Advertisement

Hollywood: 2025ರ ಕ್ರಿಸ್‌ಮಸ್‌ಗೆ ಅವತಾರ್‌-3

09:14 PM Dec 14, 2023 | Team Udayavani |

ಭಾರತ ಸೇರಿದಂತೆ ಜಗತ್ತಿನಾದ್ಯಂತ ಪ್ರಸಿದ್ಧಿಗಳಿಸಿರುವ ಖ್ಯಾತ ಹಾಲಿವುಡ್‌ ಚಿತ್ರ ಅವತಾರ್‌ನ 3ನೇ ಆವೃತ್ತಿ 2025ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ಸಿನಿಮಾ ನಿರ್ದೇಶಕ ಜೇಮ್ಸ್‌ ಕ್ಯಾಮರಾನ್‌ ತಿಳಿಸಿದ್ದಾರೆ. ಅಲ್ಲದೇ, ಅವತಾರ್‌-1 ಮತ್ತು 2ರಲ್ಲಿ ಜನರಿಂದ ಮೆಚ್ಚುಗೆ ಗಳಿಸಿದ್ದ ನಟಿ ಕೇಟ್‌ ವಿನ್‌ಸ್ಲೆಟ್‌ ಅವರು ರೊನಾಲ್‌ ಪಾತ್ರದಲ್ಲಿ ಅವತಾರ್‌-3ರಲ್ಲೂ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂದೂ ಜೇಮ್ಸ್‌ ಸುಳಿವು ನೀಡಿದ್ದಾರೆ.

Advertisement

ಈಗಾಗಲೇ ಸಿನಿಮಾ ಚಿತ್ರೀಕರಣದ ಬಹುಭಾಗ ಪೂರ್ಣಗೊಂಡಿದೆ. ಅಲ್ಲದೇ, ಅವತಾರ್‌-4ಕ್ಕೆ ಸಂಬಂಧಿಸಿದ ಚಿತ್ರೀಕರಣವನ್ನೂ ಜತೆಯಲ್ಲೇ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2025ರ ಕ್ರಿಸ್‌ಮಸ್‌ ವೇಳೆಗೆ ಅವತಾರ್‌ ತೆರಕಾಣುವುದು ಪಕ್ಕಾ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next