Advertisement
ಹುಣ್ಣಿಮೆ ಮರು ದಿನವಾದ ಶುಕ್ರವಾರ ಜಿಲ್ಲೆಯ ಬಹುತೇಕ ನಗರ ಪ್ರದೇಶಗಳಲ್ಲಿ ಎಲ್ಲೆಲ್ಲೂ ರಂಗಿನಾಟದ ಮೋಜೇ ಮೋಜು. ಹೆಣ್ಣು-ಗಂಡು, ಮಕ್ಕಳು-ವೃದ್ಧರು ಎನ್ನದೇ ಸ್ನೇಹಿತರು, ಆಪ್ತರಿಗೆಲ್ಲ ವೈವಿದ್ಯಮಯ ಬಣ್ಣಗಳನ್ನು ಎರಚಿಕೊಂಡು ಕುಣಿದು, ಕುಪ್ಪಳಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು. ಹಲವು ಕಡೆಗಳಲ್ಲಿ ಹಲಗೆ ನಾದದ ಜೊತೆಗೆ ಜಾನಪದಗಳಲ್ಲಿ ಜಾನಪದರು ವರ್ಣಿಸಲ್ಪಟ್ಟಿರುವ ಹಲವು ಹಾಡುಗಳನ್ನು ಕೊಂಚ ಕೊಂಚ ಹಾಡಿಕ ಕುಣಿದರು.
Related Articles
Advertisement
ಇನ್ನು ನಗರದ ಹಲವು ಕಡೆಗಳಲ್ಲಿ ಕೃತಕ ಹೊಂಡ ಹಾಗೂ ಜಲ ಸಿಂಚನ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ವೇದಿಕೆ ಸ್ಥಳದಲ್ಲೇ ವಿವಿಧ ಹಾಡುಗಳ ಸಂಗೀತ ನಿನಾದ ತೂರಿ ಬರುತ್ತಿತ್ತು. ಇಂಥ ಕಡೆಗಳಲ್ಲೆಲ್ಲ ಹೊರ ಪ್ರದೇಶದಿಂದ ನಗರಕ್ಕೆ ಶಿಕ್ಷಣಕ್ಕಾಗಿ ಬಂದಿರುವ ವಿವಿಧ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣದ ಜೊತೆಗೆ ಮಣ್ಣಿನ ನೀರಲ್ಲೂ ಮಿಂದೆದ್ದು ವಿಶಿಷ್ಟ ಅನುಭವ ಪಡೆದರು.
ಹೋಳಿ ಹಬ್ಬದ ನಿಮಿತ್ತ ಹಿಂದೂ ಸಂಪ್ರದಾಯದ ಮನೆಗಳಲ್ಲಿ ಹೋಳಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿದ್ದ ಮಹಿಳೆಯರು, ದಹನಕ್ಕೆ ಮುನ್ನ ಮನ್ಮಥನಿಗೆ ನೈವೇದ್ಯ ಮಾಡಿದರು. ಹಲವರು ಹೋಳಿ ಹಬ್ಬಕ್ಕೆ ಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸಿ ಸಿಹಿ ಊಟ ಹಾಕಿಸಿ ರಂಗಿನ ಆಟವನ್ನು ಸ್ಮರಣಾರ್ಹ ಮಾಡಿಕೊಂಡರು.
ಸಂಭ್ರಮ ಹೋಳಿ ವಿಜಯಪುರ: ಹೋಳಿ ಹಬ್ಬದ ವೇದಿಕೆಯಲ್ಲಿ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ ಯುವತಿಯರ ಸಮೂಹ. ವಿಜಯಪುರ: ನಗರದ ಬಿಎಲ್‌ಡಿಇ ರಸ್ತೆಯಲ್ಲಿ ಹೋಳಿ ಹಬ್ಬಕ್ಕಾಗಿ ನಿರ್ಮಿಸಿರುವ ಕೃತಕ ಹೊಂಡಗಳಲ್ಲಿ ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮಿಂದೆದ್ದ ಪರಿ. ನಾಲತವಾಡ: ಬಸವೇಶ್ವರ ನಗರದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಬಾಲಕಿಯರು. ತಾಳಿಕೋಟೆ: ಹೋಳಿ ಹುಣ್ಣಿಮೆಯ ನಿಮಿತ್ತ ಪಟ್ಟಣದಲ್ಲಿ ರತಿ ಮನ್ಮಥರ ಮೂರ್ತಿ ಮೆರವಣಿಗೆ ಮಾಡಲಾಯಿತು.
ದೇವರಹಿಪ್ಪರಗಿ: ಹೋಳಿ ನಿಮಿತ್ತ ನಡೆದ ಅಣಕು ಶವಯಾತ್ರೆ ಜನರ ಗಮನ ಸೆಳೆಯಿತು.
ದೇವರಹಿಪ್ಪರಗಿ: ಕಾಮದಹನದ ಮುಂದೆ ಬಣ್ಣದಾಟದಲ್ಲಿ ನಿರತರಾದ ಯುವಕರು ಬೊಬ್ಬೆ ಹಾಕಿ ಸಂಭ್ರಮಿಸಿದರು.
ಹೂವಿನಹಿಪ್ಪರಗಿ: ಪಟ್ಟಣದಲ್ಲಿ ಬಣ್ಣದಾಟದಲ್ಲಿ ಮಿಂದೆದ್ದ ಚಿಣ್ಣರು.
ಸಿಂದಗಿ: ಪಟ್ಟಣದಲ್ಲಿ ಹೆಣ್ಣು ಮಕ್ಕಳು, ಯುವಕರು, ಹಿರಿಯರು ಹಾಗೂ ಮಹಿಳೆಯರು ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಬಸವನಬಾಗೇವಾಡಿ: ಗಣಪತಿ ಚೌಕ್‌ದಲ್ಲಿ ಕಾಮದಹನಕ್ಕೆ ಸಿದ್ದಗೊಂಡ ಕಾಮಣ್ಣ.
ವಾಡಿ ತಾಳಿಕೋಟೆ: ಪಟ್ಟಣದಲ್ಲಿ ಹೋಳಿಹುಣ್ಣಿಮೆ ನಿಮಿತ್ತ ಕಾಮದಹನಮಾಡುವ ಮೂಲಕ ಸ್ನೇಹಿತ ಮಿತ್ರರಿಗೆ ಹಿತೈಷಿಗಳಿಗು ಚನದೆಸಿ,ನೆದ ಆಡಿದರು. ಕಲ ಯುವಕರು ದ್ವಿಚಕ್ರ ಹಾಗೂ ಲಘು ವಾಹನಗಳಲ್ಲಿ ತೆರಳಿ ವಿವಿಧ ಬಣ್ಣಗಳನ್ನು ಎರಚುತ್ತ ಸಂಭ್ರಮಿಸುತ್ತಿದ್ದರು. ಬಣ್ಣದ ಆಟದಲ್ಲಿ ತೊಡಗಿರುವ ಗುಂಪಿನ ಯುವಕರಿಗೆ ಹಲವುಕಡೆಗಳಲ್ಲಿ ವ್ಯಾಪಾರಿಗಳು ಹೋಳಿ ಹಬ್ಬಕ್ಕೆ ಉತ್ತೇಜನ ನೀಡಲುಹಣ, ಸಿಹಿ ನೀಡಿ ಪ್ರೋತ್ಸಾಹಿಸಿದರು. ಕೆಲವು ವ್ಯಾಪಾರಿಗಳು ಓಕುಳಿ ಹಬ್ಬದ ನಿಮಿತ್ತನಗರದ ಹಲವುಕಡೆಗಳಲ್ಲಿ ಪಡೆದರು. ಹೋಳಿ ಹಬ್ಬದ ನಿಮಿತ್ತ ಹಿಂದೂ ಸಂಪ್ರದಾಯದ ಮನೆಗಳಲ್ಲಿ ಹೋಳಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿದ್ದಮಹಿಳೆಯರು, ದಹನಕ್ಕೆ ಮುನ್ನ ಮನ್ಮಥನಿಗೆ ನೈವೇದ್ಯ ಮಾಡಿದರು. ಹಲವರು ಹೋಳಿ ಹಬ್ಬಕ್ಕೆಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸಿ ಸಿಹಿ ಊಟ ಹಾಕಿಸಿ ರಂಗಿನ ಆಟವನ್ನು ಸ್ಮರಣಾರ್ಹ ಮಾಡಿಕೊಂಡರು.