ಹೊಳಲ್ಕೆರೆ: ಹೊಳಲ್ಕೆರೆ ಪಟ್ಟಣ ಪಂಚಾಯತ್ 2021ರ ಜನವರಿ 1 ರಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, ಪಟ್ಟಣದ ಬಹು ಕಾಲದ ಕನಸು ನನಸಾಗಿದೆ. ಶಾಸಕ ಎಂ. ಚಂದ್ರಪ್ಪ ಪುರಸಭೆಯನ್ನಾಗಿಸುವಲ್ಲಿ ಅಹರ್ನಿಶಿ ಶ್ರಮಿಸಿ ಯಶಸ್ವಿಯಾಗಿದ್ದಾರೆ.
ಹಲವಾರು ದಶಕಗಳಿಂದ ಪಟ್ಟಣದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಕೊರಗು ಜನರಲ್ಲಿತ್ತು.ಒಂದಿಷ್ಟು ಸರಕಾರಿ ಕಟ್ಟಡಗಳು ಬೃಹದಾಕಾರವಾಗಿ ತಲೆ ಎತ್ತಿದ್ದನ್ನು ಬಿಟ್ಟರೆ ಜನರ ನಿರೀಕ್ಷೆಯಂತೆಪ್ರಗತಿ ಸಾಧಿಸುವಲ್ಲಿ ಪಟ್ಟಣ ಪಂಚಾಯತ್ ವಿಫಲವಾಗಿತ್ತು. ರಸ್ತೆ, ಚರಂಡಿ ಬೆಳಕಿನ ಸೌಲಭ್ಯ, ಕುಡಿಯವ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇತ್ತು. ಪಪಂಗೆ ಸರಕಾರದಿಂದನಿರೀಕ್ಷಿತ ಅನುದಾನ ದೊರೆಯದೆ ಅಭಿವೃದ್ಧಿ ಪ್ರಸಕ್ತ ವರ್ಷ ಜ. 1ರಿಂದ ಪುರಸಭೆಯಾಗಿದ್ದು, 14.437 ಚದರ ಮೀಟರ್ ವ್ಯಾಪ್ತಿ ಹೊಂದಿದೆ. ಈಗ ಪುರಸಭೆಯ ವ್ಯಾಪ್ತಿಗೆ 9 ಹಳ್ಳಿಗಳು ಸೇರಿಕೊಂಡಿವೆ.
ತಾಲೂಕಿನ 2011ನೇ ಸಾಲಿನ ಜನಗಣತಿ ಪ್ರಕಾರ ಪಟ್ಟಣದ ಈಗಿನ ಜನಸಂಖ್ಯೆ 15,783 ಇದೆ. ಪುರಸಭೆಆಗಲು ಬೇಕಾದ ಜನಸಂಖ್ಯೆ 20,000. ಹಾಗಾಗಿ ಪಟ್ಟಣದ ಸಮಿಪದ ಗ್ರಾಮಗಳಾದ ಹಳ್ಳೇಹಳ್ಳಿ ಲಂಬಾಣಿಹಟ್ಟಿ, ಕುಡಿನೀರುಕಟ್ಟೆ, ಕುಡಿನೀರುಕಟ್ಟೆ ಲಂಬಾಣಿ ಹಟ್ಟಿ, ಜೈಪುರ, ಜಯಂತಿ ನಗರ, ಗುಂಡೇರಿ ಕಾವಲ್, ಹೊಳಲ್ಕೆರೆ ಲಂಬಾಣಿಹಟ್ಟಿ, ಚೀರನಹಳ್ಳಿ, ಕಂಬದೇವರಹಟ್ಟಿ ಗಳನ್ನು ಪುರಸಭೆಗೆ ಸೇರ್ಪಡೆ ಮಾಡಿ ಕೊಳ್ಳಲಾಗಿದೆ. ಇದರಿಂದಾಗಿ ಪುರಸಭೆಯಾಗಿಪರಿವರ್ತನೆಯಾಗಲು ಬೇಕಾದ 21,746 ಜನಸಂಖ್ಯೆಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತಲಿನ ಕಂದಾಯ ಗ್ರಾಮಗಳ ಜಮೀನು ಸೇರಿದಂತೆ ವಿವಿಧ ಸ್ವತ್ತುಗಳನ್ನು ಪುರಸಭೆಯ ವ್ಯಾಪ್ತಿಗೆ ಸೇರಿಸುವ ಮೂಲಕ ನಿರ್ಣಯ ಅಂಗೀಕರಿಸಲಾಗಿದೆ. 10 ಕೋಟಿ ರೂ. ಅನುದಾನದಲ್ಲಿ ಪುರಸಭೆ ಕಟ್ಟಡ ನಿರ್ಮಾಣಗೊಳ್ಳಲಿದ್ದು, ನೀಲನಕಾಶೆ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಲಿದೆ.
ಒಟ್ಟಿನಲ್ಲಿ ಪಟ್ಟಣ ಪಂಚಾಯತ್‌ದಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು ಪಟ್ಟಣದ ನಾಗರಿಕರಲ್ಲಿ ಸಂತಸ ಮೂಡಿಸಿದೆ. ಇನ್ನಾದರೂಅಭಿವೃದ್ಧಿ ಕಾರ್ಯಗಳಿಗೆ ವೇಗವಾಗಿ ಚಾಲನೆ ದೊರೆಯಲಿ ಎಂಬುದು ಎಲ್ಲರ ಅಪೇಕ್ಷೆ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಪಟ್ಟಣ ಪಂಚಾಚಾಯತ್‌ಗೆ ಬರುತ್ತಿರಲಿಲ್ಲ.ಇದರಿಂದ ಪಟ್ಟಣದ ಅಭಿವೃದ್ಧಿ ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ಇತ್ತು. ಶಾಸಕರು ಪುರಸಭೆ ಮಾಡುವ ಮೂಲಕ ಇಲ್ಲಿನ ಜನರಿಗೆ ಹೊಸ ಭರವಸೆ ನೀಡಿದ್ದಾರೆ. ಹೊಳಲ್ಕೆರೆಯಲ್ಲಿ ಅಭಿವೃದ್ಧಿ ಪರ್ವ ಆರಂಭಕ್ಕೆ ಅಡಿಗಲ್ಲು ಹಾಕಿದಂತಾಗಿದೆ.
-ಆರ್.ಎ. ಅಶೋಕ್, ಪುರಸಭೆ ಅಧ್ಯಕ್ಷರು
ಹೊಳಲ್ಕೆರೆ ಪಟ್ಟಣವನ್ನು ಪುರಸಭೆಯನ್ನಾಗಿ ಮಾಡಲು ಸಾಕಷ್ಟು ಸಮಯ ಬೇಕು. ಅದಕ್ಕೆ ಪೂರಕ ದಾಖಲೆಯನ್ನು ಸಿದ್ಧಪಡಿಸಿಸಲ್ಲಿಸಿದ ಒಂದೇ ವಾರದಲ್ಲಿ ಸರಕಾರದಿಂದಆದೇಶ ಹೊರಡಿಸಲು ಶಾಸಕ ಎಂ. ಚಂದ್ರಪ್ಪ ಸಾಕಷ್ಟು ಶ್ರಮಿಸಿದ್ದಾರೆ. ಅವರು ಹಗಲು ರಾತ್ರಿಎನ್ನದೆ ವಿಧಾನಸೌಧ ಪಡಸಾಲೆಯಲ್ಲಿ ಕೆಲಸ ಮಾಡಿದ ಪರಿಣಾಮ ಇಂದು ಪುರಸಭೆಯಾಗಿದೆ.
-ಎ. ವಾಸಿಂ, ಪುರಸಭೆ ಮುಖ್ಯಾಧಿಕಾರಿ
-ಎಸ್. ವೇದಮೂರ್ತಿ