಗಟಾಗಿ ತಿರಸ್ಕರಿಸಬೇಕು. ಒಳ್ಳೆಯ ವಿಷಯಗಳನ್ನು ಹುಡುಕಿಕೊಳ್ಳಬೇಕು ಎಂದು ಅವರು ಕರೆಕೊಟ್ಟರು.ಟಿವಿ, ಸಿನಿಮಾ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ.
ಜನರಲ್ಲಿ ಜಾಗೃತಿ ಮೂಡಿಸಿ, ಸರಿ ದಾರಿಗೆ ತರಬೇಕು. ದೇಶದಲ್ಲಿರುವ ಸ್ಥಿತಿ ಅರಿತು ಸಮಾಜದ ಸ್ವಾಸ್ಥÂ ಕಾಪಾಡಲು ಕೆಲಸ ಮಾಡಬೇಕು. ಇಂದುನಮ್ಮ ದೇಶದಲ್ಲಿ ಸಮರ್ಥ ವಿಪಕ್ಷ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಜನರನ್ನೇ ವಿಪಕ್ಷಗಳನ್ನಾಗಿ ರೂಪಿಸಬೇಕಿದೆ ಎಂದು ಅವರು ಹೇಳಿದರು.
ಗುಡಿ ಕಟ್ಟುವುದರಿಂದ ದೇಶ ಉದ್ಧಾರ ಆಗುವುದಿಲ್ಲ. ಈ ಹಿಂದೆ ಕಟ್ಟಿರುವ ಬೆಲೆ ಕಟ್ಟಲಾಗದ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕಿದೆ. ಅವುಗಳು ನಮ್ಮ ಪೂರ್ವಜರಕುರುಹು, ಮುಂದಿನ ಪೀಳಿಗೆಯ ದಾರಿದೀಪ. ಇದನ್ನು ಅರ್ಥಮಾಡಿಕೊಂಡು ಹೊಸ ಗುಡಿ ಕಟ್ಟುವ ಬದಲು ಇರುವ ಸ್ಮಾರಕ ಉಳಿಸಿಕೊಳ್ಳಲು ನಾವು ಮುಂದಾಗಬೇಕು ಎಂದು ಅವರು ಹೇಳಿದರು.
ಪ್ರೊ. ಮಲ್ಲಿಕಾರ್ಜುನ ಹಲಸಂಗಿ, ಡಾ| ಎನ್. ವಸುಧೇಂದ್ರ, ಮಧು ತೊಗಲೇರಿ, ಜ್ಯೋತಿ ಕುಕ್ಕವಾಡ ವೇದಿಕೆಯಲ್ಲಿದ್ದರು. ಹೊಸ ಹಾದಿ ಹೊಸ ಪಯಣ, ಅಪರಾಧಿ ಯಾರು? ನಾಟಕ ಪ್ರದರ್ಶನಗೊಂಡವು.